ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲು ಪ್ರಸಾದ್ ಭವಿಷ್ಯ ನಿರ್ಧಾರ ದಿನವೇ ಪುತ್ರಿ ವಿರುದ್ಧ ಚಾಜ್ ಶೀಟ್ ಸಲ್ಲಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ 900 ಕೋಟಿ ರೂ.ಮೇವು ಹಗರಣದ ಅಂತಿಮ ತೀರ್ಪಿನ ದಿನದಂದೇ ಪುತ್ರಿ ಮತ್ತು ಅಳಿಯನ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ.

ಇಂದು ಬಹುಕೋಟಿ ಮೇವು ಹಗರಣದ ತೀರ್ಪು: ಲಾಲೂ ಭವಿಷ್ಯ ನಿರ್ಧಾರ?ಇಂದು ಬಹುಕೋಟಿ ಮೇವು ಹಗರಣದ ತೀರ್ಪು: ಲಾಲೂ ಭವಿಷ್ಯ ನಿರ್ಧಾರ?

ಲಾಲು ಪ್ರಸಾದ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ ಮತ್ತು ಅಳಿಯ ಶೈಲೇಶ್ ಕುಮಾರ್‌ ವಿರುದ್ಧ 8 ಸಾವಿರ ಕೋಟಿ ಮನಿ ಲ್ಯಾಂಡ್ರಿಂಗ್ ಪ್ರಕರಣದಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಇಡಿ ವಿಚಾರಣಾಧಿಕಾರಿ ನಿತೀಶ್ ರಾಣಾ ಅವರು ವಿಶೇಷ ನ್ಯಾಯಾಧೀಶ ಎನ್. ಕೆ. ಮಲ್ಹೋತ್ರಾ ಅವರಿಗೆ ಆರೋಪಪಟ್ಟಿ ಸಲ್ಲಿಸಿದರು.

Misa Bharti

ಮಿಸಾ ಮತ್ತು ಅವರ ಪತಿ ಶೈಲೇಶ್ ಕುಮಾರ್ ಅವರಿಗೆ ಸೇರಿದ ದಕ್ಷಿಣ ದೆಹಲಿಯ ಬಿಜ್ವಸನ್ ಪ್ರದೇಶದಲ್ಲಿರುವ ಪಾಲಮ್ ಫಾರ್ಮ್ ನ್ನು '2008-09ರಲ್ಲಿ ಅಕ್ರಮವಾಗಿ ಸಂಪಾದಿಸಿದ 1.2 ಕೋಟಿ ರು.ದಿಂದ ಇದನ್ನು ಖರೀದಿಸಲಾಗಿತ್ತು' ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಮಿಸಾ ದಂಪತಿಗೆ ಸೇರಿದ, ದೆಹಲಿಯ ಗೀತೋರ್ಣಿ, ಬಿಜ್ವಾಸನ್ ಮತ್ತು ಸೈನಿಕ್ ಪ್ರದೇಶದಲ್ಲಿರುವ ತೋಟದ ಮನೆಗಳ ಮೇಲೆ ಹಾಗೂ ಮಿಶೈಲ್ ಪ್ರಿಂಟರ್ಸ್ ಆಂಡ್ ಪ್ಯಾಕರ್ಸ್ ಎಂಬ ಸಂಸ್ಥೆಯ ಮೇಲೆ 2017, ಜುಲೈ 8ರಂದು ಇಡಿ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

English summary
The Enforcement Directorate (ED) on Saturday filed a chargesheet against RJD chief Lalu Prasad's daughter Misa Bharti and her husband in a money laundering case.ED counsel Nitesh Rana filed the charge sheet before the court of Special Judge N K Malhotra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X