''ಗೌಪ್ಯತೆ ವಿಚಾರದಲ್ಲಿ ಸುಪ್ರೀಂ ಹೇಳಿದ್ದನ್ನೇ ಹಿಂದೆ ಕೇಂದ್ರ ಹೇಳಿತ್ತು!''

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 24: ಮಾಹಿತಿ ಗೌಪ್ಯತೆಯು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಈ ಹಿಂದೆಯೇ ಕೇಂದ್ರ ಸರ್ಕಾರ ಹೇಳಿತ್ತು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಖಾಸಗಿತನದ ಮೊದಲ ಪ್ರಕರಣ ದಾಖಲಿಸಿದ್ದ ಕರ್ನಾಟಕದ ನ್ಯಾ. ಪುಟ್ಟಸ್ವಾಮಿ

ಗುರುವಾರ (ಆಗಸ್ಟ್ 24), ಮಾಹಿತಿ ಗೌಪ್ಯತೆಯ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ತನ್ನ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದೆ.

Law Minister Ravi Shankar Prasad On Court Verdict On Right To Privacy

ಗುರುವಾರ ಮಧ್ಯಾಹ್ನ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ರವಿಶಂಕರ್, ''ಕೆಲ ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಕೇಂದ್ರ ಸರ್ಕಾರಕ್ಕೆ ಮುಖಭಂಗವೆಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಪ್ರತಿಯೊಬ್ಬ ನಾಗರಿಕನ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಳ್ಳುವುದು ಆಯಾ ನಾಗರಿಕನ ಮೂಲಭೂತ ಹಕ್ಕು ಎಂದು ಈ ಮೊದಲೇ ಕೇಂದ್ರ ಸರ್ಕಾರ ಘೋಷಿಸಿತ್ತು. ಅದನ್ನೇ ಈಗ ಸುಪ್ರೀಂ ಕೋರ್ಟ್ ಪುನರುಚ್ಛರಿಸಿದಂತೆ ಆಗಿದೆ'' ಎಂದರು.

ಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿ

ಭಾರತೀಯ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಪ್ರಜೆಗಳ ಸ್ವಾತಂತ್ರ್ಯದ ಬಗ್ಗೆ ಹೇಳುವಾಗ ಅವರ ಬಗೆಗಿನ ಮಾಹಿತಿಯ ಹಕ್ಕಿನ ಬಗ್ಗೆಯೂ ಹೇಳಲಾಗಿದೆ. ಇದನ್ನೇ ಈಗ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು 547 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Regarding the judgement of Supreme Court about the right to privacy, Central Law minister Ravi Shankar Prasad said, the government had the same stand earlier.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ