ಒಬ್ಬೊಬ್ಬ ಮತದಾರರಿಗೂ 600 ರೂ ಸಂದಾಯವಾಗಲಿದೆ!

ದಿಲ್ಲಿ ನೆಲೆಯ Centre for Media Studies (CMS) ಈ ಅಧ್ಯಯನ ವರದಿ ಸಲ್ಲಿಸಿದ್ದು, ಇದರಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಒಡ್ಡಬಹುದಾದ ಪ್ರಲೋಭೆಗಳು ಒಳಗೊಂಡಿಲ್ಲ. ಇದು ಕೇವಲ ಮತದಾನದ ಖರ್ಚು ಅಷ್ಟೇ ಎಂದು CMS ಅಧ್ಯಕ್ಷ ಭಾಸ್ಕರರಾವ್ ತಿಳಿಸಿದ್ದಾರೆ.
ಆದರೆ ದುಃಸ್ಥಿತಿಯಲ್ಲಿರುವ ದೇಶದ ಆರ್ಥಿಕತೆಗೆ ಇದು ಅತ್ಯಗತ್ಯವಾದ ಉತ್ತೇಜ ನೀಡಲಿದೆ. ಅಂದರೆ ನಮ್ಮ ಅರ್ಥ ವ್ಯವಸ್ಥೆಯೊಳಕ್ಕೆ 3,000 ಕೋಟಿ ರೂ. ನುಸುಳುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ವಲ್ಪ ಮಾರಕವಾದರೂ ಇಷ್ಟೊಂದು ಪ್ರಮಾಣದ ನಮ್ಮದೇ ಹಣ ನಮ್ಮ ಮಧ್ಯೆಯೇ ಹರಿದಾಡುತ್ತದೆ ಎಂಬ ಸಮಾಧಾನವಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ನಾನಾ ಭಾಗಗಳಲ್ಲಿ ಹಣಕ್ಕಾಗಿ-ಮತ ಚಾಲ್ತಿಯಲ್ಲಿದೆ. ತಮಿಳುನಾಡು, ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಈ ಚಾಳಿ ವಿಪರೀತವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ. ಗಮನಾರ್ಹವೆಂದರೆ, ಎರಡೇ ಲೋಕಸಭಾ ಸ್ಥಾನಗಳನ್ನು ಹೊಂದಿರುವ ತ್ರಿಪುರಾ, ಪಶ್ಚಿಮ ಬಂಗಾಳ, ಕೇರಳದಲ್ಲಿ ಅಭ್ಯರ್ಥಿಗಳು ಹೆಚ್ಚಾಗಿ ದುಡ್ಡು ಖರ್ಚು ಮಾಡುತ್ತಿಲ್ಲ.
2009ರಲ್ಲಿ ಅಭ್ಯರ್ಥಿಗಳು ಸರಾಸರಿ 15 ಲಕ್ಷ ರೂ ವೆಚ್ಚ ಮಾಡಿದ್ದಾರೆ. ಆಗ ಅಭ್ಯರ್ಥಿಗಳು ತಲಾ 70 ಲಕ್ಷ ರೂ ವೆಚ್ಚ ಮಾಡಬಹುದು ಎಂಬ ಮಿತಿಯಿದ್ದರೂ ಕೇವಲ ಶೇ. 60ರಷ್ಟು ಖರ್ಚು ಮಾಡಿದ್ದಾರಷ್ಟೇ. 437 ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಆಧಾರದಲ್ಲಿ ಈ ಲೆಕ್ಕಚಾರ ಹಾಕಲಾಗಿದೆ. ಆದರೆ ಈ ಬಾರಿ ಹಾಗಿಲ್ಲ. ಹೆಚ್ಚು ಹಣ ಖರ್ಚಾಗಲಿದೆ. ಆಂಧ್ರ ಪ್ರದೇಶದಲ್ಲಿ, ದೇಶದಲ್ಲೇ ಗರಿಷ್ಠ ಪ್ರಮಾಣದಲ್ಲಿ 10,000 ಕೋಟಿ ರೂ. ಗಿಂತ ಹೆಚ್ಚು ವ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಕುತೂಹಲದ ಸಂಗತಿಯೆಂದರೆ 1996ರಲ್ಲಿ ಚುನಾವಣೆಯಲ್ಲಿ 2,500 ಕೋಟಿ ರೂ ಖರ್ಚು ಮಾಡಲಾಗಿತ್ತು. 2004ರಲ್ಲಿ ಅದು ದುಪ್ಪಟ್ಟಾಯಿತು. ಕಳೆದ ಚುನಾವಣೆಯಲ್ಲಿ (2009) 10-12 ಸಾವಿರ ಕೋಟಿ ರೂ ಖರ್ಚಾಗಿದೆ ಎಂದು CMS ವರದಿ ತಿಳಿಸಿದೆ.
ಮಾಧ್ಯಮಗಳಲ್ಲಿ ಜಾಹೀರಾತಿಗೆಂದು 2,000 ಕೋಟಿ ರೂ ಖರ್ಚಾಗುತ್ತದೆ. ಇನ್ನು ಪ್ರಚಾರ ಸಭೆ/ ಸಮಾವೇಶಗಳನ್ನು ಆಯೋಜಿಸಲು ಮತ್ತು ಜನರನ್ನು ಕರೆತರಲು ಸಹ 2,000 ಕೋಟಿ ರೂ ಖರ್ಚಾಗುತ್ತದೆ. ಇದಲ್ಲದೆ ರಾಜಕೀಯ ಪಕ್ಷಗಳು 2,000 ಕೋಟಿ ರೂ ಖರ್ಚು ಮಾಡುತ್ತವೆ.


Click it and Unblock the Notifications
