ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಎಲ್ಲಾ ನಾಗರಿಕರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲು ರಾಹುಲ್ ಗಾಂಧಿ ಆಗ್ರಹ

|
Google Oneindia Kannada News

ನವದೆಹಲಿ, ಏಪ್ರಿಲ್ 29:ದೇಶದ ಎಲ್ಲಾ ನಾಗರಿಕರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಇದೇ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಕೋವಿಡ್ ಲಸಿಕೆ ತಯಾರಿಸಲು ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಜನರ ಲಕ್ಷಾಂತರ ಕೋಟಿ ಹಣ ವ್ಯಯಿಸಲಾಗಿದೆ.

ನಿಮ್ಮ ಆಡಳಿತ ವ್ಯವಸ್ಥೆಗೆ ಭಾರತವನ್ನು ಬಲಿಪಶು ಮಾಡಬೇಡಿ; ರಾಹುಲ್ ಗಾಂಧಿನಿಮ್ಮ ಆಡಳಿತ ವ್ಯವಸ್ಥೆಗೆ ಭಾರತವನ್ನು ಬಲಿಪಶು ಮಾಡಬೇಡಿ; ರಾಹುಲ್ ಗಾಂಧಿ

ಈಗ ಮತ್ತೆ ಲಸಿಕೆಗಾಗಿ ಹಣ ಪಡೆಯುದು ಸರಿಯಲ್ಲ. ದುಬಾರಿ ಬೆಲೆಗೆ ಲಸಿಕೆ ಮಾರಾಟವಾಗುವ ಚರ್ಚೆಗಳು ನಡೆಯುತ್ತಿವೆ. ಆದರೆ ದೇಶದಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ವಿತರಣೆಯಾಗಬೇಕು ಎಂದು ಹೇಳಿದ್ದರು.

Let’s Hope All Citizens Get Free COVID Vaccine This Time: Rahul Gandhi

ಈಗ ಮತ್ತೆ ಟ್ವೀಟ್ ಮಾಡಿರುವ ಅವರು, ಕೊರೊನಾ ಲಸಿಕೆಗೆ ಹಣ ನೀಡುವಂತಿರಬಾರದು, ಭಾರತದ ಪ್ರತೀಯೊಬ್ಬ ಭಾರತೀಯನಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು. ಈ ಭಾರಿ ಅದು ಸಾಧ್ಯವಾಗುತ್ತದೆ ಎಂದು ಭಾವಿಸೋಣ ಎಂದು ಹೇಳಿದ್ದಾರೆ.

ಏಪ್ರಿಲ್ 19 ರಂದು ಕೇಂದ್ರ ಸರ್ಕಾರ ಉದಾರೀಕೃತ ಕೋವಿಡ್ ಲಸಿಕೆ ನೀತಿಯನ್ನು ಘೋಷಿಸಿತ್ತು, ಮೇ 1 ರಿಂದ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅರ್ಹರಾಗಿದ್ದಾರೆ.

ಇದು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಬುಧವಾರದಿಂದಲೇ ಅರ್ಹ ಫಲಾನುಭವಿಗಳು ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಬಹುದಾಗಿದೆ.

ಹಾಗೆಯೇ ಕರ್ನಾಟಕ ಸೇರಿ ಹಲವು ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುತ್ತದೆ.

English summary
Congress leader Rahul Gandhi on Thursday said that all citizens “must receive inoculation free of charge” against COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X