Get Updates
Get notified of breaking news, exclusive insights, and must-see stories!

ಜೈಲಿನಲ್ಲಿರುವ ಚಿದಂಬರಂಗೆ ತಮಿಳಿನಲ್ಲಿ ಬರ್ಥಡೇ ಶುಭ ಕೋರಿದ ಮೋದಿ!

Recommended Video

      ಚಿದಂಬರಂಗೆ ಮೋದಿ ಕಳುಹಿದ್ದು ಏನು ಗೊತ್ತಾ..? | Narendra Modi | Oneindia Kannada

      ನವದೆಹಲಿ, ಸೆಪ್ಟೆಂಬರ್ 24: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ಜನ್ಮದಿನದ ಶುಭಾಶಯ ತಿಳಿಸುವ ಪತ್ರ ಅವರ ಕೈಸೇರಿದೆ. ಈ ಬಗ್ಗೆ ಚಿದಂಬರಂ ಅವರು ಮಂಗಳವಾರ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

      ಮೋದಿ ಅವರು ತಮಿಳಿನಲ್ಲಿ ಕಳುಹಿಸಿರುವ ಶುಭಾಶಯ ಪತ್ರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಚಿದಂಬರಂ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

      ತಮಿಳುನಾಡಿನ ಸಿವಗಂಗಾದಲ್ಲಿರುವ ಚಿದಂಬರಂ ಅವರ ವಿಳಾಸಕ್ಕೆ ಪತ್ರ ಕಳುಹಿಸಲಾಗಿದ್ದು, 'ನಿಮ್ಮ ಜನ್ಮದಿನಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಲು ಹರ್ಷಿಸುತ್ತೇನೆ. ಆ ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ. ನೀವು ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಆಶೀರ್ವದಿಸಲಿ' ಎಂದು ತಮಿಳಿನಲ್ಲಿ ಬರೆಯಲಾಗಿದೆ.

      Narendra Modi Birthday Wishes In Tamil To P Chidambaram

      ಚಿದಂಬರಂ ಅವರು ಸೆ. 16ರಂದು 74ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಜನ್ಮದಿನವನ್ನೂ ಅವರು ತಿಹಾರ್ ಜೈಲಿನಲ್ಲಿಯೇ ಕಳೆದಿದ್ದಾರೆ.

      ಮೋದಿ ಅವರ ಹಾರೈಕೆಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ತಾವು ಜನರ ಸೇವೆ ಮುಂದುವರಿಸಲು ಬಯಸಿರುವುದಾಗಿ ಹೇಳಿದ್ದಾರೆ. ಆದರೆ ದುರದೃಷ್ಟವಶಾತ್ ಮೋದಿ ಅವರ ಸರ್ಕಾರದ ತನಿಖಾ ಸಂಸ್ಥೆಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

      'ಪ್ರಸ್ತುತದ ಹಿಂಸೆ ಅಂತ್ಯಗೊಂಡ ಬಳಿಕ ಮೋದಿ ಅವರ ಹಾರೈಕೆಯಂತೆಯೇ ನಾನು ಜನರ ಸೇವೆ ಸಲ್ಲಿಸಲು ಕಾತರನಾಗಿದ್ದೇನೆ' ಎಂದು ಚಿದಂಬರಂ ತಮಿಳಿನಲ್ಲಿಯೇ ಉತ್ತರ ನೀಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+