ಎಲ್ಲೇ ಹೋದರೂ ಸುಳ್ಳು ಹೇಳುವ ಪ್ರಧಾನಿ ಮೋದಿ: ರಾಹುಲ್ ಆರೋಪ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿಲ್ಲ. ಪ್ರಧಾನಿ ಮೋದಿ 'ಸ್ವಚ್ಛ ಭಾರತ' ನಿರ್ಮಾಣ ಮಾಡಬೇಕು ಅಂದುಕೊಂಡಿದ್ದಾರೆ. ಆದರೆ ಜನರು 'ಸತ್ಯ ಭಾರತ'ವನ್ನು ಬಯಸುತ್ತಿದ್ದಾರೆ. ಮೋದಿ ಎಲ್ಲೇ ಹೋದರೂ ಸುಳ್ಳು ಹೇಳುತ್ತಾರೆ ಎಂದು ರಾಹುಲ್ ಆರೋಪ ಮಾಡಿದ್ದಾರೆ.

ಸಾರ್ಥಕ ಸಮಾವೇಶಲ್ಲಿ ಮೋದಿ ಲೇವಡಿ ಮಾಡಿದ ರಾಹುಲ್

ಜೆಡಿಯುನ ಭಿನ್ನಮತೀಯ ನಾಯಕ ಶರದ್ ಯಾದವ್ ಆಯೋಜಿಸಿದ್ದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೇಕ್ ಇನ್ ಇಂಡಿಯಾ' ಬಗ್ಗೆ ಪ್ರಸ್ತಾವ ಮಾಡಿದ ಅವರು, ದೇಶದಲ್ಲಿ ಸಿಗುವ ಬಹುತೇಕ ಉತ್ಪನ್ನಗಳು ಚೀನಾದಲ್ಲಿ ಉತ್ಪಾದಿಸಿದಂಥವು ಎಂದಿದ್ದಾರೆ.

Modi wants a ‘Swachch Bharat’ but people want a ‘Sach Bharat’, says Rahul Gandhi

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ಭರವಸೆಗಳನ್ನು ಯಾವುದೂ ಈಡೇರಿಸಿಲ್ಲ. ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರ್ತೀವಿ, ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡ್ತೀವಿ. ಹೀಗೆ ಅನೇಕ ಭರವಸೆಗಳನ್ನು ನೀಡಿದ್ದ ಬಿಜೆಪಿ ಅವ್ಯಾವುದನ್ನೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಅಜ್ಜಿ'ಯ ನೆನೆಯಲು ಹೋಗಿ 'ಅಮ್ಮ'ನನ್ನು ನೆನೆದ ರಾಹುಲ್!

ಈ ಸಭೆಯಲ್ಲಿ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್, ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಮತ್ತಿತರರು ಭಾಗವಹಿಸಿದ್ದರು.

ಒಬ್ಬರು ಹೇಳ್ತಾರೆ ಈ ದೇಶ ನನ್ನದು, ಮತ್ತೊಬ್ಬರು ಹೇಳ್ತಾರೆ ನಾನು ಈ ದೇಶಕ್ಕೆ ಸೇರಿದವನು. ಇದು ಆರೆಸ್ಸೆಸ್ ಹಾಗೂ ನಮಗೆ ಇರುವ ವ್ಯತ್ಯಾಸ ಎಂದರು ರಾಹುಲ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi wanted to create a ‘Swachch Bharat’ but people wanted a ‘sach Bharat’. Wherever he goes, he lies, AICC Vice president Rahul Gandhi alleged.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ