ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಿಗೆ ಬೆಲೆ ಏರಿಕೆಯ ಬಿಸಿ, ಸಿಲಿಂಡರ್‌ ಬೆಲೆ ಹೆಚ್ಚಳ

|
Google Oneindia Kannada News

cylinder
ನವದೆಹಲಿ, ಡಿ. 11 : ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಅಡುಗೆ ಅನಿಲ ಸಿಲಿಂಡರ್‌ ಪೂರೈಸುವ ಡೀಲರ್‌ಗಳಿಗೆ ನೀಡುತ್ತಿದ್ದ ಕಮಿಷನ್‌ ಅನ್ನು ಸರ್ಕಾರ 3.46 ರೂ.ನಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಮಂಗಳವಾರದಿಂದಲೇ ಸಿಲಿಂಡರ್ ಬೆಲೆ 3.46 ರೂ.ಗಳಷ್ಟು ಹೆಚ್ಚಾಗಿದೆ.

ಮಂಗಳವಾರ ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಅಡುಗೆ ಅನಿಲ ಪೂರೈಸುವ ಡೀಲರ್ ಗಳಿಗೆ ನಿಡುತ್ತಿದ್ದ ಕಮಿಷನ್ ಅನ್ನು 3.46 ರಷ್ಟು ಏರಿಕೆ ಮಾಡಿದೆ. ಇದರ ಹೊರೆ ನೇರವಾಗಿ ಗ್ರಾಹಕರಿಗೆ ತಟ್ಟಿದ್ದು, ಮಂಗಳವಾರ ರಾತ್ರಿಯಿಂದಲೇ ಸಿಲಿಂಡರ್ ಬೆಲೆ ಸಹ 3.46 ರೂ. ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ಹೊಸ ಆದೇಶದಿಂದಾಗಿ 14.2 ಕೆ.ಜಿ ತೂಕದ ಸಬ್ಸಿಡಿ ಸಿಲಿಂಡರ್‌ ಬೆಲೆ 424 ರೂ. ಆಗಿದೆ. ಜೊತೆಗೆ ಪೆಟ್ರೋಲ್‌ ಬೆಲೆ ಏರಿಕೆ ಮಾಡುವ ಸುಳಿವನ್ನು ಸರ್ಕಾರ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 110 ಡಾಲರ್‌ ತಲುಪಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬೆಲೆ ಮತ್ತೆ 1 ರೂ.ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. (ಕನ್ನಡದಲ್ಲೇ ಆಧಾರ್ ಕಾರ್ಡ್ ಮಾಹಿತಿ ಪಡೆಯಿರಿ)

ದರ ಪರಿಷ್ಕರಣೆಯಿಂದ ಬೆಂಗಳೂರಿನಲ್ಲಿ 421.50 ರೂ. ಇದ್ದ ಎಲ್‌ಪಿಜಿ ಬೆಲೆ ಈಗ 425 ರೂ.ಗಳಿಗೆ ಏರಿದೆ. ಐದು ಕೆ.ಜಿ ತೂಕದ ಅನಿಲ ಸಿಲಿಂಡರ್ ವಿತರಕರ ಕಮಿಷನ್ 1.73 ರೂ.ನಿಂದ 20.36 ರೂ.ಗೆ ಹೆಚ್ಚಳಗೊಂಡಿದೆ. ಕಳೆದ ವರ್ಷದ ಅಕ್ಟೋಬರ್ ಏಳರ ಬಳಿಕ ಇದೇ ಮೊದಲ ಬಾರಿ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಾಗಿದೆ. ಆಗಲೂ ವಿತರಕರ ಕಮಿಷನ್ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಎಲ್‌ಪಿಜಿ ಬೆಲೆ 399ರೂ.ನಿಂದ 410.50 ರೂ.ಗೆ ಏರಿತ್ತು.

ಆಧಾರ್ ಕಡ್ಡಾಯವಲ್ಲ : ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಸಲ್ಲಿಸುವುದು ಕಡ್ಡಾಯವೇನಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈಗಾಗಲೇ ಆಧಾರ್ ಕಾರ್ಡ್ ಸಲ್ಲಿಸುವ ಕುರಿತು ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಅಕ್ರಮವಾಗಿ ಸಿಲಿಂಡರ್ ಬಳಕೆ ಮಾಡುವುವವರನ್ನು ಪತ್ತೆ ಹಚ್ಚಲು ಆಧಾರ್ ಸಹಾಯಕವಾಗುತ್ತದೆ ಎಂದು ಮೊಯ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಎಲ್‌ಪಿಜಿ ಸಿಲಿಂಡರ್ ಪಡೆಯಲು ಆಧಾರ್ ಕಡ್ಡಾಯವೇನಲ್ಲ. ಆಧಾರ್ ಕಾರ್ಡ್ ಸಲ್ಲಿಸುವುದು, ಬಿಡುವುದು ಗ್ರಾಹಕರ ಸ್ವಇಚ್ಛೆಗೆ ಬಿಟ್ಟ ವಿಚಾರ ಎಂದು ಸಚಿವ ವೀರಪ್ಪಮೊಯ್ಲಿ ಸ್ಪಷ್ಟಪಡಿಸಿದ್ದಾರೆ.

English summary
Domestic cooking gas price was on Tuesday, December 10 hiked by Rs. 3.46 per cylinder after the government raised the commission paid to dealers by over 9 per cent. The commission paid to dealers has been increased by Rs. 3.46 per 14.2-kg cylinder to Rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X