ಅತ್ಯಾಚಾರ ಆರೋಪಿಗಳಿಂದ ಹಣಪಡೆದ ಇವರೆಂಥ ತಂದೆತಾಯಿಗಳು!?

ನವದೆಹಲಿ, ಏಪ್ರಿಲ್ 17: "ನನ್ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಂದ ತನ್ನ ತಂದೆ-ತಾಯಿ ಹಣ ಪಡೆದು, ಪ್ರಕರಣವನ್ನು ಮುಚ್ಚಿಹಾಕು ಎಂದು ಒತ್ತಾಯಿಸುತ್ತಿದ್ದಾರೆ" ಎಂದು ಅತ್ಯಾಚಾರ ಸಂತ್ರಸ್ಥೆಯೊಬ್ಬಳು ಪೊಲಿಸರಿಗೆ ದೂರು ನೀಡಿದ ವಿಚಿತ್ರ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪವನ್ನು ಇಬ್ಬರು ಎದುರಿಸುತ್ತಿದ್ದರು. ಈ ಕುರಿತು ಯುವತಿ ಪೊಲಿಸರಿಗೆ ದೂರು ನೀಡಿದ್ದಳು. ಪ್ರಕರಣ ಪ್ರಗತಿಯಲ್ಲಿರುವಾಗಲೇ, ಆರೋಪಿಗಳು ಸಂತ್ರಸ್ಥೆಯ ಪಾಲಕರಲ್ಲಿ ಹಣದ ಆಮಿಷವೊಡ್ಡಿದ್ದಾರೆ. ಪ್ರಕರಣವನ್ನು ತಿರುಚುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ತಂದೆ-ತಾಯಿ, 5 ಲಕ್ಷ ರೂ. ಹಣ ಪಡೆದು ಸಂತ್ರಸ್ಥೆಯ ಬಳಿ ಪ್ರಕರಣವನ್ನು ತಿರುಚುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.

My Parents took 5 lakh Rs from rape accused: Delhi rape victim claims

ಈ ಕುರಿತು ಸಂತ್ರಸ್ಥೆ ನೀಡಿದ ದೂರಿನನ್ವಯ ಸಂತ್ರಸ್ಥೆಯ ಪಾಲಕರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ ಈ ಸಂದರ್ಭದಲ್ಲಿ ತಂದೆ ನಾಪತ್ತೆಯಾಗಿದ್ದು, ತಾಯಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಆಗಸ್ಟ್ ನಲ್ಲಿ ಯುವತಿಯನ್ನು ಅಪಹರಿಸಿ ಒಂದು ವಾರಗಳ ಕಾಲ ಇಬ್ಬರು ಯುವಕರು ನಿರಂತರ ಅತ್ಯಾಚಾರ ಎಸಗಿದ್ದರು. ಯುವತಿ ನಾಪತ್ತೆಯಾಗಿರುವ ಕುರಿತು ತಂದೆ-ತಾಯಿಯೇ ದೂರು ನೀಡಿದ್ದರು. ನಂತರ ಪತ್ತೆಯಾದ ಆಕೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀದಿದ್ದಳಲು. ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+