ದೆಹಲಿಯಲ್ಲಿ ಲಾಕ್‌ಡೌನ್ 4.0: ಸಲೂನ್‌ಬಿಟ್ಟು ಬಹುತೇಕ ಚಟುವಟಿಕೆಗಳಿಗೆ ಅವಕಾಶ

ನವ ದೆಹಲಿ, ಮೇ 18: ನಾಳೆಯಿಂದ ದೇಶದಲ್ಲಿ ಲಾಕ್‌ಡೌನ್ 4.0 ಜಾರಿಗೆ ಬರುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾರ್ಗಸೂಚಿ ನೀಡಿದ್ದಾರೆ. ನಾಳೆಯಿಂದ ದೆಹಲಿಯಲ್ಲಿ ಏನಿರುತ್ತೆ?, ಏನಿರಲ್ಲ? ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

Lockdown 4.0: Arvind Kejriwal Revised Guidelines For Phase Four

Recommended Video

      ದೇವೇಗೌಡರ ಹುಟ್ಟುಹಬ್ಬದಂದು ಡಿಕೆಶಿ ಜೊತೆ ಲಂಚ್ | Deve gowda , DKS | Oneindia Kannada

      * ದೆಹಲಿಯಲ್ಲಿ ಕಟ್ಟಿಂಗ್ ಶಾಪ್, ಸಲೂನ್‌, ಸ್ಪಾಗಳಿಗೆ ಸದ್ಯದವರೆಗೆ ಅವಕಾಶ ನೀಡಿಲ್ಲ. ಇದು ಹೀಗೆಯೇ ಮುಂದುವರೆಯಲಿದೆ.

      * ಖಾಸಗಿ ಸಂಸ್ಥೆಗಳನ್ನು ತೆರೆಯಬಹುದು ಆದರೆ, ವರ್ಕ್‌ ಫ್ರಮ್‌ ಹೋಮ್‌ ಮುಂದುವರೆಸುವುದು ಒಳಿತು ಎಂದು ದೆಹಲಿ ಸರ್ಕಾರ ತಿಳಿಸಿದೆ.

      * ಕ್ರೀಡಾಂಗಣಗಳನ್ನು ತರೆಯಬಹುದು ಆದರೆ, ಪ್ರೇಕ್ಷಕರನ್ನು ಒಳಗೆ ಬಿಡುವಂತಿಲ್ಲ

      * ಕಾರ್ ಮತ್ತು ಕ್ಯಾಬ್‌ನಲ್ಲಿ ಇಬ್ಬರು ಮಾತ್ರ ಪ್ರಯಾಣ ಮಾಡಬೇಕು

      * ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯಲ್ಲಿ ಜನರು ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು.

      * ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡಬಹುದು. ಆದರೆ, ಸದ್ಯಕ್ಕೆ, ದೆಹಲಿ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು.

      * ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು

      * ಕ್ಯಾಬ್‌ ಶೇರಿಂಗ್, ಕಾರ್ ಪೂಲಿಂಗ್‌ಗಳಿಗೆ ಅವಕಾಶವಿಲ್ಲ

      * ಆಟೋ, ಸೈಕಲ್ ರಿಕ್ಷಾದಲ್ಲಿ ಒಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ

      ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳಲ್ಲಿ ಈ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ವಿವರ ನೀಡಿದ್ದಾರೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+