ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಶಾ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಟ್ವಿಟ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುತ್ತಿರುವ ನೂತನ ಪೌರತ್ವ ಕಾಯ್ದೆ ಯೋಜನೆ ವಿರೋಧಿಸಿ ಅವರು ಟ್ವಿಟ್ ಮಾಡಿದ್ದಾರೆ. ಅದರ ಜೊತೆಗೆ ದೇಶದ ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಪೌರತ್ವ ಕಾಯ್ದೆ ಬಗ್ಗೆ ರಾಹುಲ್ ಗಾಂಧಿಗೆ ಎಳ್ಳಷ್ಟೂ ಜ್ಞಾನವಿಲ್ಲವೇ? ಏನಿದು ಬಿಜೆಪಿ ವ್ಯಂಗ್ಯ ಪೌರತ್ವ ಕಾಯ್ದೆ ಬಗ್ಗೆ ರಾಹುಲ್ ಗಾಂಧಿಗೆ ಎಳ್ಳಷ್ಟೂ ಜ್ಞಾನವಿಲ್ಲವೇ? ಏನಿದು ಬಿಜೆಪಿ ವ್ಯಂಗ್ಯ

"ಭಾರತದ ಆತ್ಮೀಯ ಯುವಕರೇ, ನರೇಂದ್ರ ಮೋದಿ ಮತ್ತು ಅಮಿತ್ ಶಾ ನಿಮ್ಮ ಭವಿಷ್ಯವನ್ನು ನಾಶ ಮಾಡಲಿದ್ದಾರೆ. ಆರ್ಥಿಕತೆಗೆ ಹಾನಿ ಮತ್ತು ತೀವ್ರ ಉದ್ಯೋಗ ಕೊರತೆಯಿಂದ ನಿಮ್ಮ ಕೋಪವನ್ನು ಅವರು ಎದುರಿಸಲಾರರು. ಅದೇ ಕಾರಣಕ್ಕೆ ನಮ್ಮ ಪ್ರೀತಿಯ ಭಾರತವನ್ನು ಒಡೆದು ದ್ವೇಷದ ಹಿಂದೆ ಮರೆಮಾಚುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೂ ಪ್ರೀತಿ ತೋರುವ ಮೂಲಕ ನಾವು ಅವರನ್ನು ಸೋಲಿಸಬಹುದು" ಎಂದು ಟ್ವಿಟ್ ನಲ್ಲಿ ಕರೆ ನೀಡಿದ್ದಾರೆ.

Narendra Modi, Amit Shah ruin youths future: Rahul Gandhi

ಇದೇ ಸಂದರ್ಭದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ದೇಶದ ಮಣ್ಣಿನ ಮುಸ್ಲಿಮರು ಪೌರತ್ವ ಕಾನೂನಿಗೆ ಭಯಪಡುವ ಅಗತ್ಯವಿಲ್ಲ. ಯಾವ ಭಾರತೀಯನನ್ನು ಹೊರಕ್ಕೆ ಹಾಕುವುದಿಲ್ಲ. ರಾಷ್ಟ್ರವನ್ನು ಒಡೆಯುತ್ತಿದ್ದಾರೆ ಎಂಬ ಮಾತು ಶುದ್ದ ಸುಳ್ಳು ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ

ನಿರಾಶ್ರಿತರಿಗೂ ಮತ್ತು ಅಕ್ರಮ ವಲಸಿಗರಿಗೂ ವ್ಯತ್ಯಾಸವಿದೆ. ಅದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಗಲಭೆಗೆ ಪ್ರೋತ್ಸಾಹಿಸಲು ಅಪಪ್ರಚಾರದಲ್ಲಿ ತೊಡಗಿವೆ ಎಂದು ಕಿಡಿಕಾರಿದ್ದರು. ಸಿಎಎ ಮತ್ತು ಏನ್ಆರ್ಸಿ ಜಾರಿಯಿಂದ ಯಾವ ಭಾರತೀಯನಿಗೂ ತೊಂದರೆ ಇಲ್ಲ ಎಂದಿದ್ದಾರೆ.

English summary
Congress leader Rahul Gandhi has tweeted against the central government that Prime Minister Narendra Modi and Home Minister Amit Shah have ruined the future of the countrys youth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X