ಪ್ರಧಾನಿ ಸಿಂಗ್ ಗೆ ಸೋನಿಯಾ ಬೀಳ್ಕೊಡುಗೆ ಔತಣ

ನವದೆಹಲಿ, ಮೇ11: ಲೋಕಸಭಾ ಚುನಾವಣಾ ರೌಂಡ್ ಆಪ್ ಸೇರಿದಂತೆ ದೇಶದೆಲ್ಲೆಡೆ ನಡೆದ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ, ನಿಮಗಾಗಿ. ಜತೆಗೆ ಒಂದಷ್ಟು ಪ್ರಮುಖ ವಿದೇಶಿ ಸುದ್ದಿಗಳು ಇವೆ:

ನದಿ ಜೋಡಣೆ ಅಗತ್ಯ ಪ್ರತಿಪಾದಿಸಿದ ಮೋದಿ
ವಾರಣಾಸಿ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರೈತರು ಮತ್ತು ದೇಶದ ಅಭಿವೃದ್ಧಿಗಾಗಿ ದೇಶದಾದ್ಯಂತವಿರುವ ನದಿಗಳನ್ನು ಸೂಕ್ತವಾಗಿ ಜೋಡಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪದೇ ಪದೇ ಕಾಡುವ ಬರ, ಪ್ರವಾಹ ಮುಂತಾದ ನೈಸರ್ಗಿಕ ಸಮಸ್ಯೆಗಳನ್ನು ಪರಿಹಾರ ಮಾಡಲು ಹಾಗೂ ಆಹಾರ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸಲು ನದಿಗಳ ಜೋಡಣೆ ಮಾಡಬೇಕಾಗಿದೆ ಎಂದಿದ್ದಾರೆ.
ಗಮನಾರ್ಹವೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮಹತ್ವಾಕಾಂಕ್ಷಿ ಯೋಜನೆಯಾದ ನದಿ ಜೋಡಣೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದರು.

Lok Sabha Polls 2014- May 11 All India News in Brief highlights

4.4 ಲಕ್ಷ ಮೌಲ್ಯದ ಗುಟ್ಕಾ ವಶ
ಥಾಣೆ: ಸುಮಾರು ನಾಲ್ಕು ಲಕ್ಷ ರೂ. ಗೂ ಹೆಚ್ಚಿನ ಮೌಲ್ಯದ ನಿಷೇಧಿತ ಗುಟ್ಕಾವನ್ನು ಎಫ್ ಡಿಎ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಮೀರಾ ರಸ್ತೆಯಲ್ಲಿರುವ ನೊವೆಲ್ಟಿಸುಪ್ರಿ-ಜನರಲ್ ಸ್ಟೋರ್ಸ್ ಮಾಲೀಕ ಅಜೀಮ್ ನವಾಜ್ ಅಹ್ಮದ್ ಷೇಖ್ ಎಂಬುವರಿಗೆ ಸೇರಿದ್ದ ಈ ಗುಟ್ಕಾ ಪೊಟ್ಟಣಗಳನ್ನು ಚೀಲಗಳಲ್ಲಿ ತುಂಬಿ ಶೇಖರಿಸಲಾಗಿತ್ತು. ಇದನ್ನು ಪತ್ತೆ ಹಚ್ಚಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 4.4 ಲಕ್ಷ. ವಶಕ್ಕೆ ಪಡೆದಿರುವ ಗುಟ್ಕಾ ಪ್ಯಾಕೆಟುಗಳಲ್ಲಿ ರಾಜಶ್ರೀ ಪಾನ್‌ ಮಸಾಲ್, ವಿಮಲ್ ಪಾನ್‌ ಮಸಾಲಾ, ವಿಟಿ ಸೆಂಟೆಡ್ ತಂಬಾಕು, ವಿಮಲ್‌ ಗುಟ್ಕಾ, ರಾಕೆಟ್‌ ಗುಟ್ಕಾ ಹಾಗೂ ಪಾನ್ ವಿಲಾಶ್ ಸೇರಿವೆ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರಾಖಂಡದ ಪ್ರಪಾತಕ್ಕುರುಳಿದ ಬಸ್: 17 ಸಾವು
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬಸ್ಸೊಂದು ಪ್ರಪಾತಕ್ಕೆ ಉರುಳಿ 7 ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಬೀಳುತ್ತಿದ್ದಂತೆ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು ಎಂದು ಚಮೋಲಿ ಜಿಲ್ಲೆ ವಿಪತ್ತು ನಿರ್ವಹಣಾ ಸಮಿತಿ ಮುಖ್ಯಸ್ಥ ನಂದಕಿಶೋರ್ ಜೋಶಿ ತಿಳಿಸಿದ್ದಾರೆ.
ಹೃಷಿಕೇಶದಿಂದ ಘಾಟ್‌ ಗೆ ಹೊರಟಿದ್ದ ಬಸ್ ನಂದಪ್ರಯಾಗ್ ಘಾಟ್‌ ನಲ್ಲಿ ಏಕಾಕಿ 300 ಮೀ ಆಳದ ಪ್ರತಾಪಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಬಸ್ ಚೂರು ಚೂರಾಗಿ ಹೋಗಿದೆ. ತಾನು ಹೊರಟಿದ್ದ ಸ್ಥಳ ತಲುಪಲು ಇನ್ನು ಕೇವಲ ಅರ್ಧ ಕಿಮೀ ದೂರವಿರುವಾಗ ಈ ದುರ್ಘಟನೆ ಸಂಭವಿಸಿದೆ.

ನೆಲಬಾಂಬ್ ಸ್ಫೋಟ: 7 ಪೋಲೀಸರ ದಾರುಣ ಸಾವು
ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲಿ ನೆಲಬಾಂಬ್ ಸ್ಫೋಟಿಸಿ 7 ಮಂದಿ ಪೊಲೀಸರನ್ನು ಬಲಿ ತೆಗೆದುಕೊಳ್ಳುವ ಮೂಲಕ ನಕ್ಸಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಮಹಾರಾಷ್ಟ್ರದ ಗಡ್ಡಿರೋಲಿ ಜಿಲ್ಲೆಯ ಯರವಾಡೆ ಎಂಬ ಗ್ರಾಮದಲ್ಲಿ ನಕ್ಸಲರು ನೆಲಬಾಂಬ್ ಸ್ಫೋಟಿಸಿ ಪೊಲೀಸ್‌ ವಾಹನ ಉಡಾಯಿಸಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಪಡೆಯ ಪೈಕಿ 7 ಮಂದಿ ಪೊಲೀಸರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಭದ್ರತಾ ವ್ಯವಸ್ಥೆಗಾಗಿ ತೆರಳುತ್ತಿದ್ದ ಪೊಲೀಸ್‌ ವಾಹನ ಯರವಾಡೆ ಗ್ರಾಮದ ಬಳಿ ಬರುತ್ತಿದ್ದಂತೆ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಶಂಕಿತ ನಕ್ಸಲರು ಹುದುಗಿಸಿಟ್ಟಿದ್ದ ನೆಲ ಬಾಂಬನ್ನು ಸ್ಫೋಟಿಸಿದ್ದಾರೆ.

12.00: ನೆಲಬಾಂಬ್ ಸ್ಫೋಟ: ಮಹಾರಾಷ್ಟ್ರ ಚಿರೋಲಿ ಬಳಿ ಪೊಲೀಸ್ ವ್ಯಾನ್ ಸ್ಫೋಟ - 7 ಮಂದಿ ಸಾವು
11.30: ಅಮೆರಿಕದಲ್ಲಿ ಬಿಸಿಗಾಳಿ ಬಲೂನು ದುರಂತ: ಒಬ್ಬರ ಸಾವು

11.20: ಎಐಸಿಸಿ ಅಧ್ಯಕ್ಷೆ, ಮೇಡಂ ಸೋನಿಯಾ ಗಾಂಧಿ ಅವರಿಂದ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬೀಳ್ಕೊಡುಗೆ ಔತಣ. ಫಲಿತಾಂಶಕ್ಕೆ 2 ದಿನ ಮುನ್ನ ಮೇ 14ರಂದು ಔತಣ. ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಸಿಂಗ್ ಅವರು ಮೇ 17ಕ್ಕೆ ಪ್ರಧಾನಿ ಕಚೇರಿಯನ್ನು ತೊರೆಯಲಿದ್ದಾರೆ. ಕಾಂಗ್ರೆಸ್ ಕಾರ್ಯ ಸಮಿತಿ (CWC), ಕೇಂದ್ರ ಸಚಿವರು ಸಹಿ ಮಾಡಲಾಗಿರುವ ಸ್ಮರಣಿಕೆಯನ್ನು ಪ್ರಧಾನಿ ಸಿಂಗ್ ಗೆ ನೀಡುವ ಸಾಧ್ಯತೆಯಿದೆ.
10.00: ಈ ಮಧ್ಯೆ, ಎಲ್ಲೆಲ್ಲೂ ವಾರಣಾಸಿಯದ್ದೇ ಜಪ; ಅದು ಬಿಟ್ಟರೆ ಐಪಿಎಲ್ ಕ್ರಿಕೆಟ್.

lok-sabha-polls-2014-may-11-all-india-news-in-brief-highlights

9.55: ಕಾಂಗ್ರೆಸ್ಸಿಗೆ ಅಗತ್ಯ ನಂಬರ್ ಪ್ರಾಪ್ತಿಯಾಗಲಿದೆ; ಯಾವುದೇ ಮೈತ್ರಿಯನ್ನು ಬೆಂಬಲಿಸುವ ಅಗತ್ಯವಿಲ್ಲ
9.45: ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು 'ಬಿಜೆಪಿ ಗೆಲುವಿಗೆ ನೆರವು ನೀಡುತ್ತಿದೆ' ಎಂದು ಆರೋಪಿಸಿದ ಅಜಂ ಖಾನ್
9.40: ದಕ್ಷಿಣ ಕೋರಿಯಾದ ಪ್ರಯಾಣಿಕ ಹಡಗು ದುರಂತ: ಪ್ರತೀಕೂಲ ಹವಾಮಾನದಿಂದಾಗಿ ಪರಿಹಾರ ಕಾರ್ಯಾಚರಣೆ ಸ್ಥಗಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+