ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ದಿನ ಕಳೆದರೂ ಕಡಿಮೆಯಾಗಲಿಲ್ಲ ಮದ್ಯದಂಗಡಿ ಮುಂದಿನ ಕ್ಯೂ

|
Google Oneindia Kannada News

ನವದೆಹಲಿ, ಮೇ 6: ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎರಡು ದಿನ ಕಳೆದಿದೆ. ಆದರೂ ಮದ್ಯದ ಅಂಗಡಿಗಳ ಮುಂದೆ ಇರುವ ಕ್ಯೂ ಮಾತ್ರ ಕಡಿಮೆಯಾಗಿಲ್ಲ. ಇಂದು ಬುಧವಾರ ಸಹ ಬೆಳಗ್ಗೆಯೇ ಕುಡುಕರು ಬಾರ್‌ಗಳು ಮುಂದೆ ಹಾಜರಿ ಹಾಕಿದ್ದಾರೆ.

ದೆಹಲಿ, ತೆಲಂಗಾಣ ರಾಜ್ಯಗಳ ಅನೇಕ ಬಾರ್‌ಗಳ ಮುಂದೆ ಇಂದು ಕೂಡ ನೂರಾರು ಸಂಖ್ಯೆಯ ಜನರು ವೈನ್‌ ಶಾಪ್‌ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬಾರ್ ಓಪನ್ ಆಗುವ ಮೊದಲೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಈ ರಾಜ್ಯಗಳಲ್ಲಿ ಮದ್ಯದ ಬೆಲೆ ಹೆಚ್ಚಾಗಿದ್ದರೂ, ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

 People Were Seen In A Long Queue Outside A Liquor Shops In Delhi And Telangana

ತೆಲಂಗಾಣದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ; ಮೇ.29ರವರೆಗೂ ಬಂದ್! ತೆಲಂಗಾಣದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ; ಮೇ.29ರವರೆಗೂ ಬಂದ್!

ತೆಲಂಗಾಣದಲ್ಲಿ ಮದ್ಯದ ಮೇಲಿನ ದರವನ್ನು ಶೇಕಡ 15 ರಷ್ಟು ಹೆಚ್ಚು ಮಾಡಿದ್ದಾರೆ. ಆದರು ಸಹ ಜನ ಬಾರ್‌ಗೆ ಬರುವುದನ್ನು ಬಿಟ್ಟಿಲ್ಲ. ಪ್ರತಿದಿನ ಬಾರ್‌ಗಳ ಮುಂದೆ ದೊಡ್ಡ ಸಾಲು ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಸ್ತೆ ಮೇಲೆ ವೃತ್ತ ಹಾಕಿದ್ದು, ಅದರ ಮೇಲೆ ಬ್ಯಾಕ್, ಚಪ್ಪಲಿ ಇಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ದೆಹಲಿಯಲ್ಲಿಯೂ ಕುಡುಕರು ಹಬ್ಬ ಮಾಡುತ್ತಿದ್ದಾರೆ. ಶಿವಪುರಿ ನಗರದಲ್ಲಿ ಮದ್ಯದಂಗಡಿ ಮುಂದೆ ದೊಡ್ಡ ಕ್ಯೂ ಮಾಡಲಾಗಿದೆ. ಆದರೆ, ಇಲ್ಲಿ ಜನರು ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಕೆಲವರು ಸಾಲಾಗಿ ನಿಂತಿದ್ದರು, ಇನ್ನು ಕೆಲವರು ಒಟ್ಟಿಗೆ ನಿಂತುಕೊಂಡಿದ್ದಾರೆ.

ದೆಹಲಿ ಸರ್ಕಾರ ಮದ್ಯದ ಮೇಲಿನ ದರವನ್ನು 70 ರಷ್ಟು ಹೆಚ್ಚು ಮಾಡಿದೆ. ಆದರೂ ಮದ್ಯಪ್ರಿಯರಿಗೆ ಕಡಿವಾಣ ಹಾಕಲು ಆಗುತ್ತಿಲ್ಲ. ದೇಶದ ಅನೇಕ ಬಾರ್‌ಗಳ ಮುಂದೆ ಸರಿಯಾಗಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ ಇದರಿಂದ ಸೋಂಕು ಹೆಚ್ಚಾಗುವ ಭೀತಿ ಇದೆ.

English summary
People were seen in a long queue outside a liquor shop in Delhi and Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X