ಕಡಿಮೆ ಬೆಲೆಗೆ ಔಷಧಿ ಮಾರಲು ಮಳಿಗೆ ತೆರೆಯಲಿದೆ ಕೇಂದ್ರ ಸರ್ಕಾರ

Posted By:
Subscribe to Oneindia Kannada

ದೆಹಲಿ, ಆಗಸ್ಟ್ 31: ಇನ್ನು ಒಂದು ವರ್ಷದಲ್ಲಿ ದೇಶದಲ್ಲಿ ಮೂರು ಸಾವಿರ ಜನ್ ಔಷಧಿ ಮಳಿಗೆಗಳು ಆರಂಭವಾಗುತ್ತವೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಶುರುವಾಗ ಈ ಅಂಗಡಿಯಲ್ಲಿ ಔಷಧಿಯ ಮಾರುಕಟ್ಟೆ ದರಕ್ಕಿಂತ ಶೇ 30ರಿಂದ 40ರಷ್ಟು ಬೆಲೆ ಕಡಿಮೆ ಇರುತ್ತದೆ ಎಂದು ಕೇಂದ್ರಸಚಿವ ಅನಂತಕುಮಾರ್ ಹೇಳಿದರು.

ನವದೆಹಲಿಯಲ್ಲಿ ಎನ್ ಪಿಪಿಎ ಫೌಂಡೇಷನ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಎರಡೂವರೆ ವರ್ಷದಲ್ಲಿ 900 ಔಷಧಿಗಳ ಮೇಲೆ ಬೆಲೆ ನಿಯಂತ್ರಣ ಹೇರಿರುವುದರಿಂದ ಗ್ರಾಹಕರಿಗೆ 5 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ಹೇಳಿದರು.[ಆಗ್ರಾ ಸುತ್ತ ಸಂಜೆ ಸಂಚರಿಸುವಾಗ ಸ್ಕರ್ಟ್ ಧರಿಸಬೇಡಿ]

Mobile app 'pharma sahi daam' launched in Delhi

ನ್ಯೂ ನ್ಯಾಷನಲ್ಪ್ ಲಿಸ್ಟ್ ಆಫ್ ಎಸೆನ್ಷಿಯಲ್ ಮೆಡಿಸಿನ್ಸ್-2015 ಜಾರಿಗೆ ತಂದ ಮೇಲೆ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ 368 ಹೊಸ ಔಷಧಿಗಳನ್ನು ಬೆಲೆ ನಿಯಂತ್ರಣದೊಳಗೆ ತರುವ ಪ್ರಸ್ತಾವ ತಂದಿದೆ ಎಂದು ಹೇಳಿದರು.

ಸಾಮಾನ್ಯ ವ್ಯಕ್ತಿಗೂ ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯಬೇಕು. ಅದಕ್ಕೆ ಕೈಗಾರಿಕೋದ್ಯಮಿಗಳು, ರಾಜ್ಯ ಸರ್ಕಾರ, ಇತರ ಇಲಾಖೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅನಂತಕುಮಾರ್ ಮನವಿ ಮಾಡಿದರು.[ಕಾಶ್ಮೀರ ಹಿಂಸಾಚಾರಕ್ಕೆ ತುಪ್ಪ ಸುರಿಯುತ್ತಿದೆ ಪಾಕ್: ಮುಫ್ತಿ ಕಿಡಿಕಿಡಿ]

ಇದೇ ಸಂದರ್ಭದಲ್ಲಿ ಎನ್ ಪಿಪಿಎ ರೂಪಿಸಿರುವ, ಔಷಧಗಳ ನಿಖರ ಬೆಲೆ ತಿಳಿಯುವ 'ಫಾರ್ಮಾ ಸಹಿ ದಾಮ್' ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು. ಪಾರ್ಮಾಸ್ಯುಟಿಕಲ್ ಉದ್ಯಮವೊಂದರಿಂದಲೇ 37 ಬಿಲಿಯನ್ ಡಾಲರ್ ಆದಾಯ ಬಂದಿದೆ. ಭಾರತದ ಔಷಧಗಳು 200 ದೇಶಗಳಿಗೆ ರಫ್ತಾಗುತ್ತಿದೆ ಎಂದರು.[ಜೆಎನ್ ಯು ರೇಪ್ ಕೇಸ್: ವಿದ್ಯಾರ್ಥಿ ಮುಖಂಡ ಅಂದರ್]

ಅಟಲ್ ಇನೊವೇಶನ್ ಯೋಜನೆ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು. ಫಾರ್ಮಾಸ್ಯುಟಿಕಲ್ ಪಾರ್ಕ್, ಮೆಡಿಕಲ್ ಡಿವೈಸ್ ಪಾರ್ಕ್, ಫಾರ್ಮಾಸ್ಯುಟಿಕಲ್ ಕ್ಲಸ್ಟರ್ ಆರಂಭಿಸಲು ಉತ್ತೇಜನ ನೀಡಲಾಗುವುದು ಎಂದು ಸಚಿವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Minister Ananth kumar launched a mobile App. developed by NPPA which shows the MRP fixed by NPPA for various scheduled drugs. Said, within one year, 3000 PM Jan Aushadhi Stores will be opened in the country covering all districts and tehsils.
Please Wait while comments are loading...