• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರಿಗೆ ಸಹಾಯ: ಬಾಳೆ ಎಲೆಯಲ್ಲಿ ಮಹೀಂದ್ರ ಕಾರ್ಮಿಕರ ಊಟ

|

ನವ ದೆಹಲಿ, ಏಪ್ರಿಲ್ 09: ಲಾಕ್‌ಡೌನ್ ಸಮಯದಲ್ಲಿ ರೈತರು ತಮ್ಮ ಆಹಾರ ಪದಾರ್ಥಗಳನ್ನು ಸರಿಯಾಗಿ ಮಾರಾಟ ಮಾಡಲು ಆಗುತ್ತಿಲ್ಲ ಎಂದು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹೀಂದ್ರ ಕಂಪನಿಯ ಕಾರ್ಮಿಕರು ರೈತರಿಗೆ ತಮ್ಮ ಕೈಲಾಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ.

ತಮ್ಮ ಕಂಪನಿಯಲ್ಲಿ ಊಟ ಮಾಡಲು ತಟ್ಟೆಗಳ ಬದಲು, ಬಾಳೆ ಎಲೆಗಳನ್ನು ಬಳಸಲು ನಿರ್ಧಾರ ಮಾಡಿದ್ದಾರೆ. ಕಂಪನಿಯ ಎಲ್ಲ ಕಾರ್ಮಿಕರು ಬಾಳೆ ಎಲೆಯನ್ನೇ ಬಳಸುತ್ತಿದ್ದಾರೆ. ಊಟ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಅವರು, ಒಬ್ಬರಿಂದ ಒಬ್ಬರು ದೂರ ಕುಳಿತುಕೊಂಡಿದ್ದಾರೆ.

ಪಂಚೆ ತೊಟ್ಟು ವರ್ಕ್ ಫ್ರಮ್ ಹೋಮ್ ಮಾಡ್ತೀನಿ ಅಂದ್ರು ಆನಂದ್ ಮಹೇಂದ್ರ

ಬಾಳೆ ಎಲೆ ಐಡಿಯಾ ಬಗ್ಗೆ ಮಹೀಂದ್ರ ಗ್ರೂಪ್ ಚೇರ್ ಮನ್ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. ಪತ್ರಕರ್ತರೊಬ್ಬರು ಬಾಳೆ ಎಲೆ ಬಳಸಿ ರೈತರಿಗೆ ಈ ಸಮಯದಲ್ಲಿ ಸಹಾಯ ಮಾಡಬಹುದು ಎನ್ನುವ ಐಡಿಯಾವನ್ನು ಆನಂದ್‌ ಮಹೀಂದ್ರರಿಗೆ ನೀಡಿದ್ದಾರೆ. ಅವರಿಗೂ ಇದು ಸರಿ ಎನಿಸಿದೆ. ಹೀಗಾಗಿ ಅಲ್ಲಿನ ಕಾರ್ಮಿಕರು ಬಾಳೆ ಎಲೆ ಬಳಸುತ್ತಿದ್ದಾರೆ.

ಮದುವೆಗಳು, ಬೇರೆ ಬೇರೆ ಕಾರ್ಯಕ್ರಮಗಳು ಇದ್ದರೆ ಬಾಳೆ ಎಲೆಗಳು ಮಾರಾಟ ಆಗುತ್ತವೆ. ಆದರೆ, ಈಗ ಲಾಕ್‌ಡೌನ್ ಸಮಯದಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ. ಇಂತಹ ಸಮಯದಲ್ಲಿ ಮಹೀಂದ್ರ ರೈತರಿಂದ ಬಾಳೆ ಎಲೆಗಳನ್ನು ಕೊಂಡುಕೊಳ್ಳುತ್ತಿದೆ.

ಆನಂದ್ ಮಹೀಂದ್ರ ಅವರ ಈ ಕಾರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬರು ಊಟ ಮಾಡಿದ ಎಲೆಗಳನ್ನು ಹಸುಗಳಿಗೆ ನೀಡಿದರೆ ಇನ್ನಷ್ಟು ಉಪಯೋಗ ಆಗುತ್ತದೆ ಎಂದು ಸೂಚಿಸಿದ್ದಾರೆ.

English summary
Mahindra factory workers use banana leaves as plates to help struggling farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X