ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಎಂದೂ ಟೀ ಮಾರಿಲ್ಲ, ಅದು ಚುನಾವಣೆ ಗಿಮಿಕ್ ಅಷ್ಟೆ: ತೊಗಾಡಿಯಾ

|
Google Oneindia Kannada News

ಆಗ್ರಾ, ಜನವರಿ 22: ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿ ಮೋದಿ ಟೀ ಮಾರುತ್ತಿದ್ದರು ಎಂದು ಸುಳ್ಳು ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷದ್ ಅಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ. ಇವರು ಮೋದಿ ಅವರ ಬಹು ಕಾಳದ ಗೆಳೆಯರು ಕೂಡಾ.

'ನಾನು ಮತ್ತು ನರೇಂದ್ರ ಮೋದಿ 43 ವರ್ಷದ ಗೆಳೆಯರು ಆದರೆ ಮೋದಿ ಟೀ ಮಾರುವುದನ್ನು ಎಂದೂ ನೋಡಿಲ್ಲ ಎಂದು ವಿಶ್ವಹಿಂದೂ ಪರಿಷದ್‌ನ ಮಾಜಿ ಅಧ್ಯಕ್ಷರೂ ಆಗಿರುವ ತೊಗಾಡಿಯಾ ಬಾಂಬ್ ಸಿಡಿಸಿದ್ದಾರೆ.

ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಮಮಂದಿರ ಕಟ್ಟುವ ಉದ್ದೇಶವೇ ಇಲ್ಲ ಎಂದಿರುವ ಅವರು, ಬೇಕೆಂದೇ ರಾಮ ಮಂದಿರ ನಿರ್ಮಾಣವನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Modi never selled tea, its just a election stunt: Praveen Togadiya

ಮೋದಿ ಹೇಳಿಕೆ ಬಳಿಕ ಆರ್‌ಎಸ್‌ಎಸ್‌ ಭಯ್ಯಾಜಿ ಜೋಷಿ ಸಹ ರಾಮ ಮಂದಿರ ನಿರ್ಮಾಣಕ್ಕೆ ಇನ್ನೂ ಐದು ವರ್ಷ ಬೇಕು ಎಂದು ಹೇಳಿದ್ದಾರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಂದೂಗಳನ್ನು ಕತ್ತಲಲ್ಲಿ ಇರಿಸಿದ್ದಾರೆ ಆದರೆ ಈಗ ಹಿಂದುಗಳು ಈಗ ಎಚ್ಚೆತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ತ್ರಿವಳಿ ತಲಾಖ್ ಮಸೂದೆಗೆ ಅಷ್ಟೋಂದು ಶ್ರಮವಹಿಸಿದ ಮೋದಿ ರಾಮಮಂದಿರದ ಬಗ್ಗೆ ಏಕೆ ಅಷ್ಟು ಆಸಕ್ತಿ ತೋರುತ್ತಿಲ್ಲ ಎಂದು ಪ್ರಶ್ನೆ ಮಾಡಿರುವ ಅವರು, ಮೋದಿ ಇನ್ನೊಮ್ಮೆ ಪ್ರಧಾನ ಮಂತ್ರಿ ಆದರೂ ರಾಮ ಮಂದಿರ ನಿರ್ಮಾಣ ಮಾಡುವುದಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಮಮಂದಿರ ಜೀವದ್ರವ್ಯ ಇದ್ದಂತೆ ಎಂದು ಟೀಕಿಸಿದ್ದಾರೆ.

ಏನಾದರಾಗಲಿ ಮಂದಿರ ಅಲ್ಲೇ ಕಟ್ಟುವೆವು: ಅಮಿತ್ ಶಾ ಪುನರುಚ್ಛಾರ ಏನಾದರಾಗಲಿ ಮಂದಿರ ಅಲ್ಲೇ ಕಟ್ಟುವೆವು: ಅಮಿತ್ ಶಾ ಪುನರುಚ್ಛಾರ

ಫೆಬ್ರವರಿ 9 ಕ್ಕೆ ಹಿಂದುಗಳ ಪಕ್ಷವನ್ನು ಸ್ಥಾಪಿಸುತ್ತಿರುವುದಾಗಿ ಘೋಷಿಸಿರುವ ತೊಗಾಡಿಯಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮರುದಿನದಿಂದಲೇ ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭ ಮಾಡಲಾಗುವುದು. ಕಾಶ್ಮೀರದಲ್ಲಿ ಆರ್ಟಿಕಲ್ 35ಎ ಅನ್ನು ಸಹ ಕೂಡಲೇ ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ.

ವಾರಣಾಸಿಯಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆದ ಪ್ರಧಾನಿ ಮೋದಿವಾರಣಾಸಿಯಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆದ ಪ್ರಧಾನಿ ಮೋದಿ

ಪ್ರವೀಣ್ ಭಾಯ್ ತೊಗಾಡಿಯಾ ಅವರ ಈ ಹೇಳಿಕೆಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪ್ರಮುಖ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಿದೆ.

English summary
PM Narendra Modi and I friends from 43 years, I never saw him selling tea said Praveen Togadiya. He said that the Prime Minister uses this 'tea-seller' image only to gain public sympathy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X