ಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರು

ನವದೆಹಲಿ, ಫೆಬ್ರವರಿ 26: ಅನಿವಾಸಿ ಭಾರತೀಯರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಕುರಿತಂತೆ ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಸುದ್ದಿಗಳು ಸುಳ್ಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಕೇಂದ್ರ ಚುನಾವಣಾ ಆಯೋಗವು ದೂರು ನೀಡಿದೆ

'ಎನ್ನಾರೈಗಳಿಗೆ ಮತದಾನ ಮಾಡುವುದು ಸುಲಭವಾಗಲಿದೆ. ಈ ಬಾರಿ ಆನ್ ಲೈನ್ ಮೂಲಕ ಮತದಾನ ಮಾಡಬಹುದು. ಇದಕ್ಕೆ ಭಾರತೀಯ ಪಾಸ್​ಪೋರ್ಟ್ ಇದ್ದವರು ಲೋಕಸಭಾ ಚುನಾವಣೆಗೆ ಆನ್​ಲೈನ್ ಮೂಲಕ ಮತಚಲಾವಣೆ ಮಾಡಬಹುದು ಎಂಬ ಸಂದೇಶ ವಾಟ್ಸ್​ಆಪ್, ಫೇಸ್​ಬುಕ್​ನಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಕೇಂದ್ರೀಯ ಚುನಾವಣಾ ಆಯೋಗವು ನೀಡಿದ ದೂರನ್ನು ಸ್ವೀಕರಿಸಿರುವ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 505(1) (ಬಿ), 463, 471, ರಾಷ್ಟ್ರ್ರೀಯ ಲಾಂಛನ ಕಾಯ್ದೆ 2005ರ ಸೆಕ್ಷನ್ 3 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣದ ದಾಖಲಾಗಿದೆ.ದೆಹಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗದವರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಚುನಾವಣೆ ದಿನಾಂಕ ಪ್ರಕಟವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ರಾಂಚಿಯ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದರು.

ಚುನಾವಣಾ ಆಯೋಗದಿಂದ ಸ್ಪಷ್ಟನೆ

ಚುನಾವಣಾ ಆಯೋಗದಿಂದ ಸ್ಪಷ್ಟನೆ

ಇದುವರೆಗೂ ಆನ್​ಲೈನ್ ಮತಚಲಾವಣೆಗೆ ಅವಕಾಶ ನೀಡಲಾಗಿಲ್ಲ. ಯಾವುದೇ ಮತದಾರರಗಲಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕಾಗುತ್ತದೆ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಚುನಾವಣಾ ಆಯೋಗದ ಅಧಿಕೃತ ವೆಬ್ ತಾಣದಲ್ಲಿ 6ಎ ಅರ್ಜಿ ಸಲ್ಲಿಸಿ ಎನ್​ವಿಎಸ್​ಪಿ.ಇನ್ ನೋಂದಣಿ ಮಾಡಿಕೊಳ್ಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಸುಳ್ಳು ಸುದ್ದಿ ಬಗ್ಗೆ ಆಯೋಗದಿಂದ ಎಚ್ಚರಿಕೆ

ಲೋಕಸಭೆ ಚುನಾವಣೆಯಲ್ಲಿ ಮತದಾನ ಕುರಿತಂತೆ ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಸುದ್ದಿಗಳು ಸುಳ್ಳು ಎಂದು ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ.

ಆನ್ ಲೈನ್ ನಲ್ಲಿ ಮತದಾನ ಮಾಡಲು ನೋಂದಣಿ

ಅನಿವಾಸಿ ಭಾರತೀಯರು ಮತದಾನ ಮಾಡಲು ಚುನಾವನಾ ಆಯೋಗದ ಅಧಿಕೃತ ವೆಬ್ ತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹು.

ಆಯೋಗದ ಚಿಹ್ನೆ ದುರ್ಬಳಕೆ ಎಂದು ದೂರು

ಚುನಾವಣಾ ಆಯೋಗದ ಅಧಿಕೃತ ಚಿಹ್ನೆ ಬಳಸಿ ಚುನಾವಣೆ ದಿನಾಂಕ, ಆನ್ ಲೈನ್ ಮತದಾನ ಸೇರಿದಂತೆ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+