ದಾಸರಿ ನಾರಾಯಣ ರಾವ್ ವಿರುದ್ಧ ಕೇಸು ದಾಖಲು
ನವದೆಹಲಿ, ಮೇ 5: ಇಂದು ವಾರದ ಮೊದಲ ದಿನ ದೇಶದೆಲ್ಲೆಡೆ ನಡೆದ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ, ನಿಮಗಾಗಿ. ಚುನಾವಣಾ ರೌಂಡ್ ಆಪ್ ಸಹ ಅಡಕವಾಗಿದೆ. ತಕ್ಷಣಕ್ಕೆ ಇದು ಕೇವಲ ಹೆಡ್ ಲೈನುಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
4.00: ಮೋದಿ ವಿರುದ್ಧ ಗುಜರಾತ್ ಸ್ನೂಪ್ ಗೇಟ್ ಪ್ರಕರಣದ ತನಿಖಾ ಆಯೋಗಕ್ಕೆ ಮುಖ್ಯಸ್ಥರನ್ನಾಗಿ ಜಡ್ಜ್ ನೇಮಕ ಮಾಡುವ ವಿಚಾರವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೈಬಿಟ್ಟಿದೆ.
2.32 ಕಲ್ಲಿದ್ದಲು ಹಗರಣದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದಿದ್ದ ಕಲ್ಲಿದ್ದಲು ರಾಜ್ಯ ಸಚಿವ ದಾಸರಿ ನಾರಾಯಣ ರಾವ್, ಜಿಂದಾಲ್ ಮತ್ತು ರಾಠಿ ವಿರುದ್ಧ ಜಾರಿ ನಿರ್ದೇಶನಾಲಯದಿಂದ (Enforcement Directorate) ಪ್ರಕರಣ ದಾಖಲು. ದಾಸರಿ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

2.17: ಹಣಕಾಸು ಸಚಿವರಾಗಿ ನನ್ನನ್ನು ಸರಿಸಮಾನವಾಗಲು ಹಾಲಿ ವಿತ್ತ ಸಚಿವ ಪಿ ಚಿದಂಬರಂ ಮತ್ತೊಮ್ಮೆ ಹುಟ್ಟಿಬರಬೇಕು ಎಂದು ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಗುಡುಗಿದ್ದಾರೆ.
1.51: ಫೈಜಾಬಾದಿನಲ್ಲಿ ಭಾಷಣ ಮಾಡುವಾಗ ಮೋದಿ ಹಿಂಭಾಗದಲ್ಲಿ ವೇದಿಕೆಯ ಮೇಲೆ ಶ್ರೀರಾಮನ ಚಿತ್ರ ರಾರಾಜಿಸುತ್ತಿತ್ತು. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ.
1.50: ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಭವಿಷ್ಯ ನುಡಿದಿದ್ದಾರೆ.

1.16: ಕೋಲ್ಕೊತ್ತಾದಲ್ಲಿ ಭಾಷಣ ಮಾಡಲು ರಾಹುಲ್ ಗಾಂಧಿಗೆ ಅವಕಾಶ ನಿರಾಕರಣೆ.
12.00: ಪೋಲಿಯೋ ನಿರ್ಮೂಲನ ಮಾಡಲು ಅನನ್ಯ ಸೇವೆ ಸಲ್ಲಿಸಿರುವ ಬಿಹಾರದ ಬುಡಕಟ್ಟು ಮಹಿಳೆ, 40 ವರ್ಷದ ಶುಶ್ರೂಶಕಿ, ಮಾರ್ತಾ ದೊಡ್ರೆ ಅವರನ್ನು National Florence Nightingale Award 2014 ಗೆ ಆಯ್ಕೆ ಮಾಡಲಾಗಿದೆ.
11.35: ರಾಜಮಂಡ್ರಿ (ಆಂಧ್ರಪ್ರದೇಶ)- ಚುನಾವಣೆ ಸಂದರ್ಭದಲ್ಲಿ ಎರಡು ಕೋಟಿ ರೂ ಅಕ್ರಮ ನಗದು ವಶ, ನಾಲ್ವರ ಬಂಧನ.
11.30: ಕೊಂಕಣ ರೈಲು ಅವಘಡ : ಸಾವಿನ ಸಂಖ್ಯೆ 21ಕ್ಕೆ
11.14: ಅಜಮಗಢ ಭಯೋತ್ಪಾದಕರ ಸ್ವರ್ಗ ಎಂದ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ ಮಾಯಾವತಿ.
10.30: ಗ್ರೇಟರ್ ನೋಯ್ಡಾದಲ್ಲಿ ಪಾಕಿಸ್ತಾನ-ವಿರೋಧಿ ಘೋಷಣೆ ಕೂಗದ ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ.
10.20: 2ಜಿ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ ರಾಜಾ ಹೇಳಿಕೆಯನ್ನು ದಾಖಲಿಸಿಕೊಂಡ ದೆಹಲಿ ಕೋರ್ಟ್
10.05: ಅಸ್ಸಾಂ ಹಿಂಸಾಚಾರ ತನಿಖೆ NIAಗೆ ವಹಿಸಲು ಕೇಂದ್ರ ಅಸ್ತು
9.34: ಜಪಾನಿನ ಟೋಕಿಯೋದಲ್ಲಿ ಭಾರಿ ಭೂಕಂಪ
9.02: ಅಜಮಗಢ ಭಯೋತ್ಪಾದಕರ ಸ್ವರ್ಗ ಎಂದಿರುವ ಮೋದಿ ಕಟ್ಟಾಳು ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
8.39: ಪನಾಮಾದಲ್ಲಿ ಅಧ್ಯಕ್ಷೀಯ ಚುನಾವಣೆ ಗೆದ್ದ ಜಾನ್ ಕಾರ್ಲೊಸ್ ವರೇಲಾ.
8.36: JDU ನಾಯಕ ಶರದ್ ಜಾದವ್ ಇಂದು ವಾರನಾಸಿಯಲ್ಲಿ ಪ್ರಚಾರ. ಆಮ್ ಆದ್ಮಿ ಪಕ್ಷದ ನಾಯಕರ ಭೇಟಿ.
8.35: ಕಾಣೆಯಾದ ಮಲೇಷಿಯಾ ಏರ್ ಲೈನ್ಸ್ ಬಗ್ಗೆ ಆಸ್ಟ್ರೇಲಿಯಾದಲ್ಲಿ ಚರ್ಚೆ ಆರಂಭ
7.57: 37 ಮಂದಿ ಅಲ್ ಕೈದಾ ಉಗ್ರರ ಹತ್ಯೆ
7.56: ಕೇದಾರನಾಥ ಯಾತ್ರೆ ಶುಭಾರಂಭಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹರ್ಷ.
7.49: ಕಲ್ಲಿದ್ದಲು ಹಗರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ಅಮಾಯಕ. ಪ್ರಧಾನಿ ಸಿಂಗ್ ಅವರೇ ಜವಾಬ್ದಾರಿ ಹೊರಬೇಕು ಎಂದ ಕಲ್ಲಿದ್ದಲು ರಾಜ್ಯ ಸಚಿವ ದಾಸರಿ ನಾರಾಯಣ ರಾವ್ ಹೇಳಿಕೆ
7.25: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯಿಂದ ಅಮೇಥಿಯಲ್ಲಿ ಚುನಾವಣಾ ಬಹಿರಂಗ ಸಭೆ
7.23: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಗಾತಿ ಕೌಲ್ ನಿಧನ


Click it and Unblock the Notifications
