ದೆಹಲಿ ಆರ್ಥಿಕ ಸುಭದ್ರತೆಗೆ ಬೇಡಿ 10 ಸೂತ್ರಗಳು
ನವದೆಹಲಿ, ಫೆ. 3: ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡದಿರಬಹುದು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಕಿರಣ್ ಬೇಡಿ ಈಗಾಗಲೇ ದೆಹಲಿ ಅಭಿವೃದ್ಧಿಗಾಗಿ '10 ಅಂಶಗಳ ಸೂತ್ರ'ವನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಈ ಕುರಿತು ನಿರಂತರ ಟ್ವೀಟ್ ಮಾಡಿ ತಮ್ಮ 10 ಅಂಶಗಳ ಸೂತ್ರಗಳನ್ನು ತಿಳಿಸಿದ್ದಾರೆ. ವ್ಯಾಪಾರಿಗಳು, ಉದ್ಯಮಿಗಳು ಮತ್ತು ಉದ್ಯಮದಲ್ಲಿ ಕೆಲಸ ಮಾಡುವವರನ್ನು ಕೇಂದ್ರೀಕರಿಸಿ ಅಭಿವೃದ್ಧಿ ಸೂತ್ರವನ್ನು ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. [ಆಪ್ 70 ಅಂಶಗಳ ಪ್ರಣಾಳಿಕೆ]
Here is a 10-point plan 4our traders, businesspersons & entrepreneurs. Let's make Delhi's economy more vibrant than ever. #KiransBlueprint
— Kiran Bedi (@thekiranbedi) February 2, 2015 ನನ್ನ ಈ ಸೂತ್ರಗಳಿಂದ ದೆಹಲಿ ಹಿಂದೆಂದಿಗಿಂತ ಹೆಚ್ಚು ಸ್ಪಂದನಶೀಲವಾಗಲಿದೆ ಎಂದು ಬೇಡಿ ಹೇಳಿಕೊಂಡಿದ್ದಾರೆ. ಆದರೆ, ಇದು ತಮ್ಮ ವೈಯಕ್ತಿಕ ಅಭಿಪ್ರಾಯವೋ ಅಥವಾ ಸಂಪೂರ್ಣ ಪಕ್ಷದ ಅಭಿಮತವೋ ಎಂಬುದನ್ನು ತಿಳಿಸಿಲ್ಲ. ಈ ಅಂಶಗಳು "ಕಿರಣ್ ನೀಲನಕ್ಷೆ" ಎಂದೇ ಖ್ಯಾತಿಗೊಂಡಿದೆ. [ಬಿಜೆಪಿ ಪ್ರಶ್ನೆಗೆ ಕೇಜ್ರಿವಾಲ್ ವ್ಯಂಗ್ಯ]
ಕಿರಣ್ ಬೇಡಿ ಅವರ ನೀಲನಕ್ಷೆಯಲ್ಲಿರುವ 10 ಅಭಿವೃದ್ಧಿ ಸೂತ್ರಗಳು ಯಾವುವು? ತಿಳಿಯೋಣ ಬನ್ನಿ.

ಜಿಎಸ್‌ಟಿ ಜಾರಿಗೆ ಆಗುವವರೆಗೆ...
ಸಂಗ್ರಹಣೆ, ಪುನರ್‌ಪಾವತಿ, ಫೈಲಿಂಗ್ ಮತ್ತು ವರದಿ ನೀಡುವ ಪ್ರಕ್ರಿಯೆಯಲ್ಲಿರುವ, ಅಭಿವೃದ್ಧಿ ಜಾರಿಗೆ ತಡೆಯಾಗಿರುವ, ಕೆಲಸಗಳಿಗೆ ಸಮಸ್ಯೆ ಒಡ್ಡುತ್ತಿರುವ ಶಕ್ತಿಗಳನ್ನು ತಡೆಯಲು ಹಾಗೂ ಭ್ರಷ್ಟಾಚಾರ ಹತ್ತಿಕ್ಕಲು ಕ್ರಮ. ಮೋದಿ ಸರ್ಕಾರದ ಪ್ರಸ್ತಾವಿತ ಜಿಎಸ್‌ಟಿ (Goods Service Tax) ಜಾರಿಗೆ ಬರುವವರೆಗೆ, VAT ನೀತಿಗಳು ಸರಳಗೊಳ್ಳುವವರೆಗೆ ಈ ನಿಯಮ ಅನ್ವಯಿಸಲಾಗುವುದು.

ಕೇಂದ್ರದಿಂದ ಅಗತ್ಯ ಅನುದಾನ
ಜಿಎಸ್‌ಟಿ ನೀತಿ ಜಾರಿಯಾದ ಮೇಲೆ ದೆಹಲಿಯಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಲು ಅಗತ್ಯವಾದಷ್ಟು ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆಯಲಾಗುವುದು.

ಕಂಪನಿ ಸಂಯೋಜನೆ ಸರಳ
ಕಂಪನಿಗಳ ಸಂಯೋಜನೆಗೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ದೆಹಲಿಯಲ್ಲಿ ಹೊಸ ಉದ್ಯಮ ಆರಂಭಿಸಲು ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗುವುದು ಹಾಗೂ ಶೀಘ್ರ ಅನುಮೋದನೆ ದೊರಕಿಸಲು ಪ್ರಯತ್ನಿಸಲಾಗುವುದು.

ಬಂಡವಾಳ ಹೂಡಿಕೆಗೆ ಅವಕಾಶ
ಉದ್ಯಮಶೀಲತೆಯನ್ನು ಬೆಂಬಲಿಸಲು ಬಂಡವಾಳ ಹೂಡಿಕೆದಾರರಿಗೆ ಅವಕಾಶ ನೀಡಲಾಗುವುದು. ಬಳಕೆಯಾಗದ ಸ್ಥಳಗಳಲ್ಲಿ ಉದ್ಯಮ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.

ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ
ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕವನ್ನು ವಿವೇಚನೆಯುಕ್ತಗೊಳಿಸಲಾಗುವುದು. ಹೆಚ್ಚು ಮೊತ್ತ ಸಂಗ್ರಹವಾಗಲು ಕ್ರಮ ಕೈಗೊಳ್ಳಲಾಗುವುದು.

ಗವಾಕ್ಷಿ ಪದ್ಧತಿ ಜಾರಿ
VAT, ಅಬಕಾರಿ ಮತ್ತು ಮನೋರಂಜನಾ ತೆರಿಗೆಗಳ ಸಮಸ್ಯೆ ಬಗೆಹರಿಸಲು ಏಕ ಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು. ಮಹಿಳೆಯರು ನಡೆಸುವ ಉದ್ಯಮಗಳಿಗೆ ಹೆಚ್ಚು ಸೌಲಭ್ಯ ಒದಗಿಸಲಾಗುವುದು.

ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳ
ದೆಹಲಿಯಲ್ಲಿ ಉದ್ಯಮ ಸ್ಥಾಪನೆ ಹಾಗೂ ನಿರ್ವಹಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದು. ಉದ್ಯಮ ಆರಂಭ, ಕಟ್ಟಡ ಕಾಮಗಾರಿ ವ್ಯವಹಾರ, ವಿದ್ಯುತ್ ಸಂಪರ್ಕ, ಆಸ್ತಿ ನೋಂದಣಿ, ಸಾಲ ಪಡೆಯುವುದು ಹಾಗೂ ತೆರಿಗೆ ಪದ್ಧತಿಗಳನ್ನು ಸರಳಗೊಳಿಸಲಾಗುವುದು.

ವ್ಯಾಪಾರ ವೆಚ್ಚ ಕಡಿಮೆ
ಗಡಿ ಪ್ರದೇಶದಲ್ಲಿ ವ್ಯಾಪಾರ ಮಾಡುವಾಗ ದಾಖಲೆ ನಿರ್ವಹಣೆ, ಸಮಯ ಮತ್ತು ವೆಚ್ಚಗಳನ್ನು ಕಡಿಮೆ ಮಾಡಲಾಗುವುದು.

ಉತ್ತಮ ಪಾದಚಾರಿ ಮಾರ್ಗ
ಮಾರುಕಟ್ಟೆ ಸುತ್ತ ಉತ್ತಮ ಪಾದಚಾರಿ ಮಾರ್ಗ ನಿರ್ಮಾಣ. ಹಾಳಾಗಿರುವ ಸೌಲಭ್ಯ ಶೀಘ್ರ ದುರಸ್ತಿ.

ವ್ಯಾಪಾರಿ - ಉದ್ಯಮಿ ಮಧ್ಯೆ ಮಾತುಕತೆ
ವ್ಯಾಪಾರಿಗಳು - ಉದ್ಯಮಿಗಳ ಸಂಘಟನೆಗಳು ಹಾಗೂ ವಾಣಿಜ್ಯ ಚೇಂಬರ್‌ಗಳ ಜೊತೆ ನಿರಂತರ ಹಾಗೂ ಸಾಮಾನ್ಯ ಮಾತುಕತೆ ನಡೆಸುವುದು. ಈ ಪ್ರಕ್ರಿಯೆಯಲ್ಲಿ ಉಂಟಾಗುವ ವಿವಾದಗಳನ್ನು ನಿಭಾಯಿಸುವುದು.












Click it and Unblock the Notifications