ಅಪೌಷ್ಟಿಕತೆಯಲ್ಲಿ ಉತ್ತರ ಕೋರಿಯಾಕ್ಕಿಂತ ಕೆಳಸ್ಥಾನದಲ್ಲಿ ಭಾರತ!
ನವದೆಹಲಿ, ನವೆಂಬರ್ 21: ಅಪೌಷ್ಟಿಕತೆಯಲ್ಲಿ ಭಾರತ, ಉತ್ತರ ಕೋರಿಯಾ ಮತ್ತು ಮಯನ್ಮಾರ್ ಗಳಿಗಿಂತ ಕೆಳ ಸ್ಥಾನದಲ್ಲಿದೆ ಎಂಬ ಕಟುಸತ್ಯ ವಾಷಿಂಗ್ಟನ್ ಮೂಲದ ಇಂಟರ್ ನ್ಯಾಶನಲ್ ಫುಡ್ ಪಾಲಿಸಿ ರೀಸರ್ಚ್ ಇನ್ ಸ್ಟಿಟ್ಯೂಟ್(IFPRI) ನೀಡಿದ ವರದಿಯಿಂದ ಬಯಲಾಗಿದೆ.
ವರ್ಲ್ಡ್ ಎಕನಾಮಿಕ್ ಫೋರಮ್ ನೀಡುವ ಶ್ರೇಯಾಂಕದಲ್ಲಿ ಕಳೆದ ವರ್ಷಕ್ಕಿಂತ ಮೂರು ಅಂಕ ಕುಸಿದಿರುವ ಭಾರತ, 119 ರಾಷ್ಟ್ರಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಭಾರತದಲ್ಲಿ ಹಸಿವಿನ ಸಮಸ್ಯೆ ಎಂಬುದು ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿದೆ ಮತ್ತು ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ಏಷ್ಯಾ ಖಂಡದಲ್ಲಿರುವ ದೇಶಗಳಲ್ಲಿ ಕೇವಲ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳನ್ನು ಬಿಟ್ಟರೆ ಉಳಿದೆಲ್ಲ ದೇಶಗಳೂ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ.
ಭಾರತ 2020ರ ಹೊತ್ತಿಗೆ ಅಪೌಷ್ಟಿಕತೆ ಮುಕ್ತ ದೇಶವಾಗುವ ಗುರಿ ಹೊಂದಿದೆ. ಆದರೆ ಈ ಸುದ್ದಿ ಆ ಗುರಿಗೆ ತಲುಪುವ ಸಾಧ್ಯತೆಯನ್ನು ಕಡಿಮೆಗೊಳಿಸಿರುವುದು ಸುಳ್ಳಲ್ಲ.












Click it and Unblock the Notifications