15 ವರ್ಷಗಳಲ್ಲೇ ಮೊದಲ ಬಾರಿಗೆ ದೆಹಲಿಗೆ ಮುಂಗಾರು ಆಗಮನ ವಿಳಂಬ

ನವದೆಹಲಿ, ಜುಲೈ 06: ಕಳೆದ 15 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಗೆ ನೈಋತ್ಯ ಮುಂಗಾರು ಪ್ರವೇಶಿಸುವುದು ವಿಳಂಬವಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜುಲೈ 10ರಂದು ಮುಂಗಾರು ದೆಹಲಿಯನ್ನು ಪ್ರವೇಶಿಸಲಿದೆ.

ಜುಲೈ 10ರಂದು ಉತ್ತರ ಪ್ರದೇಶದ ಬಹುತೇಕ ಪ್ರದೇಶ, ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ಥಾನದಲ್ಲಿ ಮಳೆಯಾಗಲಿದೆ. ಜುಲೈ 10ರ ನಂತರ ದೇಶಾದ್ಯಂತ ಮುಂಗಾರು ಚುರುಕು ಪಡೆಯಲಿದೆ.

Monsoon Likely To Reach Delhi Around July 10

ಐಎಂಡಿಯ ಕುಲ್ದೀಪ್ ಶ್ರೀವಾತ್ಸವ್ ಮಾತನಾಡಿ, ''2006ರಲ್ಲಿ ಜುಲೈ 9 ರಂದು ಮುಂಗಾರು, ದೆಹಲಿಯನ್ನು ಪ್ರವೇಸಿಸಿತ್ತು, 2012ರಲ್ಲಿ ಜುಲೈ 7 ರಂದು ಪ್ರವೇಶಿಸಿತ್ತು'' ಎಂದಿದ್ದಾರೆ.

2002ರಲ್ಲಿ ಮುಂಗಾರಿನ ಮೊದಲ ಮಳೆ ಜುಲೈ 19ರಂದು ಸುರಿದಿತ್ತು. 1987 ಅಲ್ಲಿ ಜುಲೈ 26 ರಂದು ಮುಂಗಾರು ಪ್ರವೇಶವಾಗಿತ್ತು.

ಮುಂಗಾರು ಕೇವಲ ದೆಹಲಿ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲಿ ಕೂಡ ದುರ್ಬಲವಾಗಿದೆ, ಜುಲೈ 10ರಿಂದ ದೇಶಾದ್ಯಂತ ಮುಂಗಾರು ಚುರುಕುಗೊಳ್ಳಲಿದೆ ಎಂದು ಹೇಳಲಾಗಿದೆ. ಈ ಮೊದಲು ಹವಾಮಾನ ಇಲಾಖೆ ನೀಡಿದ್ದ ಮಾಹಿತಿ ಪ್ರಕಾರ ಜೂನ್ 15 ರಂದು ಮುಂಗಾರು ಪ್ರವೇಶಿಸಬೇಕಿತ್ತು.

ಸಾಮಾನ್ಯವಾಗಿ ಮುಂಗಾರು ಜೂನ್ 27 ರಂದು ದೆಹಲಿಯನ್ನು ಪ್ರವೇಶಿಸುತ್ತದೆ, ಜುಲೈ 8ರ ಹೊತ್ತಿಗೆ ಇಡೀ ದೇಶವನ್ನೇ ಮುಂಗಾರು ಆಗುವರಿಸುತ್ತದೆ. ಕಳೆದ ವರ್ಷ ಜೂನ್ 25 ರಂದು ಮುಂಗಾರು ದೆಹಲಿ ಪ್ರವೇಶಸಿತ್ತು, ಜೂನ್ 29ರಷ್ಟೊತ್ತಿಗೆ ಇಡೀ ದೇಶದಲ್ಲೇ ಮಳೆ ಶುರುವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+