ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್

|
Google Oneindia Kannada News

ಬೆಂಗಳೂರು, ಮೇ 23 : ಎಂಟಿಆರ್ ಮತ್ತು ಐಟಿಸಿ ಕಂಪನಿಗಳ ತಿಂಡಿಗಳು ಶೀಘ್ರದಲ್ಲೇ ರೈಲಿನಲ್ಲಿ ದೊರೆಯಲಿದೆ. ಭಾರತೀಯ ರೈಲ್ವೆ ಪ್ರೀಮಿಯಂ ರೈಲುಗಳಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಐಷಾರಾಮಿ ರೈಲುಗಳಲ್ಲಿ ಪ್ರಸಿದ್ಧ ಕಂಪನಿಗಳಾದ ಎಂಟಿಆರ್ ಮತ್ತು ಐಟಿಸಿ ಕಂಪನಿಗಳ ಸಿದ್ಧಪಡಿಸಿದ ಆಹಾರಗಳನ್ನು ನೀಡಲು ಚಿಂತನೆ ನಡೆಸಲಾಗಿದೆ. ರಾಜಧಾನಿ ರೈಲುಗಳಿಗಿಂತ ಎರಡು-ಮೂರು ಪಟ್ಟು ದರ ಹೆಚ್ಚಿರುವ ಪ್ರೀಮಿಯಂ ರೈಲುಗಳಲ್ಲಿ ಈ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ.

Food

ಈ ಬಗೆಯ ಆಹಾರಗಳನ್ನು ನೀಡುವ ಮೂಲಕ ರೈಲಿನ ಪ್ರಯಾಣವನ್ನು ಮತ್ತಷ್ಟು ಪ್ರಸಿದ್ಧಿ ಪಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈಗಾಗಲೇ ಈ ಬಗ್ಗೆ ರೈಲ್ವೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿದ್ದು, ಶೇ 80ರಷ್ಟು ಜನರು ಇದು ಉತ್ತಮ ಯೋಜನೆ ಎಂದು ಹೇಳಿದ್ದಾರೆ.

ಸ್ಥಳೀಯ ಪ್ರದೇಶಗಳಿಗೆ ತಕ್ಕಂತೆ ಈ ತಿಂಡಿಗಳ ಮೆನುವಿನಲ್ಲಿ ಬದಲಾವಣೆ ಮಾಡಲು ರೈಲ್ವೆ ಆಲೋಚಿಸಿದೆ. ದಕ್ಷಿಣ ಭಾರತದಲ್ಲಿ ಉಪ್ಪಿಟ್ಟು, ಇಡ್ಲಿ, ಸಾಂಬಾರ್. ಉತ್ತರ ಭಾರತದಲ್ಲಿ ದಾಲ್, ಸಾಹಿ ಪನ್ನೀರ್ ಸೇರಿದಂತೆ ಇತರ ತಿಂಡಿಗಳನ್ನು ವಿತರಿಸಲು ಚಿಂತನೆ ನಡೆಸಿದೆ.

ಈ ತಿಂಡಿಗಳಿಗೆ ರೈಲ್ವೆ ಹೆಚ್ಚಿನ ದರವನ್ನು ವಿಧಿಸುವುದಿಲ್ಲ. ಮೊದಲು ರೈಲಿನಲ್ಲಿ ಸರಬರಾಜು ಮಾಡುತ್ತಿದ್ದ ಊಟ, ತಿಂಡಿಗಿದ್ದ ದರವನ್ನು ನಿಗದಿಪಡಿಸುವ ಆಲೋಚನೆ ಇದೆ. ಮಾಂಸಹಾರಿ ಪ್ಯಾಕೆಟ್ ಗಳಿಗೆ ದರ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ, ಒಮ್ಮೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದರ ಕಡಿಮೆಯಾಗಬಹುದು.

ಈ ತಿಂಡಿಗಳ ಪ್ಯಾಕೆಟ್ ಮೇಲೆಯೇ ರೈಲ್ವೆ ಕಂಪನಿಗಳ ದೂರವಾಣಿ ಸಂಖ್ಯೆಯನ್ನು ಮುದ್ರಿಸಲಿದೆ. ಒಂದು ವೇಳೆ ತಿಂಡಿಗಳ ಬಗ್ಗೆ ಪ್ರಯಾಣಿಕರು ದೂರು ನೀಡಬೇಕಾದರೆ, ನೇರವಾಗಿ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಎಲ್ಲವೂ ಅಂದುಕೊಡಂತೆ ನಡೆದರೆ ಕೆಲವು ದಿನಗಳಲ್ಲಿ ನಿಮ್ಮ ಕೈಯಲ್ಲಿ ಎಂಟಿಆರ್ ಬಿಸಿ-ಬಿಸಿ ಇಡ್ಲಿ ಇರುತ್ತದೆ.

English summary
Premium trains run by the Indian Railways may soon start serving per-cooked meals from companies such as ITC and MTR. The Railways, which serves cooked food such as dal, chapatti and rice, prepared by caterers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X