ಕೇಜ್ರಿವಾಲ್ ವಿರುದ್ಧ ಮತ್ತೊಂದು ಹಗರಣದ ಆರೋಪ
ಅವರ ಸಂಬಂಧಿಯು ಮಾಡಿರುವ ಭೂ ಹಗರಣ ಮತ್ತು ಅದಕ್ಕೆ ಕುಮ್ಮಕ್ಕು ನೀಡಿರುವ ಕೇಜ್ರಿವಾಲ್ ಅವರ ಬಗ್ಗೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿದ್ದು, ಅವುಗಳನ್ನು ಮೇ 9ರಂದು ಬೆಳಗ್ಗೆಕೊಂಡೊಯ್ದು ಸಿಬಿಐಗೆ ದೂರು ನೀಡುವುದಾಗಿ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
ನವದಹೆಲಿ, ಮೇ 8: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಿಂದ ಹೊರದಬ್ಬಲ್ಪಟ್ಟಿರುವ ಸಚಿವ ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ಧ ಒಂದೊಂದಾಗಿ ಹಗರಣಗಳ ಆರೋಪಗಳನ್ನು ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ, ವಾಟರ್ ಟ್ಯಾಂಕರ್ ಹಗರಣದ ಆರೋಪ ಮಾಡಿದ್ದ ಅವರೀಗ, ಕೇಜ್ರಿವಾಲ್ ವಿರುದ್ಧ ಭೂ ಹಗರಣದ ಆರೋಪವನ್ನೂ ಮಾಡಿದ್ದಾರೆ.[ಅರವಿಂದ್ ಕೇಜ್ರಿವಾಲ್ ಮೇಲೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ ಕಪಿಲ್ ಮಿಶ್ರಾ]

ಹೊಸ ಆರೋಪವೇನು?: ತಮ್ಮ ಹೊಸ ಆರೋಪದಲ್ಲಿ ಮಿಶ್ರಾ ಅವರು, ಕೇಜ್ರಿವಾಲ್ ಅವರ ಸಂಬಂಧಿಯೊಬ್ಬರು ಕೇಜ್ರಿವಾಲ್ ಪ್ರಭಾವ ಬಳಸಿ 50 ಕೋಟಿ ರು. ಮೌಲ್ಯದ ಜಮೀನನ್ನು ಕಬಳಿಸಿದ್ದಾರೆಂದು ಹೇಳಿದ್ದಾರೆ.
ಅವರ ಸಂಬಂಧಿಯು ಮಾಡಿರುವ ಭೂ ಹಗರಣ ಮತ್ತು ಅದಕ್ಕೆ ಕುಮ್ಮಕ್ಕು ನೀಡಿರುವ ಕೇಜ್ರಿವಾಲ್ ಅವರ ಬಗ್ಗೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿದ್ದು, ಅವುಗಳನ್ನು ಮೇ 9ರಂದು ಬೆಳಗ್ಗೆ ಕೊಂಡೊಯ್ದು ಸಿಬಿಐಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ತಮ್ಮನ್ನು ಸೇರ್ಪಡೆಗೊಳಿಸಿಕೊಳ್ಳಲು ಬಿಜೆಪಿಯಿಂದ ಯಾವುದೇ ಆಮಿಷ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications