ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಈ ಅಪಘಾತದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವೆಂಬರ್ 08, ನವದೆಹಲಿ : ಯಮುನಾ ಎಕ್ಸ್ ಪ್ರೆಸ್ ಹೈವೆಯಲ್ಲಿ ನವೆಂಬರ್ 08 ಬುಧವಾರ ಬೆಳಿಗ್ಗೆ ದಟ್ಟ ಮಂಜು ಮುಸುಕಿದ ವಾತಾವರಣ. ಕಣ್ಣಿನ ಮುಂದೆ ಮಂಜು ಕವಿದು ಬೆಳ್ಳನೆಯ ಮಂಜು ಬಿಟ್ಟರೆ ಎಲ್ಲವೂ ಅಗೋಚರ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತಹಾ ಪರಿಸ್ಥಿತಿ. ಇಂತಹಾ ಸ್ಥಿತಿಯಿಂದಲೇ ಇಲ್ಲಿ 24 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್

  ದೆಹಲಿ ಚಳಿಗಾಲ ಸುಂದರತೆಯ ಜೊತೆಗೆ ಭಿಕರತೆಯ ಅನುಭವವನ್ನೂ ಕೊಡುತ್ತದೆ ಎಂಬುದಕ್ಕೆ ಯಮುನಾ ಎಕ್ಸ್ ಪ್ರೆಸ್ ಹೈವೆಯಲ್ಲಿ ಇಂದು ನವೆಂಬರ್ 08 ಬುಧವಾರ ನಡೆದ ಅಪಘಾತವೇ ಸಾಕ್ಷಿ. ಮಂಜು ಮುಸುಕಿದ ದಾರಿಯಲ್ಲಿ ಮೊದಲಿಗೆ ಆಪಲ್ ಹೊತ್ತು ಹೋಗುತ್ತಿದ್ದ ಟ್ರಕ್ ಒಂದು ತನ್ನ ಮುಂದಿನ ಕಾರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಅಡ್ಡ ತಿರುಗಿ ರಸ್ತೆಯಲ್ಲೇ ನಿಂತುಬಿಟ್ಟಿದೆ. ಇದಾದ ನಂತರ ಹಿಂದಿನಿಂದ ಬಂದ 24 ವಾಹನಗಳು ಚುಂಬಕ ಶಕ್ತಿಗೆ ಆಕರ್ಷಿತಗೊಂಡಂತೆ ಒಂದರಹಿಂದೊಂದು ಗುದ್ದಿಕೊಂಡಿವೆ.

  ಮಂಜು ಕಡಿಮೆ ಆಗುವವರೆಗೂ ಅಪಘಾತ

  ಸುಮಾರು 1 ಗಂಟೆ ಕಾಲ ಅಪಘಾತದ ಸರಣಿ ಮುಂದುವರೆದಿದೆ. ದಟ್ಟ ಮಂಜಿನಿಂದಾಗಿ ರಸ್ತೆಯಲ್ಲಿ ಏನೂ ಕಾಣದ ಪರಿಸ್ಥಿತಿ ಇದ್ದ ಕಾರಣ ಬರುತ್ತಿದ್ದ ವಾಹನಗಳಿಗೆ ಸೂಚನೆಯೂ ಕೊಡಲಾಗದ ಸ್ಥಿತಿ. ಅಪಘಾತ ಸಂಭವಿಸಿದ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ವಾಹನ ಸವಾರರು ರಸ್ತೆ ಪಕ್ಕ ನಿಂತುಬಿಟ್ಟಿದ್ದಾರೆ. ಮಂಜು ಕಡಿಮೆಯಾಗುವವರೆಗೂ ಸರಣಿ ಅಪಘಾತ ಮುಂದುವರೆದಿದೆ.

  ಒಬ್ಬರ ಸ್ಥಿತಿ ಚಿಂತಾಜನಕ

  ಸರಣಿ ಅಪಘಾತದಲ್ಲಿ 1 ವ್ಯಕ್ತಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಆಗ್ರಾ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

  #ಡೆಲ್ಲಿಸ್ಮಾಗ್

  ಅಪಘಾತ ನೆಡೆದ ಕೆಲವೇ ಗಂಟೆಗಳಲ್ಲಿ ಅಪಘಾತದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡೆಲ್ಲಿಸ್ಮಾಗ್ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ವಿಟರ್ ಟಾಪ್ ಟ್ರೆಂಡಿಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಯಮುನಾ ಎಕ್ಸ್ ಪ್ರೆಸ್ ವೇ ಅಪಘಾತ.

  ಅತಿ ಹೆಚ್ಚು ಮಂಜು

  ಅತಿ ಹೆಚ್ಚು ಮಂಜು

  ಪ್ರತಿ ವರ್ಷ ದೆಹಲಿಯಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಅತಿ ಮಂಜು ಇರುತ್ತದೆ. ಹಾಗಾಗಿ ಯಮುನಾ ಹೈವೇ ನಲ್ಲಿ ಈ ತಿಂಗಳಿನಲ್ಲಿ ಅಪಘಾತ ಮಾಮೂಲಿ. ಆದರೆ ನವೆಂಬರ್ 8 ರ ಬುಧವಾರ ನಡೆದ ಅಪಘಾತ ಇತ್ತೀಚಿನ ವರ್ಷಗಳಲ್ಲಿ ನಡೆದ ಅಪಘಾತಗಳಲ್ಲಿಯೇ ಅತಿ ಭಿಕರ ಎಂದಿದ್ದಾರೆ ಸ್ಥಳಿಯರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  At least one person was killed and left six others injured after at least 24 speeding vehicles rammed into each other on the Agra-Noida Yamuna Expressway on Wednesday due to dense fog enveloping the national capital and adjoining areas.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more