ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಫೇಸ್ ಬುಕ್ ಮಾಹಿತಿ, ತಾಯಿ-ಮಗುವಿನ ಜೀವವನ್ನು ವಾಟ್ಸ್ ಆಪ್ ಉಳಿಸಿತಾ?

ವಿಪಿನ್ ಭಗವಾನ್ ರಾವ್ ಖಾಡ್ಸೆ ಎಂಬ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ತಮ್ಮ ಅನುಭವವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ತಾಯಿ-ಮಗುವನ್ನು ಉಳಿಸಿದ ಆ ಅನುಭವದ ಬಗ್ಗೆ ಇರುವ ಫೇಸ್ ಬುಕ್ ಪೋಸ್ಟ್ ನ ಮಾಹಿತಿ ನಿಮ್ಮೆದುರು ಇದೆ

|
Google Oneindia Kannada News

ನವದೆಹಲಿ, ಏಪ್ರಿಲ್ 10: ಇದು ಸ್ವಲ್ಪ ಅಚ್ಚರಿಯಾದರೂ, ಸಂತೋಷ ನೀಡುವಂಥ ಸುದ್ದಿ. ನಾಗ್ಪುರ ಮೂಲದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ವಿಪಿನ್ ಭಗವಾನ್ ರಾವ್ ಖಾಡ್ಸೆ ಮಹಿಳೆಯೊಬ್ಬರ ಹೆರಿಗೆಗೆ ನೆರವಾದ ಘಟನೆ ಬಗ್ಗೆ ಅಂತಃಕರಣದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ತುಂಬ ಕ್ಲಿಷ್ಟಕರವಾದ ಹೆರಿಗೆ ಪ್ರಕರಣವೊಂದರಲ್ಲಿ ವಾಟ್ಸ್ ಆಪ್ ಹೇಗೆ ನೆರವಾಯಿತು ಎಂಬುದನ್ನು ತಮ್ಮ ಫೇಸ್ ಬುಕ್ ನಲ್ಲಿ ವಿವರಿಸಿದ್ದಾರೆ.

ಫೇಸ್ ಬುಕ್ ನಲ್ಲಿ ವಿಪಿನ್ ತಮ್ಮ ಅನುಭವ ದಾಖಲಿಸಿದ್ದು, "ನಾನು ವೈದ್ಯನಾಗುವುದಕ್ಕಿಂತ ಸಾವಿರ ಪಟ್ಟು ಹೆಚ್ಚಿನ ಸಂತೋಷ ಈ ಎರಡೂ ಜೀವಗಳನ್ನು ಉಳಿಸಿದ್ದರಿಂದ ಆಗಿದೆ" ಎಂದು ಬರೆದುಕೊಂಡಿದ್ದಾರೆ. ಅಕೋಲಾದಿಂದ ನಾಗ್ಪುರ ರೈಲಿನಲ್ಲಿ ವಿಪಿನ್ ಪ್ರಯಾಣಿಸುವಾಗ ಟಿಕೆಟ್ ಚೆಕ್ ಮಾಡುವ ವ್ಯಕ್ತಿ ವೈದ್ಯರೊಬ್ಬರನ್ನು ಹುಡುಕುತ್ತಾ ಬಂದಿದ್ದಾರೆ.[ಅಪ್ಪ-ಅಮ್ಮನ ಕಳೆದುಕೊಂಡ ತುಮಕೂರಿನ ಮಕ್ಕಳ ಕರುಣಾಜನಕ ಕಥೆ]

ಅವರು ಅನುಭವಿ ವೈದ್ಯರನ್ನೇ ಹುಡುಕುತ್ತಿರಬಹುದು ಅಂತ ವಿಪಿನ್ ಗೆ ಮೊದಲಿಗೆ ಅನ್ನಿಸಿದೆ. ರೈಲಿನಲ್ಲಿ ವೈದ್ಯರು ಯಾರೂ ಇಲ್ಲ ಎಂದು ಗೊತ್ತಾದಾಗ ತಾನೇ ಸಹಾಯಕ್ಕೆ ಮುಂದಾಗಿದ್ದಾರೆ. ಜನರಲ್ ಕಂಪಾರ್ಟ್ ಮೆಂಟ್ ಗೆ ಹೋಗಿ ಇಪ್ಪತ್ತೆರಡು-ಇಪ್ಪತ್ಮೂರು ವರ್ಷದ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿರುವುದು ಗೊತ್ತಾಗಿದೆ.

Baby

ಸಹಜವಾಗಿ ಹೆರಿಗೆ ಆಗುವ ಸಾಧ್ಯತೆ ಇಲ್ಲ ಎಂದು ತಿಳಿದಾಗ ತನ್ನ ಕಾಲೇಜಿನಲ್ಲಿದ್ದ ವೈದ್ಯರ ಸಹಾಯದಿಂದ ಸವಾಲು ಎನಿಸುವಂಥ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅದೃಷ್ಟವಶಾತ್ ವಿಪಿನ್ ಬಳಿ ಚಿಕಿತ್ಸೆಗೆ ಬೇಕಾದ ವಸ್ತುಗಳೂ ಇದ್ದವು. ಇಡೀ ಚಿಕಿತ್ಸೆಯ ಮಾಹಿತಿ ಸಿಕ್ಕಿದ್ದು ವಾಟ್ಸ್ ಆಪ್ ಮೂಲಕ.

ಸಹಪಾಠಿಗಳು, ಹಿರಿಯ ವೈದ್ಯರ ಮೂಲಕ ದೊರೆತ ಸೂಚನೆಗಳನ್ನೇ ಅನುಸರಿಸಿ ಮಗು ಹಾಗೂ ತಾಯಿಯ ಜೀವವನ್ನು ಉಳಿಸಿದ್ದಾರೆ. ನಾಗ್ಪುರಕ್ಕೆ ಬಂದ ನಂತರ ಆ ಮಹಿಳೆಯ ಸಂಬಂಧಿಕರು ತನಗೆ ನೂರೊಂದು ರುಪಾಯಿ ನೀಡಿದರು ಎಂಬುದನ್ನು ವಿಪಿನ್ ಖುಷಿಯಿಂದ ಹೇಳಿಕೊಂಡಿದ್ದಾರೆ.[100 ಕೆಜಿ ಕಳೆದುಕೊಂಡ ಆಕೆಯೀಗ ಜಗತ್ತಿನ ತೂಕದ ಮಹಿಳೆಯಲ್ಲ!]

ಇದು ವಿಪಿನ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಆದ್ದರಿಂದ ಸುದ್ದಿಯ ಖಚಿತತೆ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನೀವೇ ಅವರು ಬರೆದಿದ್ದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

English summary
A final year medical student helped a pregnant woman deliver her baby. In a post shared on Facebook on April 7, Vipin Bhagwanrao Khadse from Nagpur details the entire account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X