ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ತೆಗೆದುಕೊಂಡವರಿಗಷ್ಟೇ ಅಲ್ಲ, ಕೊಟ್ಟವರಿಗೂ ಕಠಿಣ ಶಿಕ್ಷೆ

|
Google Oneindia Kannada News

ನವದೆಹಲಿ, ಜುಲೈ 25: ಲಂಚ ತೆಗೆದುಕೊಳ್ಳುವವರಷ್ಟೇ ಅಲ್ಲ, ಕೊಡುವವರೂ ಶಿಕ್ಷಾರ್ಹರು! ಇನ್ನು ಮೇಲೆ ನೀವೇನಾದರೂ ಲಂಚ ನೀಡಿದರೆ ಕಂಬಿ ಎಣಿಸಬೇಕಾದೀತು, ಹುಷಾರು!

ಲೋಕಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಮಂಗಳವಾರ 'ಭ್ರಷ್ಟಾಚಾರ ನಿರ್ಮೂಲನೆ(ತಿದ್ದುಪಡಿ) ಮಸೂದೆ- 2018' ಅನ್ನು ಜಾರಿಗೆ ತರಲು ನಿರ್ಧರಿಸಲಾಯಿತು.

ಸರ್ಕಾರಿ ಕಚೇರಿಯಲ್ಲಿ ಹಣ ಕೇಳಿದ್ರೆ ಹುಷಾರ್‌: ಎಸಿಬಿಯಿಂದ ಸಭೆಸರ್ಕಾರಿ ಕಚೇರಿಯಲ್ಲಿ ಹಣ ಕೇಳಿದ್ರೆ ಹುಷಾರ್‌: ಎಸಿಬಿಯಿಂದ ಸಭೆ

ಈ ಮಸೂದೆಯ ಪ್ರಕಾರ, ಯಾವುದೇ ಸರ್ಕಾರಿ ಅಧಿಕಾರಿಗೆ ಲಂಚ ನೀಡಿದರೆ, ಲಂಚ ಪಡೆದ ಅಧಿಕಾರಿಗೂ ಮತ್ತು ಲಂಚ ನೀಡಿದವರಿಗೂ ಶಿಕ್ಷೆ ನೀಡಬಹುದಾಗಿದೆ. ಇಬ್ಬರೂ ಅಪರಾಧದಲ್ಲಿ ಸಮಾನ ಪಾಲಿದಾರರೆಂದು ನಿರ್ಧರಿಸಿ, ಈ ಅಪರಾಧಕ್ಕೆ ಕನಿಷ್ಠ 6 ತಿಂಗಳಿನಿಂದ 3 ರಿಂದ 7 ವರ್ಷದ ವರೆಗೆ ಜೈಲುಶಿಕ್ಷೆ ನೀಡಬಹುದಾಗಿದೆ. ಜೊತೆಗೆ ದಂಡ ಸಹ. ಒಮ್ಮೆ ಲಂಚ ನೀಡಿದ್ದು, ಅಥವಾ ಪಡೆದಿದ್ದು ಸಾಬೀತಾಗಿ ಜೈಲಿಗೆ ಹೋಗಿ ಬಂದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡಿದರೆ ಅಂಥವರಿಗೆ 5 ರಿಂದ 10 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ.

Monsoon session: Bribe give and bribe giver, equal punishment for both

ಈ ಮಸೂದೆಯನ್ನು ಈಗಾಗಲೇ ರಾಜ್ಯ ಸಭೆಯಲ್ಲಿ ಮಂಡಿಸಲಾಗಿದೆ. ಇದರೊಟ್ಟಿಗೆ ಸ್ವಹಿತಕ್ಕಾಗಿ ಬೇರೆಯವರಿಗೆ ನೀಡುವ 'ಉಡುಗೊರೆ' ಸಹ ಭ್ರಷ್ಟಾಚಾರದ ಪಟ್ಟಿಗೇ ಸೇರುತ್ತವೆ ಎನ್ನಲಾಗಿದೆ.

ಲೋಕಸಭೆಯಲ್ಲಿ ನಡೆಯುತ್ತಿರುವ 18 ದಿನಗಳ ಮುಂಗಾರು ಅಧಿವೇಶನ ಜು.18 ರಿಂದ ಆರಂಭವಾಗಿದ್ದು ಆಗಸ್ಟ್ 10 ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಲವು ಮಹತ್ವದ ಮಸೂದೆಗಳು ಜಾರಿಗೆ ಬರುವ ಸಾಧ್ಯತೆ ಇದೆ.

English summary
Monsoon session 2018: Prevention of Corruption (Amendment) Bill, 2018 has been cleared by Lok Sabha on Tuesday. According to this bill, Bribe giver is equally responsible as bribe taker and both will get equal punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X