• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಜೊತೆ 30 ನಿಮಿಷ ಫೋನ್ ಮಾತುಕತೆ ನಡೆಸಿದ ಮೋದಿ

|
   ಮೋದಿಗೆ ಕರೆ ಮಾಡಿ 30 ನಿಮಿಷ ಮಾತನಾಡಿದ ಟ್ರಂಪ್..? | Narendra Modi

   ನವದೆಹಲಿ, ಆಗಸ್ಟ್ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಮೂವತ್ತು ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

   ಇಬ್ಬರೂ ನಾಯಕರು ದ್ವಿಪಕ್ಷೀಯ ವಿಚಾರಗಳನ್ನು ಚರ್ಚೆ ನಡೆಸಿದ್ದು, ಮೋದಿ ಅವರು, ಒಸಾಕಾದಲ್ಲಿ ನಡೆದಿದ್ದ ಜಿ-20 ಶೃಂಗ ಸಭೆಯಲ್ಲಿ ಇಬ್ಬರ ನಡುವೆ ನಡೆದ ಮಾತುಕತೆಗಳ ಬಗ್ಗೆ ಟ್ರಂಪ್ ಅವರಿಗೆ ನೆನಪು ಮಾಡಿದರು.

   'ಹಲೋ ಡೊನಾಲ್ಡ್ ಟ್ರಂಪ್, ಈ ಕಡೆಯಿಂದ ಇಮ್ರಾನ್ ಖಾನ್...'

   ಭಾರತ ಮತ್ತು ಅಮೆರಿಕದ ಹಣಕಾಸಿನ ಮಂತ್ರಿಗಳು ಮುಂದಿನ ದಿನಗಳಲ್ಲಿ ಭೇಟಿಯಾಗಿ ಎರಡೂ ದೇಶಗಳ ನಡುವೆ ವ್ಯಾಪಾರ, ವ್ಯವಹಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಾರೆ ಎಂದು ಆಶಿಸುತ್ತೇನೆ ಎಂದು ಮೋದಿ ಅವರು ಟ್ರಂಪ್ ಅವರಿಗೆ ಹೇಳಿದ್ದಾರೆ.

   ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಅವರು, ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಅಂತರರಾಷ್ಟ್ರೀಯ ಮಟ್ಟದ ಪ್ರಯತ್ನಗಳ ಬಗ್ಗೆಯೂ ಮಾತನಾಡಿದರು.

   ಭಾರತ-ಚೀನಾಕ್ಕೆ ಎಚ್ಚರಿಕೆ ನೀಡಿದ ಟ್ರಂಪ್ ಎದೆಯಲ್ಲಿ ವಿಲವಿಲ!

   ಬಡತನ ನಿರ್ಮೂಲನೆ, ಉತ್ತಮ ಆರೋಗ್ಯಕ್ಕಾಗಿ ಸೇವೆ, ಅನಕ್ಷರತೆಯ ವಿರುದ್ಧ ಯಾರು ಯಾವುದೇ ಕೆಲಸ ಮಾಡಿದರೂ ಅದರ ಬೆಂಬಲಕ್ಕೆ ಭಾರತ ಇರುತ್ತದೆ ಎಂದೂ ಸಹ ಮೋದಿ ಅವರು ಈ ಸಂದರ್ಭ ಹೇಳಿದರು.

   English summary
   Prime minister Narendra Modi and America President Donald Trump talked in phone for thirty minutes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X