ವಿದೇಶಗಳಲ್ಲಿ ಭಾರತೀಯರು: ಅತಿದೊಡ್ಡ AirLift ಗೆ ಮುಂದಾದ ಭಾರತ

ನವದೆಹಲಿ, ಮೇ 5: ಕೊರೊನಾ ಹಾವಳಿಯಿಂದ ಇಡೀ ಜಗತ್ತೆ ತತ್ತರಿಸಿದೆ. ಜನ ಮನೆಯಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ.

ಇನ್ನು ಭಾರತದಲ್ಲಿ ಲಾಕ್‌ಡೌನ್ ಜಾರಿಯಾದ ದಿನವೇ ಅಂದರೆ, ಮಾರ್ಚ್ 24 ರಂದು ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಹೀಗಾಗಿ ವಿದೇಶಕ್ಕೆ ಕೆಸಲಕ್ಕೆ ಹೋಗಿದ್ದ ಭಾರತೀಯರು, ವಿದೇಶ ಪ್ರವಾಸಕ್ಕೆ ಹೋಗಿದ್ದವರು ಅಲ್ಲಿಯೇ ಸಿಲುಕಿಕೊಂಡರು.

ಲಾಕ್‌ಡೌನ್‌ನಿಂದ ವಿದೇಶದಲ್ಲಿ ತೀವ್ರ ತೊಂದರೆಗೆ ಒಳಗಾಗಿರುವ ಭಾರತೀಯರನ್ನು ಕರೆತರಲು ಭಾರತದ ಇತಿಹಾಸದಲ್ಲಿ ಅತಿದೊಡ್ಡ ತೆರವು ಕಾರ್ಯಾಚರಣೆಯನ್ನು (Airlift) ನಡೆಸಲು ಮುಂದಾಗಿದೆ. ಮೇ 7 ರಿಂದ ಒಂದು ವಾರದಲ್ಲಿ ಪ್ರಪಂಚದ ವಿವಿಧ ದೇಶದಲ್ಲಿ ಸಿಲುಕಿರುವವರನ್ನು ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಕೂಡಿಕೊಂಡು ಬಹುದೊಡ್ಡ ಯೋಜನೆ ರೂಪಿಸಿವೆ.

14000 ಭಾರತೀಯರನ್ನು ಕರೆ ತರಲು ಯೋಜನೆ

14000 ಭಾರತೀಯರನ್ನು ಕರೆ ತರಲು ಯೋಜನೆ

ಕೇಂದ್ರ ವಿದೇಶಾಂಗ ಇಲಾಖೆಯ ಮಾಹಿತಿಯ ಪ್ರಕಾರ ಮೊದಲ ಹಂತದ ಕಾರ್ಯಾಚರಣೆಯಲ್ಲಿ 13 ದೇಶಗಳಿಂದ ಸುಮಾರು 14000 ಭಾರತೀಯರನ್ನು ಕರೆ ತರಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 64 ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಯಾವ ಯಾವ ದೇಶಗಳಿಂದ ಬರಲಿದ್ದಾರೆ?

ಯಾವ ಯಾವ ದೇಶಗಳಿಂದ ಬರಲಿದ್ದಾರೆ?

ಮೊದಲ ಹಂತದಲ್ಲಿ ಪಿಲಿಪ್ಪೀನ್ಸ್, ಸಿಂಗಪುರ್, ಬಾಂಗ್ಲಾದೇಶ, ಯುಎಇ, ಇಂಗ್ಲೆಂಡ್, ಸೌದಿ ಅರೇಬಿಯಾ, ಕತಾರ್, ಅಮೆರಿಕ, ಓಮನ್, ಬಹರೇನ್, ಕುವೈತ್, ಮಲೇಷಿಯಾ ಹಾಗೂ ಇಂಡೋನೇಷಿಯಾದಿಂದ ಭಾರತೀಯರನ್ನು ಕರೆ ತರಲಾಗುತ್ತದೆ ಎಂದು ತಿಳಿಸಿದೆ. ಬೆಂಗಳೂರು, ಚೆನ್ನೈ, ಕೊಚ್ಚಿ, ನವದೆಹಲಿ, ಅಹಮದಾಬಾದ್, ಮುಂಬೈಗೆ ವಿಮಾನಗಳು ಬಂದಿಳಿಯಲಿವೆ.

ಏಳು ದಿನಗಳವರೆಗೆ ಕಾರ್ಯಾಚರಣೆ

ಏಳು ದಿನಗಳವರೆಗೆ ಕಾರ್ಯಾಚರಣೆ

ಈಗಾಗಲೇ ವಿದೇಶಾಂಗ ಸಚಿವಾಲಯ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಕಾರ್ಯಾಚರಣೆಯ ವಿಸ್ತ್ರತ ಯೋಜನೆ ಸಿದ್ದಪಡಿಸಿದೆ. ಇದಕ್ಕಾಗಿ ಏಳು ದಿನಗಳವರೆಗೆ ವಿಮಾನಗಳು ನಿಗದಿ ಮಾಡಿದ ಸ್ಥಳದಿಂದ ಭಾರತೀಯರನ್ನು ಕರೆತರಲಿವೆ.

21 ದಿನ ಹೋಮ್ ಕ್ವಾರಂಟೈನ್‌

21 ದಿನ ಹೋಮ್ ಕ್ವಾರಂಟೈನ್‌

ಎಲ್ಲ ದೇಶಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಕೊರೊನಾ ತಪಾಸಣೆ ಬಳಿಕವೇ ಅವರನ್ನೆಲ್ಲ ಕರೆತರಲಾಗುತ್ತದೆ. ಅಲ್ಲದೇ ಭಾರತಕ್ಕೆ ಬಂದ ನಂತರ ಅವರಿಗೆ ಕಡ್ಡಾಯವಾಗಿ 21 ದಿನ ಹೋಮ್ ಕ್ವಾರಂಟೈನ್‌ ನಲ್ಲಿ ಇಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+