ಕೇಜ್ರಿವಾಲ್‌ಗೆ ಕಪಾಳಮೋಕ್ಷ ಮಾಡಿದ್ದ ಯುವಕ ಹೇಳಿದ್ದೇನು?
Recommended Video
ನವದೆಹಲಿ, ಮೇ 10: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದ ಯುವಕ ಸುರೇಶ್ ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿ ಅಲ್ಲ, ಈ ರೀತಿ ಹೊಡೆಯುವಂತೆ ನನಗೆ ಪ್ರಚೋದನೆಯನ್ನೂ ನೀಡಲ್ಲ, ಪೊಲೀಸರು ಕೂಡ ನನ್ನೊಂದಿಗೆ ದುರ್ವರ್ತನೆ ತೋರಿಸಿಲ್ಲ ಆದರೆ ನಾನು ಮಾಡಿದ್ದು ತಪ್ಪು ಎಂದು ಎಚ್ಚರಿಸಿದ್ದಾರೆ ಎಂದು ಸುದ್ದಿಸಂಸ್ಥೆಗೆ ಸುರೇಶ್ ತಿಳಿಸಿದ್ದಾರೆ.
ಇದಲ್ಲದೆ ನಾನು ಕೇಜ್ರಿವಾಲ್‌ಗೆ ಏಕೆ ಹೊಡೆದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ ಇದಕ್ಕಾಗಿ ವಿಷಾಧಿಸುತ್ತೇನೆ ಎಂದು ತಿಳಿಸಿದ್ದಾರೆ.

ಮೇ 4ರಂದು ದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಕೇಜ್ರಿವಾಲ್ ಕೆನ್ನೆಗೆ ಈ ಯುವಕ ಕಪಾಳಮೋಕ್ಷ ಮಾಡಿದ್ದ, ಇದು ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ ಮೂರನೇ ಘಟನೆ ಇದಾಗಿತ್ತು.
ನರೇಂದ್ರ ಮೋದಿಯ ಅಥವಾ ಬಿಜೆಪಿ ಪ್ರಚೋದನೆಯಿಂದ ನನ್ನ ಮೇಲೆ ದಾಳಿಯಾಗಿದೆ. ಸೂಕ್ತ ಭದ್ರತೆ ನೀಡಲು ವಿಫಲರಾದ ಮೋದಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಸುರೇಶ್ ಆಪ್ ಕಾರ್ಯಕರ್ತನಾಗಿದ್ದು, ಈ ಕೇಜ್ರಿವಾಲ್ ಮಾಡಿದ್ದ ನಾಟಕ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪೂರಕವೆಂಬಂತೆ ದೆಹಲಿ ಪೊಲೀಸರು ಕೂಡ ಸುರೇಶ್ ಆಪ್ ಕಾರ್ಯಕರ್ತ ಎಂದು ತಿಳಿಸಿದ್ದರು.
ಕೇಜ್ರಿವಾಲ್ ವರ್ತನೆಯಿಂದ ಬೇಸತ್ತಿದ್ದ ಸುರೇಶ್ ಈ ರೀತಿ ದಾಳಿ ನಡೆಸಿದ್ದ ಎಂದು ಪೊಲೀಸ್ ತಿಳಿಸಿದ್ದರು.












Click it and Unblock the Notifications