ಧೈರ್ಯವಿದ್ರೆ ಲೋಕಸಭೆ ವಿಸರ್ಜಿಸಿ, ನರೇಂದ್ರ ಮೋದಿಗೆ ಮಾಯಾವತಿ ಚಾಲೆಂಜ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 24 : "ಒಂದು ವೇಳೆ ಪ್ರಧಾನಿಗೆ ಧೈರ್ಯವಿದ್ದರೆ ಲೋಕಸಭೆಯನ್ನು ವಿಸರ್ಜನೆ ಮಾಡಲಿ, ದೇಶದಲ್ಲಿ ಚುನಾವಣೆ ಘೋಷಿಸಲಿ, ಆಗ ಮಾತ್ರ ಸರಿಯಾದ ಸಮೀಕ್ಷೆ ಮಾಡಲು ಸಾಧ್ಯ" ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಕುಮಾರಿ ಮಾಯಾವತಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆದಿದ್ದಾರೆ.

ಗುರುವಾರ ಸಂಸತ್ತಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರಕಾರ ನಡೆಸಿರುವ ಸಮೀಕ್ಷೆಯೇ ಸುಳ್ಳು. ಇದೊಂದು ಪ್ರಾಯೋಜಿತ ಸಮೀಕ್ಷೆ ಎಂದು ಕೇಂದ್ರ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ. ನರೇಂದ್ರ ಮೋದಿ ಅವರು ಆ್ಯಪ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಶೇ.90ರಷ್ಟು ಜನರು ಅಪನಗದೀಕರಣವನ್ನು ಬೆಂಬಲಿಸುತ್ತಿದ್ದಾರೆ ಎಂಬುದಕ್ಕೆ ಪ್ರತಿಯಾಗಿ ಈ ರೀತಿ ಪ್ರತಿಕ್ರಿಯಿಸಿದರು. [ನೋಟು ನಿಷೇಧ: ನವೆಂಬರ್ 28ರಂದು ಭಾರತ್ ಬಂದ್!]

Mayawati challenges Narendra Modi to dissolve Lok Sabha

500 ಮತ್ತು 1000 ರು ಮುಖಬೆಲೆಯ ನೋಟಗಳನ್ನು ನಿಷೇಧ ಮಾಡಿ ಕೇಂದ್ರ ಸರಕಾರ ನವೆಂಬರ್ 8ರಂದು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನಿಂತ ತಿರುಗಿಬಿದ್ದಿವೆ. ಈ ನಿರ್ಧಾರವನ್ನು ಕೂಡಲೆ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನವೆಂಬರ್ 28, ಸೋಮವಾರದಂದು ಭಾರತದಾದ್ಯಂತ 'ಆಕ್ರೋಶ್ ದಿವಸ್' ಹಮ್ಮಿಕೊಂಡಿವೆ.


ವಿರೋಧಪಕ್ಷಗಳ ಆಕ್ರೋಶವನ್ನು ಶಮನಗೊಳಿಸಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಭೆ ಆಯೋಜಿಸಿದ್ದರು. ಆದರೆ, ನವೆಂಬರ್ 28ರವರೆಗೆ ಕೇಂದ್ರ ಸಚಿವರನ್ನು ಭೇಟಿಯಾಗದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ನಮ್ಮ ಉತ್ತರವನ್ನು ನವೆಂಬರ್ 28ರಂದೇ ನೀಡುತ್ತೇವೆ ಎಂದು ಅಬ್ಬರಿಸಿವೆ. [ನರೇಂದ್ರ ಮೋದಿ ಸಮೀಕ್ಷೆ: ನೋಟು ರದ್ದು ಬೆಂಬಲಿಸಿದ ಶೇ 93ರಷ್ಟು ಜನ!]

ಈ ಹಿನ್ನೆಲೆಯಲ್ಲಿ, ಸಂಸತ್ತಿನ ನರೇಂದ್ರ ಮೋದಿ ಅವರ ಚೇಂಬರ್ ನಲ್ಲಿ ಕೇಂದ್ರದ ಹಿರಿಯ ಸಚಿವರ ಸಭೆ ನಡೆಯುತ್ತಿದೆ. ಇದರಲ್ಲಿ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಮೊದಲಾದವರು ಭಾಗವಹಿಸಿದ್ದಾರೆ. ಇದಕ್ಕೆ ಸಮಾನಾಂತರವಾಗಿ ವಿರೋಧಿಗಳ ಸಭೆಯೂ ನಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If you have guts dissolve Lok Sabha, announce election, then only proper survey can be done... BSP leader Mayawati has challenged Narendra Modi on survey conducted on App to know what people think about demonetisation. Opposition has called for Akrosh Diwas on Novermber 28.
Please Wait while comments are loading...