ನೆಲಕಚ್ಚಿದ ಘಟಾನುಘಟಿ ಕಾಂಗ್ರೆಸ್ಸಿಗರು

ಬೆಂಗಳೂರು, ಮೇ 16: ಸ್ವತಂತ್ರ ಭಾರತದಲ್ಲಿ ಚುನಾವಣಾ ಇತಿಹಾಸದಲ್ಲಿ ಮೋದಿ ಸುನಾಮಿ ಮತ್ತು ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಂತಹ ಹೀನಾಯ ಸೋಲು ಕಂಡಿದೆ. 1959 ರಲ್ಲಿ ಆರಂಭವಾದ ಮೊದಲ ಚುನಾವಣೆಯಿಂದ ಹಿಡಿದು ಈಗಿನ ಚುನಾವಣೆವರೆಗೆ ಕಾಂಗ್ರೆಸ್ ಎಂದೂ ಈ ಮಟ್ಟದ ಕಳಪೆ ಸಾಧನೆ ಮಾಡಿರಲಿಲ್ಲ. ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್ ಈ ಮಟ್ಟದ ಹೀನಾಯ ಸೋಲು ಕಂಡಿರಲಿಲ್ಲ.

ಸತತ ಎರಡು ಅವಧಿಗೆ ಯುಪಿಎ ಅಧಿಕಾರ ನಡೆಸಿ ದೇಶದ ಹಿರಿಯ ಆರ್ಥಿಕ ಮುತ್ಸದ್ಧಿ ಎಂದೇ ಹೆಸರು ಪಡೆದ ಪ್ರಧಾನಿ ಮನಮೋಹನ್‌ಸಿಂಗ್ 10 ವರ್ಷಗಳ ಕಾಲ ಆಡಳಿತ ಮಾಡಿದ್ದರೂ ಹೀನಾಯ ಸೋಲು ಕಂಡಿರುವುದು ಆ ಪಕ್ಷದ ಮುಖಂಡರಿಗೆ ಗರ ಬಡಿದಂತಾಗಿದೆ. ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ತೃತೀಯ ರಂಗ ಎರಡನೆ ಸ್ಥಾನಕ್ಕೆ ಬಂದಿದೆ. (ವಿರೋಧ ಪಕ್ಷವೇ ಇಲ್ಲದಂತೆ ಗೆದ್ದುಬಿಟ್ಟ ಮೋದಿ)

ls-election-result-2014-congress-stalwart-leaders-booted-out

ಈ ನಡುವೆ ಕಾಂಗ್ರೆಸ್ ಕಳಪೆ ಸಾಧನೆ ಬಗ್ಗೆ ನಾಯಕರ ಬಗ್ಗೆ ವಿಶೇಷವಾಗಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ, ಆಕ್ರೋಶ ಸ್ಫೋಟಗೊಂಡಿದೆ. ಅಮೇಥಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್‌ಗಾಂಧಿಯವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗೋ ಬ್ಯಾಕ್ ರಾಹುಲ್, ಪ್ರಿಯಾಂಕಾ ಅವರನ್ನು ಕರೆತನ್ನಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಒಟ್ಟಾರೆ ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲೇ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. (ದೆಹಲಿಯಲ್ಲಿ ಆಮ್ ಆದ್ಮಿ ಧೂಳೀಪಟ: ಬಿಜೆಪಿ ಸಪ್ತಮಯ)

ಯುಪಿಎ ಸರ್ಕಾರದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದ ಸಚಿವರುಗಳೇ ಲೋಕಸಭೆ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಸುಶೀಲ್‌ ಕುಮಾರ್ ಶಿಂಧೆ, ಸಲ್ಮಾನ್ ಖುರ್ಷಿದ್, ಜಯಪಾಲ್‌ ರೆಡ್ಡಿ, ಎ. ರಾಜ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಅಜರುದ್ದೀನ್ ಸೇರಿದಂತೆ ೩೦ಕ್ಕೂ ಹೆಚ್ಚು ಮಂದಿ ಸಚಿವರುಗಳು ಚುನಾವಣೆಯಲ್ಲಿ ಮುಖಭಂಗ ಅನುಭವಿಸುವಂತಾಗಿದೆ. ಭ್ರಷ್ಟಾಚಾರ, ಉದ್ಧಟತನ ಹಾಗೂ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ಖ್ಯಾತರಾದವರನ್ನು ಮತದಾರ ಮನೆಗೆ ಕಳುಹಿಸಿದ್ದಾನೆ.

ಗೃಹ ಸಚಿವರಾಗಿದ್ದ ಸುಶೀಲ್‌ ಕುಮಾರ್ ಶಿಂಧೆ ಮಹಾರಾಷ್ಟ್ರದಲ್ಲಿ ಪ್ರಭಾವಿ ರಾಜಕಾರಣಿ. ಆದರೆ, ಸೊಲ್ಲಾಪುರ ಕ್ಷೇತ್ರದಲ್ಲಿ ಶಿಂಧೆ ಹಿನ್ನಡೆ ಕಂಡಿದ್ದಾರೆ. ವಿದೇಶಾಂಗ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಕೂಡ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಹಿನ್ನಡೆ ಅನುಭವಿಸಿದ್ದು, ಆರಂಭದ ಮತ ಎಣಿಕೆಯಲ್ಲಿ ಏಳನೆ ಸ್ಥಾನಕ್ಕೆ ಇಳಿದಿದ್ದರು. ನಂತರ ಚೇತರಿಸಿಕೊಂಡರಾದರೂ ಗೆಲುವಿನ ಹಾದಿಯಲ್ಲಿ ಸಾಗಲಿಲ್ಲ. 2ಜಿ ಹಗರಣಕ್ಕೆ ಬಲಿಯಾಗಿ ಜೈಲುವಾಸ ಅನುಭವಿಸಿದ್ದ ರಾಜ ನೀಲಗಿರಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿ ಜೈಪಾಲ್‌ ರೆಡ್ಡಿ ಕೂಡ ಮೆಹಬೂಬ್ ನಗರದಲ್ಲಿ ಗೆಲುವಿನ ಮುಖ ನೋಡಲು ಸಾಧ್ಯವಾಗಿಲ್ಲ.

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ಮನಮೋಹನ್‌ ಸಿಂಗ್ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿರುವ ಸಂದರ್ಭದಲ್ಲಿ ನಾಳೆ 12.30 ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+