ಈ ವರ್ಷ ಸ್ವಲ್ಪ ತಡವಾಗಿ ಆಗಮಿಸಲಿದೆ ಮುಂಗಾರು
ನವದೆಹಲಿ, ಮೇ 15: ಈ ವರ್ಷ ಮುಂಗಾರು ದೇಶಕ್ಕೆ ನಿಗದಿತ ಸಮಯದಲ್ಲಿ ಆಗಮಿಸುತ್ತದೆ ಎಂಬ ವರದಿಗಳು ಹುಸಿಯಾಗಿವೆ. ದೇಶದ ನೈರುತ್ಯ ಕರಾವಳಿಗೆ ಜೂನ್ 1 ರಂದು ಮಾನ್ಸೂನ್ ಅಪ್ಪಳಿಸಲಿದೆ ಎಂದು ಹವಾಮಾನ ಮುನ್ಸೂಚನೆ ಹೇಳಿದ್ದವು.
ಆದರೆ, ಇಂದು ಭಾರತೀಯ ಹವಾಮಾನ ಇಲಾಖೆ ಮಾನ್ಸೂನ್‌ಗೆ ಸಂಬಂಧಿಸಿದಂತೆ ಹೊಸ ವರದಿ ಬಿಡುಗಡೆ ಮಾಡಿದ್ದು, ನಾಲ್ಕು ದಿನ ತಡವಾಗಿ ಅಂದರೆ ಜೂನ್ 5 ರಂದು ಮುಂಗಾರು ದೇಶ ಪ್ರವೇಶ ಮಾಡಲಿದೆ ಎಂದು ಹೇಳಿದೆ.
ಸಹಜವಾಗಿ ಮುಂಗಾರು ಮೇ ಕೊನೆವಾರ ಅಥವಾ ಜೂನ್ 1 ರಂದು ಕೇರಳ ಪ್ರವೇಶ ಮಾಡುತ್ತದೆ. ಕಳೆದ ವರ್ಷ 7 ದಿನ ತಡವಾಗಿ ಮುಂಗಾರು ಪ್ರವೇಶ ಮಾಡಿತ್ತು. ಈ ವರ್ಷವೂ ತಡವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಳಿದಂತೆ ಈ ವರ್ಷ ಮುಂಗಾರು ಸಾಮಾನ್ಯವಾಗಿರಲಿದೆ. ಅಲ್ಲದೇ ಜೂನ್ ಜುಲೈ ಅವಧಿಗಿಂತ ಆಗಸ್ಟ್ ಸೆಪ್ಟೆಂಬರ ಮಳೆ ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications