ಸತ್ಯೇಂದರ್ ಜೈನ್ ಬಂಧನ ಸಾಧ್ಯತೆ ಕುರಿತು ಮಾತನಾಡಿದ ಕೇಜ್ರಿವಾಲ್
ನವದೆಹಲಿ, ಜನವರಿ 24: ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜೈನ್ ಅವರ ನಿವಾಸದ ಮೇಲೆ ಈ ಹಿಂದೆ ಎರಡು ಬಾರಿ ದಾಳಿ ನಡೆಸಿತ್ತು. ಆದರೆ, ಏನೂ ಸಿಕ್ಕಿರಲಿಲ್ಲ. ಇಡಿ ಮತ್ತೆ ದಾಳಿ ಮಾಡಲು ಬಯಸುವುದಾದ್ರೆ, ಅವರಿಗೆ ಸ್ವಾಗತ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವ ಮುನ್ನ ಜಾರಿ ನಿರ್ದೇಶನಾಲಯ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.

ಈ ಮೊದಲು ನಮ್ಮ 21 ಶಾಸಕರನ್ನು ಬಂಧನಕ್ಕೊಳಪಡಿಸಲಾಗಿತ್ತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದರೆ ಏನಾಗಬಹುದು? ಐದರಿಂದ 10 ದಿನಗಳಲ್ಲಿ ಜಾಮೀನು ಸಿಗಲಿದೆ. ನಾವು ಚನ್ನಿಯವರಂತೆ ಕೊರಗುವುದಿಲ್ಲ, ಅವರಂತೆ ಕೋಪವನ್ನೂ ಮಾಡಿಕೊಳ್ಳುವುದಿಲ್ಲ, ನಾವೇನೂ ತಪ್ಪು ಮಾಡಿಲ್ಲ. ಹಾಗಾಗಿ, ಭಯವಿಲ್ಲ ಎಂದು ಹೇಳಿದ್ದಾರೆ.
ನಮಗೆ ಯಾವುದೇ ಭಯವಿಲ್ಲ. ಏಕೆಂದರೆ, ನಾವು ಸತ್ಯದ ಹಾದಿಯಲ್ಲಿ ನಡೆದಾಗ ಈ ಎಲ್ಲಾ ಅಡೆತಡೆಗಳು ಬರುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸಿಬಿಐ ಮತ್ತು ಆದಾಯ ತೆರಿಗೆಯಂತಹ ಇತರ ಏಜೆನ್ಸಿಗಳನ್ನು ಸಹ ಕಳುಹಿಸಲು ಬಯಸಿದರೆ, ಅದು ಕಳುಹಿಸಬಹುದು. ಸತ್ಯೇಂದ್ರ ಜೈನ್ ಅಲ್ಲದೇ ಬೇರೆಯವರನ್ನೂ ಬಂಧಿಸಿ, ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಯಾರಿಗೂ ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಚುರುಕುಗೊಂಡಿವೆ ಎಂದು ಕೇಜ್ರಿವಾಲ್ ಟಾಂಗ್ ನೀಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಬಿಜೆಪಿಗೆ ಯಾವಾಗ ಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತದೆಯೋ, ಆಗ ಅದು ತನ್ನ ಎಲ್ಲಾ ಏಜೆನ್ಸಿಗಳಿಗೆ ಕೆಲಸವನ್ನು ಕೊಡುತ್ತದೆ. ಆದ್ದರಿಂದ ದಾಳಿಗಳು ನಡೆಯುತ್ತವೆ ಮತ್ತು ಬಂಧನಗಳೂ ಆಗುತ್ತವೆ.
ಪಂಜಾಬ್‌ನಲ್ಲಿ ಚುನಾವಣೆಗೆ ಮುನ್ನವೇ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಲಿದೆ ಎಂದು ನಮ್ಮ ಮೂಲಗಳ ಮೂಲಕ ನಾವು ತಿಳಿದುಕೊಂಡಿದ್ದೇವೆ. ಅವರು ಈ ಹಿಂದೆ ಎರಡು ಬಾರಿ ಸತ್ಯೇಂದ್ರ ಜೈನ್ ಮೇಲೆ ದಾಳಿ ಮಾಡಿದ್ದಾರೆ ಮತ್ತು ಬರಿಗೈಯಲ್ಲಿ ಮರಳಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು. ನಾವು ಹೆದರುವುದಿಲ್ಲ.
ನಾನು ಸೇರಿದಂತೆ ಸಂಸ್ಥೆಗಳು ಯಾರನ್ನು ಬೇಕಾದರೂ ಬಂಧಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. "ಮೋದಿ ಸರ್ಕಾರವು ಪಂಜಾಬ್ ಚುನಾವಣೆಗೆ ಮುಂಚೆಯೇ ನಮ್ಮ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಯೋಚಿಸುತ್ತಿದೆ.
ನಾವು ಅವರನ್ನು ಸ್ವಾಗತಿಸುತ್ತೇವೆ, ಅವರು ಇಡಿ, ಸಿಬಿಐ ಇತ್ಯಾದಿಗಳನ್ನು ಕಳುಹಿಸಬಹುದು ಮತ್ತು ನನ್ನನ್ನೂ ಒಳಗೊಂಡಂತೆ ಅವರು ಬಯಸುವ ಯಾರನ್ನಾದರೂ ಬಂಧಿಸಬಹುದು. ನಾವು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ನಾವು ಹೆದರುವುದಿಲ್ಲ. ನಾವು ಚನ್ನೀ ಜೀಯಂತೆ ಅಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿ ಎಎಪಿ ಟ್ವೀಟ್ ಮಾಡಿದೆ.
ಇಡಿ ಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆ.20 ರಂದು ನಡೆಯಲಿರುವ ಪಂಜಾಬ್ ಚುನಾವಣೆಗೆ ಮುನ್ನ ಇಡಿ, ಸಂಪುಟ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮುಂದಿನ ದಿನಗಳಲ್ಲಿ ಬಂಧಿಸಬಹುದು ಎಂದು ನಮ್ಮ ಮೂಲಗಳು ತಿಳಿಸಿವೆ. ಈ ಹಿಂದೆಯೂ ಕೇಂದ್ರವು ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆಸಿತ್ತು. ಆದರೆ ಅವರಿಂದ ಏನೂ ಸಿಕ್ಕಿಲ್ಲ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರು ಮತ್ತು ಕಾರ್ಯಕರ್ತರು ಈ ಸಂಸ್ಥೆಗಳಿಗೆ ಹೆದರುವುದಿಲ್ಲ. ಏಕೆಂದರೆ ನಾವು ಯಾವುದೇ ತಪ್ಪು ಮಾಡಿಲ್ಲ. ಮುಂಬರುವ ಕೆಲವೇ ದಿನಗಳಲ್ಲಿ ಪಂಜಾಬ್ ಚುನಾವಣೆಗೆ ಮುಂಚೆಯೇ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಹೊರಟಿದೆ. ಅವರನ್ನು ನಾವು ಸ್ವಾಗತಿಸುತ್ತೇವೆ ಎಂದರು.
ನಾವು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರಂತೆ ಇಡಿ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಅವರು ತಪ್ಪು ಮಾಡಿದ್ದರು. ಅದಕ್ಕೆ ಹತಾಶರಾಗಿದ್ದರು. ಆದರೆ ನಾವು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ಅದಕ್ಕೆ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಮ್ಮ ಡೆಪ್ಯೂಟಿ ಮನೀಶ್ ಸಿಸೋಡಿಯಾ, ಜೈನ್ ಅವರ ನಿವಾಸ ಮತ್ತು ಎಎಪಿಯ 21 ಶಾಸಕರನ್ನು ಬಂಧಿಸಲಾಗಿತ್ತು. ಆದರೆ ಅವರಿಗೆ ಏನೂ ಸಿಗಲಿಲ್ಲ ಎಂದು ನೇರವಾಗಿ ಹೇಳಿದರು.












Click it and Unblock the Notifications