ಬದುಕಿದ್ದ ಮಗುವನ್ನು ಸತ್ತಿದೆ ಎಂದ ಮ್ಯಾಕ್ಸ್ ಆಸ್ಪತ್ರೆ ಪರವಾನಗಿ ರದ್ದಾಗುತ್ತಾ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 04: ಇತ್ತೀಚೆಗೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆ, ಬದುಕಿದ್ದ ಮಗುವನ್ನು ಸತ್ತಿದೆ ಎಂದು ಘೋಷಿಸಿದ ಘಟನೆಗೆ ಸಂಬಂಧಿಸಿದಂತೆ, ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದೆ.

ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!

ಈ ಪ್ರಕರಣದ ಹಿನ್ನೆಲೆಯಲ್ಲಿ ಮ್ಯಾಕ್ಸ್ ಆಸ್ಪತ್ರೆ ತನ್ನ ಲೈಸೆನ್ಸ್ ಸಹ ಕಳೆದುಕೊಳ್ಳಬಹುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

Max hospital may lose licence for incorrectly declared a newborn dead

ಘಟನೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ತಜ್ಞರನ್ನೊಳಗೊಂಡ ತಂಡವೊಂದು ಈಗಾಗಲೇ ತನಿಖೆ ಆರಂಭಿಸಿದೆ. ತನಿಖೆಯ ನಂತರ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐಎಂಎ ಹೇಳಿದೆ.

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್?!

ನವೆಂಬರ್ 30 ರಂದು 20 ವರ್ಷದ ವರ್ಷ ಎಂಬ ಮಹಿಳೆ ದೆಹಲಿಯ ಶಾಲಿಮರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಕ್ಕಳು ಮೃತರಾಗಿದ್ದಾರೆಂದು ಘೋಷಿಸಿ, ಮಕ್ಕಳನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಕುಟುಂಬಕ್ಕೆ ಕೈಗೊಪ್ಪಿಸಿದ್ದರು.

ದುಃಖತಪ್ತರಾದ ಕುಟುಂಬದ ಜನರು ಮಕ್ಕಳ ಅಂತ್ಯಸಂಸ್ಕಾರ ಮಾಡುವುದಕ್ಕೆಂದು ತೆರಳಿದ್ದಾಗ, ಬಂಧುಗಳೊಬ್ಬರ ತೊಡೆ ಮೇಲಿದ್ದ ಗಂಡು ಮಗು ಇದ್ದಕ್ಕಿದ್ದಂತೇ ಕೈಕಾಲು ಆಡಿಸುವುದಕ್ಕೆ ಶುರುಮಾಡಿತ್ತು. ಉಸಿರಾಡುತ್ತಿರುವುದೂ ಗಮನಕ್ಕೆ ಬಂತು. ಇದರಿಂದ ದಿಗ್ಭ್ರಮೆಗೊಂಡ ಕುಟುಂಬಸ್ತರು ಮಗುವಿನ ದೇಹಕ್ಕೆ ಸುತ್ತಿದ್ದ ಪ್ಲಾಸ್ಟಿಕ್ ಅನ್ನು ತೆಗೆದು ಹತ್ತಿರದ ಆಸ್ಪತ್ರೆಗೆ ತೆರಳಿದಾಗ ಮಗು ಬದುಕಿದೆ ಎಂಬುದು ತಿಳಿದಿತ್ತು.

ವೈದ್ಯರ ಬೇಜವಾಬ್ದಾರಿ ವರ್ತನೆಗಾಗಿ ಮ್ಯಾಕ್ಸ್ ಆಸ್ಪತ್ರೆ ವಿರುದ್ಧ ದೂರು ದಾಖಲಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Max hospital in New Delhi's Shalimar bagh, which had announced twin children were dead, even though one of the children is alive, may lose its licence, Delhi health minister Satyendra Jaian said to media. The hospital has already fired two of its doctors.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ