• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಂತ್ರಿಕ ದೋಷ: 20,000ಅಡಿ ಮೇಲೆ ಹಾರಿ,ವಾಪಸ್ಸಾದ ಏರ್ ಇಂಡಿಯಾ ವಿಮಾನ

|

ನವದೆಹಲಿ, ಮಾರ್ಚ್ 07: ಸುಮಾರು 200 ಜನ ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ವಾಪಸ್ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಘಟನೆ ಬುಧವಾರ ನಡೆದಿದೆ.

ದೆಹಲಿಯಿಂದ ಜರ್ಮನಿಯ ಫ್ರಾಂಕ್ ಫರ್ಟ್ ಗೆ ತೆರಳುತ್ತಿದ್ದ ಬೋಯಿಂಗ್ 787 ಏರ್ ಇಂಡಿಯಾ ವಿಮಾನ 20000 ಅಡಿ ಎತ್ತರ ತಲುಪುತ್ತಿದ್ದಂತೆಯೇ ಕ್ಯಾಬಿನ್ ಡಿಕಂಪ್ರೇಶನ್ ಸಮಸ್ಯೆಯನ್ನು ಎದುರಿಸಿತ್ತು.

ವಿಮಾನದಲ್ಲಿ ಕ್ಯಾಬಿನ್ ಪ್ರೆಶರ್ ನಿರ್ವಹಿಸದಿದ್ದರೆ ಏನಾಗುತ್ತೆ?

200 ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ವಿಮಾನವನ್ನು ವಾಪಸ್ ದೆಹಲಿ ವಿಮಾನ ನಿಲ್ದಾಣದಲ್ಲಿ ವಾಪಸ್ ಲ್ಯಾಂಡ್ ಮಾಡಲಾಯ್ತು.

Mid-air decompression: Air India flight from Delhi to Frankfurt returns after take off

ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಏರ್ ಇಂಡಿಯಾ ಆಡಳಿತ ಮಂಡಳಿ ತಿಳಿಸಿದೆ.

ಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯ: ವಿಮಾನದಲ್ಲಿ ಪ್ರಯಾಣಿಕರ ಪರದಾಟ

ವಿಮಾನ ಮೇಲಕ್ಕೆ ಹಾರುತ್ತಿದ್ದಂತೆಯೇ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಆ ಕಾರಣ ವಿಮಾನದ ಆಂತರಿಕ ಕ್ಯಾಬಿನ ವ್ಯವಸ್ಥೆಯಲ್ಲಿ ಆಮ್ಲಜನಕದ ಮಟ್ಟದಲ್ಲಿ ಸಮತೋಲನ ಕಂಡುಕೊಳ್ಳದೆ ಇದ್ದಲ್ಲಿ ಪ್ರಯಾಣಿಕರ ಪ್ರಾಣಕ್ಕೆ ಅಪಾಯವಾಗಬಹುದು.

ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು

ಕಳೆದ ಸೆಪ್ಟೆಂಬರ್ ನಲ್ಲಿ ಮುಂಬೈ ಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ವಿಮಾನಯಾನ ಸಿಬ್ಬಂದಿಯು ಕ್ಯಾಬಿನ್ ಪ್ರೆಶರ್ ನಿರ್ವಹಿಸುವ ಸ್ವಿಚ್ ಆನ್ ಮಾಡುವುದನ್ನೇ ಮರೆತ ಕಾರಣಕ್ಕೆ 30 ಕ್ಕೂ ಹೆಚ್ಚು ಪ್ರಯಾಣಿಕರು ಉಸಿರಾಟದ ಮಸ್ಯೆಯಿಂದ ಬಳಲಿದ್ದರು.

English summary
An Air India flight travelling from Delhi to Frankfurt wedsday suffered a mid-air decompression, returned back and passengers are safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X