ಕೇಜ್ರಿವಾಲ್ ಪರಮಾಪ್ತನನ್ನು ಅಮಾನತು ಮಾಡಿದ ದೆಹಲಿ ಸರ್ಕಾರ

Written By:
Subscribe to Oneindia Kannada

ನವದೆಹಲಿ, ಜುಲೈ, 06: ಅವ್ಯವಹಾರದ ಕಾರಣಕ್ಕೆ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರಮಾಪ್ತ ಅಧಿಕಾರಿ (Principal Secretary) ರಾಜೇಂದ್ರ ಕುಮಾರ್ ಅವರನ್ನು ಸ್ಥಾನದಿಂದ ದೆಹಲಿ ಸರ್ಕಾರ ಅಮಾನತು ಮಾಡಿದೆ.

ನಿಯಮಗಳ ಪ್ರಕಾರ ಯಾವುದೇ ಸರಕಾರಿ ಅಧಿಕಾರಿ 48 ತಾಸುಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿ ಇದ್ದರೆ ಅಮಾನತುಗೊಳ್ಳುತ್ತಾನೆ. ರಾಜೇಂದ್ರ ಕುಮಾರ್‌ ಅವರನ್ನು ಜುಲೈ 4ರಂದು ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಬಂಧನ ಮಾಡಿದ್ದರು.[ಅರವಿಂದ್ ಕೇಜ್ರಿವಾಲ್ ಪರಮಾಪ್ತನನ್ನು ಬಂಧಿಸಿದ ಸಿಬಿಐ]

new delhi

ಇತರ ನಾಲ್ವರು ಆರೋಪಿಗಳೊಂದಿಗೆ ರಾಜೇಂದ್ರ ಕುಮಾರ್ ಅವರನ್ನು ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿತ್ತು. ಕುಮಾರ್‌ ಅವರೊಂದಿಗೆ ಕೇಜ್ರಿವಾಲ್‌ ಕಾರ್ಯಾಲಯದ ಉಪ ಕಾರ್ಯದರ್ಶಿ ತರುಣ್‌ ಶರ್ಮಾ, ಅಶೋಕ್‌ ಕುಮಾರ್‌ ಹಾಗೂ ಎಂಡೋವರ್‌ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ನಿರ್ದೇಶಕರಾಗಿರುವ ಸಂದೀಪ್‌ ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಗುಪ್ತಾ ಅವರನ್ನು ಸಹ ಸಿಬಿಐ ಅಧಿಕಾರಿಗಳು ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.[ಜೈಲು ಪಾಲಾದ ಕೇಜ್ರಿವಾಲ್ ಆಪ್ತ ಮಾಡಿದ ಹಗರಣವೇನು?]

ಯಾವ ಹಗರಣ?

ಕಳೆದ ವರ್ಷ ದೆಹಲಿ ಆಡಳಿತ ಲೆಕ್ಕ ತೆಗೆದಾಗ ಹಣ ದುರುಪಯೋಗದ ಸಂಗತಿ ಬೆಳಕಿಗೆ ಬಂದಿದೆ. ಎಂಡೋವರ್ ಸಿಸ್ಟಮ್ಸ್ ಎಂಬ ಖಾಸಗಿ ಸಂಸ್ಥೆಯ ನಿರ್ದೇಶಕರು ಮತ್ತು ರಾಜೇಂದ್ರ ಕುಮಾರ್ ಮೇಲೆ ಇದೇ ವೇಳೆ ಸಿಬಿಐ ದೂರು ದಾಖಲಿಸಿಕೊಂಡಿತ್ತು.

ಸರ್ಕಾರಕ್ಕೆ ಸಂಭಂಧಿಸಿದ 9.5 ಕೋಟಿ ರು. ಹಣದ ಗುತ್ತಿಗೆಯನ್ನು ಸಂಸ್ಥೆ ಅಕ್ರಮವಾಗಿ ಪಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಸಿಬಿಐ ಮೂಲಗಳು ಹೇಳುವಂತೆ ಎಂಡೋವರ್ ಸಿಸ್ಟಮ್ಸ್ ಕಂಪನಿಯನ್ನು 2006 ರಲ್ಲಿ ರಾಜೇಂದ್ರ ಕುಮಾರ್ ಆರಂಭ ಮಾಡಿದ್ದರು. ಕುಮಾರ್ ತಮ್ಮ ಸ್ನೇಹಿತರಾದ ಅಶೋಕ್ ಕುಮಾರ್ ಎಂಬುವರನ್ನು ಬಳಸಿಕೊಂಡು ಕಂಪನಿಯನ್ನು ನಡೆಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Delhi Government on Wednesday suspended Chief Minister Arvind Kejriwal's Principal Secretary Rajendra Kumar, as the rules state that an official is deemed suspended if he remains in custody for more than 48 hours.
Please Wait while comments are loading...