ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸಚಿವನ 'ರಾಸಲೀಲೆ ಸಿಡಿ' ಲೀಕ್, ಸಂಪುಟದಿಂದ ಔಟ್!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 31: ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತೊಮ್ಮೆ ಬೇಡದ ವಿಚಾರಕ್ಕೆ ಸುದ್ದಿಯಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಂಪುಟ ಸಚಿವ ಸಂದೀಪ್ ಕುಮಾರ್ ಅವರ 'ರಾಸಲೀಲೆ ಸಿಡಿ' ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ ಅವರನ್ನು ಸಂಪುಟದಿಂದ ಬುಧವಾರ ರಾತ್ರಿ ಹೊರ ಹಾಕಲಾಗಿದೆ.

ಮಹಿಳಾ ಮಕ್ಕಳ ಕಲ್ಯಾಣ ಖಾತೆ ಸಚಿವ ಸಂದೀಪ್ ಕುಮಾರ್ ಅವರು ಇಬ್ಬರು ಯುವತಿಯರ ಜೊತೆ ಅರೆ ನಗ್ನ ಸ್ಥಿತಿಯಲ್ಲಿರುವ ಚಿತ್ರಗಳು ಹಾಗೂ ವಿಡಿಯೋ ತುಣುಕುಗಳಿರುವ ಸಿಡಿಯೊಂದು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕೈ ತಲುಪಿದೆ. [ಮಹಿಳೆಗೆ ಬೆದರಿಕೆ, ಎಎಪಿ ಶಾಸಕನ ಬಂಧನ]

Arvind Kejriwal

ಸಿಡಿಯನ್ನು ಪರಿಶೀಲಿಸಿದ ನಂತರ ಕೇಜ್ರಿವಾಲ್ ಅವರು ಈ ಕ್ರಮ ಜರುಗಿಸಿದ್ದಾರೆ.

ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಯಾವ ಕಾರ್ಯವನ್ನು ನಮ್ಮ ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ನನಗೆ ಈ ಸಿಡಿ ತಲುಪಿದ ಮರುಕ್ಷಣವೇ ಕ್ರಮ ಜರುಗಿಸಿದ್ದೇನೆ. [ಆತ್ಮಹತ್ಯೆಗೆ ಪ್ರಚೋದನೆ ಆಮ್ ಆದ್ಮಿ ಶಾಸಕ ಬಂಧನ]


ಆಮ್ ಆದ್ಮಿ ಪಕ್ಷದ ಸರ್ಕಾರದ ಸಂಪುಟದಿಂದ ಸಂದೀಪ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಿತ್ತು ಹಾಕಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.

English summary
Delhi Chief Minister Arvind Kejriwal on Wednesday evening sacked his cabinet colleague, social welfare minister, Sandeep Kumar after he received an objectionable CD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X