• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಫೇಲ್, ಆದ್ರೂ ಮೋದಿ ಪಾಸ್! ಬಿಜೆಪಿ ಸಮೀಕ್ಷೆ ಹೇಳಿದ ಸತ್ಯಸಂಗತಿ!

|
   ಬಿಜೆಪಿ ಫೇಲ್ ಆದ್ರೂ ನರೇಂದ್ರ ಮೋದಿ ಜನಪ್ರಿಯತೆ ಕಮ್ಮಿ ಆಗಿಲ್ಲ | ಸಮೀಕ್ಷೆ ಹೇಳಿದ ಸಂಗತಿ | Oneindia Kannada

   ನವದೆಹಲಿ, ಡಿಸೆಂಬರ್ 03: ಬಿಜೆಪಿಯ ಆಂತರಿಕ ಸಮೀಕ್ಷೆಯೊಂದರ ಪ್ರಕಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಜನರಿಗೆ ತೃಪ್ತಿ ನೀಡದೆ ಇದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.

   2019 ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯ ನಡೆಸಿದ ಆಂತರಿಕ ಸಮೀಕ್ಷೆಯೊಂದರ ಪ್ರಕಾರ, ಬಿಜೆಪಿ ಸರ್ಕಾರದ ವೈಫಲ್ಯದ ನಡುವೆಯೂ ಮೋದಿಯವರೇ ಅತ್ಯಂತ ಬಲಾಢ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ.

   ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್

   ಲೋಕಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗ, ಬಿಜೆಪಿ ಈ ಸಮೀಕ್ಷೆ ನಡೆಸಿದೆ. ಸುಮಾರು ನಾಲ್ಕೈದು ತಿಂಗಳ ಕಾಲ ಸಮೀಕ್ಷೆ ನಡೆದಿದ್ದು, 34,000 ಸಾವಿರ ಜನರ ಪ್ರತಿಕ್ರಿಯೆ ಪಡೆಯಲಾಗಿದೆ. ಈ ಸಮೀಕ್ಷೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

   2014 ಕ್ಕಿಂತ ಹೆಚ್ಚು ಬೆಂಬಲ!

   2014 ಕ್ಕಿಂತ ಹೆಚ್ಚು ಬೆಂಬಲ!

   2014 ಶೇ.59 ರಷ್ಟು ಜನ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದಿದ್ದರೆ, 2019 ರಲ್ಲಿ ಶೇ. 63 ರಷ್ಟು ಜನ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ! ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೇ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

   ಸರ್ಕಾರದ ಬಗ್ಗೆ ಕೊಂಚ ಮುನಿಸು!

   ಸರ್ಕಾರದ ಬಗ್ಗೆ ಕೊಂಚ ಮುನಿಸು!

   ಅಪನಗದೀಕರ, ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಕೆಂದ್ರ ಸರ್ಕಾರದ ಕೆಲವು ಕ್ರಾಂತಿಕಾರಿ ನಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಗಗನಕ್ಕೇರಿದ ತೈಲ ಬೆಲೆ, ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆ... ಈ ಎಲ್ಲವೂ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಕೊಂಚ ಮುನಿಸು ತಂದಿರುವುದು ಸುಳ್ಳಲ್ಲ. ಆದರೆ ಪ್ರಧಾನಿ ಮೂದಿಯವರ ನಾಯಕತ್ವದ ಎದುರು ಇವೆಲ್ಲ ಗೌಣ ಎಂದು ಭಾವಿಸಿರುವ ಜನರು, ಇಷ್ಟೆಲ್ಲ ವೈಫಲ್ಯಗಳಿದ್ದಾಗ್ಯೂ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ.

   ಆರು ತಿಂಗಳ ಒಟ್ಟಾರೆ ಚುನಾವಣಾ ಸಮೀಕ್ಷೆ: ಏನು ಹೇಳುತ್ತೆ ಮೋದಿ ಭವಿಷ್ಯ?

   ನಿರಂತರ ಜನಸಂಪರ್ಕ

   ನಿರಂತರ ಜನಸಂಪರ್ಕ

   ತಮ್ಮೆಲ್ಲ ಬಿಡುವಿಲ್ಲದ ಕಾರ್ಯಚಟುವಟಿಯೆ ನಡುವೆಯೂ, ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಅವಕಾಶವನ್ಯಾವುದನ್ನೂ ಮೋದಿ ಬಿಟ್ಟುಕೊಟ್ಟಿಲ್ಲ. ಮನ್ ಕಿ ಬಾತ್ ಮೂಲಕ ಪ್ರತಿ ತಿಂಗಳೂ ಜನರನ್ನು ತಲುಪುವ, ವಿಡಿಯೋ ಕಾನ್ಫಿರೆನ್ಸ್ ಮೂಲಕ ಜನರ ದನಿಗೆ ಕಿವಿಯಾಗುವ, ಯಾವುದೇ ಸ್ಥಳಕ್ಕೆ ತೆರಳಿದರೂ ಅಲ್ಲಿನ ಯುವಕರೊಂದಿಗೆ ಸಂವಾದ ನಡೆಸುವ ಮೋದಿಯವರು ಜನಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚಾಗಲೂ ಅದೂ ಒಂದು ಕಾರಣ ಎನ್ನಲಾಗಿದೆ.

   ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ

   ಯಾವ ಯೋಜನೆಗೆ ಎಷ್ಟು ಮಾರ್ಕ್ಸ್?

   ಯಾವ ಯೋಜನೆಗೆ ಎಷ್ಟು ಮಾರ್ಕ್ಸ್?

   ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜನರು ಇಷ್ಟಪಟ್ಟಿಲ್ಲ. ಜಿಎಸ್ಟಿಯನ್ನು 48% ರಷ್ಟು ಜನ ವಿರೋಧಿಸಿದ್ದರೆ, ಕೇವಲ 29% ರಷ್ಟು ಜನ ಒಪ್ಪಿಕೊಂಡಿದ್ದಾರೆ. ಮೋದಿಯವರ ಸ್ವಚ್ಛ ಭಾರತ ಯೋಜನೆಯೂ ಫಲಕಾರಿಯಾಗಿಲ್ಲ ಅಂತಾರೆ ಜನರು. ಇನ್ನು ಜೀವನ್ ಜ್ಯೋತಿ ಭಿಮಾ ಯೋಜನೆ(ವಿಮೆ)ಯನ್ನು ಶೇ. 45ರಷ್ಟು ಜನ ಒಪ್ಪಿದ್ದರೆ, ಶೇ. 53 ರಷ್ಟು ಜನ ಉಜ್ವಲ ಯೋಜನೆಯನ್ನು ಒಪ್ಪಿದ್ದಾರೆ.

   ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಮನಮೋಹನ್ ಸಿಂಗ್ ಕಿವಿಮಾತು

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An internal survey of BJP tells, Brand Modi appears strong, but his party and various schemes introduced by his government fail to seek attention of people.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more