ಬಚ್ಚನ್ ಶೈಲಿಯಲ್ಲಿ ಮೋದಿ ಡೈಲಾಗ್ ಹೊಡೆದ ರಾಹುಲ್!

Posted By:
Subscribe to Oneindia Kannada

ನವದೆಹಲಿ, ಜನವರಿ 11 : "ಮಿತ್ರೋ, ನಿಮ್ಮ ಜೇಬಲ್ಲಿ ಕೈಹಾಕಿರಿ. ಅಲ್ಲಿರುವ 500 ಮತ್ತು 1000 ರುಪಾಯಿ ನೋಟು ಇನ್ನು ಮುಂದೆ ಖಾಲಿ ಕಾಗದದ ಹಾಳೆ, ಕಾಗದದ ಹಾಳೆ! ಭ್ರಷ್ಟಾಚಾರದ ವಿರುದ್ಧ ಯುದ್ಧ ಮಾಡಬೇಕಾಗಿದೆ. ನನಗೆ ನಿಮ್ಮ ಅಮೂಲ್ಯ ಸಮಯ ನೀಡಿ, ನಾನು ನಿಮಗೆ ಹೊಳೆಯುತ್ತಿರುವ ಹೊಸ ಭಾರತ ನೀಡುತ್ತೇನೆ!"

ಈ ಜಬರ್ದಸ್ತ್ ಡೈಲಾಗ್ ಹೊಡೆದಿದ್ದು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಯುದ್ಧ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಈ ಡೈಲಾಗನ್ನು ಪಕ್ಕಾ ಅಮಿತಾಭ್ ಬಚ್ಚನ್ ಶೈಲಿಯಲ್ಲಿ ಜೇಬಲ್ಲಿ ಕೈಹಾಕಿಕೊಂಡು, ಬಚ್ಚನ್ ಅವರನ್ನೇ ಅನುಕರಣೆ ಮಾಡುತ್ತ, ಮೋದಿಯನ್ನು ಅಣಕವಾಡುತ್ತ ಹೊಡೆದದ್ದು ಲಂಡನ್ನಿನಿಂದ ಮಂಗಳವಾರ ಆಗಮಿಸಿರುವ ರಾಹುಲ್ ಗಾಂಧಿ!

ಬುಧವಾರ ಜನ್ ವೇದನಾ ಸಮಾವೇಶದಲ್ಲಿ ಭರ್ಜರಿ ಡೈಲಾಗ್ ಹೊಡೆದು ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಂಡು ಸಭಿಕರಲ್ಲಿ ನಗೆಯುಕ್ಕಿಸುವಂತೆ ಮಾಡಿದ ರಾಹುಲ್ ಗಾಂಧಿ ಅವರು ಅಪನಗದೀಕರಣದ ಘೋಷಣೆ ಮಾಡಿದ್ದು ಥೇಟ್ ಅಮಿತಾಭ್ ಬಚ್ಚನ್ ಡೈಲಾಗ್ ನಂತೆ ಇತ್ತು ಎಂದು ಅಪಹಾಸ್ಯ ಮಾಡಿದ್ದಾರೆ. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು]

ತಮ್ಮ ಆಕ್ರೋಶವನ್ನು ಆರೆಸ್ಸೆಸ್ ಮೇಲೆ ತಿರುಗಿಸಿದ ರಾಹುಲ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷಗಳೆರಡು, ಅಪನಗದೀಕರಣವನ್ನು ಸಾಮಾನ್ಯ ಜನರ ಮೇಲೆ ಹೇರಿ ದೇಶವನ್ನು ಬರ್ಬಾದ್ (ಸರ್ವನಾಶ) ಮಾಡುತ್ತಿವೆ, ದ್ವೇಷ ಬಿತ್ತುತ್ತಿವೆ ಎಂದರು.

ಮಾತುಮಾತಿನಲ್ಲೂ ನರೇಂದ್ರ ಮೋದಿಯನ್ನು ಚುಚ್ಚಿದ ರಾಹುಲ್, 'ರಾಮ್ ನಾಮ್ ಜಪ್ನಾ, ಗರೀಬ್ ಕಾ ಮಾಲ್ ಅಪ್ನಾ' ಎಂಬ ನೀತಿಯನ್ನು ಅವರ (ಮೋದಿ) ಸೂಟ್ ಬೂಟ್‌ನ ಸರಕಾರ ಪಾಲಿಸುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು. [ರಾಹುಲ್ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]

ಭಾರತೀಯ ಸೇನೆ ಪಾಕಿಸ್ತಾನಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರೆ, ಇತ್ತಕಡೆ ಮೋದಿ ಬಡವರು ಮತ್ತು ರೈತರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಕೋಟ್ಯಂತರ ಜನ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತಿದ್ದರು. ಅವರಲ್ಲಿ ಭ್ರಷ್ಟರು ಇದ್ದರೆ? ಅವರೆಲ್ಲ ಬ್ಯಾಂಕ್ ಹಿಂಬದಿಯಲ್ಲಿ ನಿಂತಿದ್ದರು ಎಂದು ವ್ಯಂಗ್ಯವಾಡಿದರು.

ರಾಹುಲ್ ಮಾತ್ರವಲ್ಲ ಇನ್ನೂ ಹಲವಾರು ಮೋದಿ ವಿರೋಧಿಗಳು ವಾಗ್ದಾಳಿ ನಡೆಸಿದ್ದಾರೆ. ಅವು ಕೆಳಗಿನಂತಿವೆ. [ಮೋದಿಯವರ ಅಂತ್ಯದ ಆರಂಭವಾಗಿದೆ : ಸಿಂಗ್ ವ್ಯಂಗ್ಯ]

ಯಾರಿಗೂ ಹೆದರಬೇಡಿ : ರಾಹುಲ್ ಗಾಂಧಿ

ಯಾರಿಗೂ ಹೆದರಬೇಡಿ : ರಾಹುಲ್ ಗಾಂಧಿ

ಯಾರಿಗೂ ಹೆದರಬೇಡಿ ಎಂಬುದು ಕಾಂಗ್ರೆಸ್ ಮಂತ್ರ. ಆದರೆ ಜನರಲ್ಲಿ ಹೆದರಿಕೆಯನ್ನು ಬಿತ್ತುತ್ತರುವುದು ಬಿಜೆಪಿಯ ತಂತ್ರ. ಆದರೆ, ನೀವು ಯಾರಿಗೂ ಹೆದರಬೇಡಿ, ಸತ್ಯವನ್ನು ಧೈರ್ಯವಾಗಿ ಎದುರಿಸಿ.

ಟಿಎಂಸಿ ಹುಲಿಯೊಂದಿಗೆ ಹೋರಾಡುತ್ತದೆ : ಮಮತಾ ಬ್ಯಾನರ್ಜಿ

ಟಿಎಂಸಿ ಹುಲಿಯೊಂದಿಗೆ ಹೋರಾಡುತ್ತದೆ : ಮಮತಾ ಬ್ಯಾನರ್ಜಿ

ಭಾರತದ ಪ್ರಧಾನಿ ಒಂದು ಕಂಪನಿಯ ಸೇಲ್ಸ್ ಮ್ಯಾನ್ ರೀತಿ ವರ್ತಿಸುತ್ತಿದ್ದಾರೆ. ಆ ಕಂಪನಿಯ ಶೇ.40ರಷ್ಟು ಶೇರುಗಳನ್ನು ಬ್ಲಾಕ್ ಲಿಸ್ಟ್ ಆಗಿರುವ ಚೀನಾದ ಕಂಪನಿಯ ಮಾಲಿಕರ ಬಳಿ ಇವೆ. ತೃಣಮೂಲ ಕಾಂಗ್ರೆಸ್ ಯಾವತ್ತಿದ್ದರೂ ಹುಲಿಯೊಂದಿಗೆ ಹೋರಾಡುತ್ತದೆ. ಇಲಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಮೋದಿ ಅವರ ಅಂತ್ಯ : ಮನಮೋಹನ ಸಿಂಗ್

ಮೋದಿ ಅವರ ಅಂತ್ಯ : ಮನಮೋಹನ ಸಿಂಗ್

ಭಾರತದ ಹಣಕಾಸು ವ್ಯವಸ್ಥೆಯನ್ನು ಬದಲಾಯಿಸುವುದಾಗಿ ನರೇಂದ್ರ ಮೋದಿ ವಾಗ್ದಾನ ನೀಡಿದ್ದರು. ಆದರೆ, ಈಗ ಅವರದೇ ಅಂತ್ಯ ಆರಂಭವಾಗಿರುವುದು ವಿಪರ್ಯಾಸ. ಅಪನಗದೀಕರಣದಿಂದ ಭಾರತಕ್ಕೆ ಭಾರೀ ಹೊಡೆತ ಬಿದ್ದಿದೆ. ಕಳೆದ ಕೆಲ ತಿಂಗಳಲ್ಲಿ ಕೆಟ್ಟ ಪರಿಸ್ಥಿತಿ ಇನ್ನಷ್ಟು ವಿಷಮಿಸಿದೆ.

ಸಂಪುಟ ಸಭೆ ನಡೆಸಿದ ದಾಖಲೆಯಿಲ್ಲ : ಪಿ ಚಿದಂಬರಂ

ಸಂಪುಟ ಸಭೆ ನಡೆಸಿದ ದಾಖಲೆಯಿಲ್ಲ : ಪಿ ಚಿದಂಬರಂ

ನವೆಂಬರ್ 8ರಂದು ನೋಟ್ ನಿಷೇಧ ಮಾಡಿದಾಗ ಸಂಪುಟ ಸಭೆ ನಡೆದ ಯಾವುದೇ ದಾಖಲೆಗಳಿಲ್ಲ. ಅಪನಗದೀಕರಣವನ್ನು ಘೋಷಿಸುವ ಸಮಯದಲ್ಲಿ ನರೇಂದ್ರ ಮೋದಿಯವರು ಎಲ್ಲ ಮಂತ್ರಿಗಳನ್ನು ಕೈದಿಗಳನ್ನಾಗಿಸಿದ್ದರು. ಆ ಸಮಯದಲ್ಲಿ ಆರ್ಬಿಐ ಅಪನಗದೀಕರಣ ಕುರಿತಂತೆ ಎಷ್ಟು ನಿರ್ದೇಶಕರಿಗೆ ನೋಟೀಸ್ ನೀಡಿತ್ತು?

ಮೋದಿ ಪದ್ಮಾಸನ ಹಾಕುವ ಅಗತ್ಯವಿಲ್ಲ : ಸಚಿನ್ ಪೈಲಟ್

ಮೋದಿ ಪದ್ಮಾಸನ ಹಾಕುವ ಅಗತ್ಯವಿಲ್ಲ : ಸಚಿನ್ ಪೈಲಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪದ್ಮಾಸನ ಮಾಡುವ ಅವಶ್ಯಕತೆಯೇ ಇಲ್ಲ. ನವೆಂಬರ್ 8ರಂದು ನೋಟ್ ನಿಷೇಧ ಜಾರಿಗೆ ತಂದು ಅವರು ಇಡೀ ಹಿಂದೂಸ್ತಾನದ ಶಿರ್ಸಾಸನ ಮಾಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rahul Gandhi said PM Narendra Modi's DeMonetisation announcement on November 8 sounded like Amitabh Bachchan's movie dialogue. Rahul Gandhi made mockery of every move by Modi at Jan Vedna Sammelan held in New Delhi on 11th January.
Please Wait while comments are loading...