ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮೋ ಟಿವಿ ಬಗ್ಗೆ ಸ್ಪಷ್ಟನೆ ಕೋರಿದ ಚುನಾವಣಾ ಆಯೋಗ

|
Google Oneindia Kannada News

ನವದೆಹಲಿ, ಏಪ್ರಿಲ್ 03: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಇನ್ನಷ್ಟು ವಿಸ್ತಾರವಾಗಿ ತಲುಪಿಸಲು ಇತ್ತೀಚೆಗೆ ಆರಂಭವಾದ "ನಮೋ ಟಿವಿ' ಬಂದ್ ಮಾಡುವಂತೆ ಕೋರಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ಮನವಿಗೆ ಕೇಂದ್ರ ಚುನಾವಣಾ ಆಯೋಗವು ಸ್ಪಂದಿಸಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ನೋಟಿಸ್ ನೀಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಲ್ಲದೆ, ಪ್ರಸಾರ ಭಾರತಿ, ದೂರದರ್ಶನಕ್ಕೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಯೋಗ ಸೂಚಿಸಿದ್ದು, 24 ಗಂಟೆಗಳ ಅವಧಿಯೊಳಗೆ ಉತ್ತರಿಸುವಂತೆ ಕೋರಿದೆ. ಪ್ರಧಾನಿ ಮೋದಿ ಅವರ ಚುನಾವಣಾ ಭಾಷಣಗಳನ್ನು ಲೈವ್ ಪ್ರಸಾರ ಮಾಡುವುದು, ಮಾರ್ಚ್ 31ರಂದು ಮೇ ಭಿ ಚೌಕಿದಾರ್ ಕಾರ್ಯಕ್ರಮ ಸಂವಾದವನ್ನು ಪ್ರಸಾರ ಮಾಡಿದ್ದರ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ.

ನಮೋ ಟಿವಿ ವಿರುದ್ಧ ಆಯೋಗಕ್ಕೆ ದೂರಿತ್ತ ಎಎಪಿ, ಕಾಂಗ್ರೆಸ್ ನಮೋ ಟಿವಿ ವಿರುದ್ಧ ಆಯೋಗಕ್ಕೆ ದೂರಿತ್ತ ಎಎಪಿ, ಕಾಂಗ್ರೆಸ್

"ಚುನಾವಣಾ ಆಯೋಗಕ್ಕೆ ಮೂರು ಮನವಿಗಳನ್ನು ಸಲ್ಲಿಸಲಾಗಿದ್ದು, ತನ್ನ ಭಾಷಣವನ್ನು ಪ್ರಸಾರ ಮಾಡುವ ಸಲುವಾಗಿ ಬಿಜೆಪಿ ದೂರದರ್ಶನ ಹಾಗೂ ಇತರ ಚಾನಲ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ" ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ನೇತೃತ್ವದ ನಿಯೋಗವು ಹೇಳಿದೆ.

 NaMo TV launch: EC seeks explanation from I&B ministry after complaint from AAP and Cong

ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ಆಯೋಗದ ಸೂಚನೆ ಅನ್ವಯ ಈ ರೀತಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಟಿವಿ ಚಾನಲ್‌ಗಳಿಗೆ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಯೋಗವನ್ನು ಕೋರಿತ್ತು.

ಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗ

ನಮೋ ಟಿವಿ ಡಿಶ್ ಟಿವಿ, ಟಾಟಾ ಸ್ಕೈ, ಸಿಟಿ, ಏರ್ ಟೆಲ್ ಸೇರಿದಂತೆ ಪ್ರಮುಖ ಡಿಟಿಎಚ್ ಮತ್ತು ಕೇಬಲ್ ಟಿವಿ ಜಾಲದಲ್ಲಿ ಲಭ್ಯವಿದೆ, ಮೋದಿ ಹೆಸರಿನ ಮೊಬೈಲ್ ಅಪ್ಲಿಕೇಶನ್ ಕೂಡಾ ಇದೆ. ಪ್ರತ್ಯೇಕ ಇಂಟರ್‌ನೆಟ್ ಟಿವಿ ಚಾನಲ್ ಕೂಡಾ ಇದೆ.

English summary
Based on complaint filed by Congress and Aam Aadmi Party (AAP), Election Commission (EC) of India has sought a response from I&B ministry on 24-hour channel 'NAMO TV'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X