ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ದಾಳಿ ಬಳಿಕ ಮೊದಲ ಬಾರಿ ಗವರ್ನರ್ ಭೇಟಿಯಾದ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 09: ದೆಹಲಿ ಉಪಮಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಶುಕ್ರವಾರ ಭೇಟಿಯಾದರು.

ಬಳಿಕ ಮಾತನಾಡಿದ ಅವರು, 40 ನಿಮಿಷಗಳ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಅವರು ಕೊನೆಯ ಬಾರಿಗೆ ಆಗಸ್ಟ್ 12ರಂದು ಭೇಟಿಯಾಗಿದ್ದರು. ಆದರೆ ಆಗಸ್ಟ್ 19ರಂದು ಮದ್ಯದ ನೀತಿಯಲ್ಲಿನ ಹಗರಣದ ಮೇಲೆ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಜುಲೈನಲ್ಲಿ ಸಕ್ಸೇನಾ ಅವರು ಮದ್ಯದ ನೀತಿ ಹಗರಣ ಸಂಬಂಧ ತನಿಖೆಗೆ ಆದೇಶಿಸಿದ್ದರು. ಇದನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ಕುತಂತ್ರ ಎಂದು ಎಎಪಿ ಹೇಳಿದೆ.

ಉತ್ತರ ಕರ್ನಾಟಕದ ಕೆಲ ನಾಯಕರು ಆಮ್‌ ಆದ್ಮಿ ಪಾರ್ಟಿ ಸೇರ್ಪಡೆಉತ್ತರ ಕರ್ನಾಟಕದ ಕೆಲ ನಾಯಕರು ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ

ಶುಕ್ರವಾರ ಆಗಸ್ಟ್ 26 ಎಎಪಿ ನಾಯಕ ಕೇಜ್ರಿವಾಲ್‌ ಚುನಾವಣಾ ಪ್ರಚಾರಕ್ಕಾಗಿ ಪಿಎಂ ಮೋದಿಯವರ ರಾಜ್ಯವಾದ ಗುಜರಾತ್‌ನಲ್ಲಿ ಪ್ರಚಾರ ನಡೆಸಿದ್ದರು ಮತ್ತು ಅವರು ಸೆಪ್ಟೆಂಬರ್ 2ರಂದು ಮತ್ತೆ ಪ್ರಯಾಣ ಬೆಳೆಸಿದ್ದರು. ಆದರೆ ಇಂದಿನ ಗೌವರ್ನರ್‌ ಸಭೆಯಲ್ಲಿ ದಿನನಿತ್ಯದ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಅದರ ಕಾರ್ಯಸೂಚಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಿಲ್ಲ. ದೆಹಲಿ ಸ್ವಚ್ಛವಾಗಿರಲು ಎಂಸಿಡಿ (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ಅನ್ನು ಸ್ವಲ್ಪ ಸರಿಪಡಿಸೋಣ ಎಂದು ನಾನು ಗವರ್ನರ್‌ ಸರ್ ಅವರನ್ನು ವಿನಂತಿಸಿದೆ ಎಂದರು. ಎಂಸಿಡಿಯಲ್ಲಿ ಬಿಜೆಪಿ ಆಡಳಿತ ಇದೆ.

ಪರಿಸ್ಥಿತಿ ಸುಧಾರಿಸಬೇಕೆಂದು ಭಾವಿಸುತ್ತೇನೆ

ಪರಿಸ್ಥಿತಿ ಸುಧಾರಿಸಬೇಕೆಂದು ಭಾವಿಸುತ್ತೇನೆ

ಸಕ್ಸೇನಾ ಅಥವಾ ಅವರ ಕಚೇರಿ ಸಭೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಅರವಿಂದ್‌ ಕೇಜ್ರಿವಾಲ್, ಏನೇ ನಡೆದರೂ ದುರದೃಷ್ಟಕರ ಮತ್ತು ಪರಿಸ್ಥಿತಿ ಸುಧಾರಿಸಬೇಕೆಂದು ನಾನು ಭಾವಿಸುತ್ತೇನೆ. ಕಳೆದ ಶುಕ್ರವಾರದಂದು ಯಾವುದೇ ಸಭೆಯಿಲ್ಲದೆ ನಾನು ಆಕಸ್ಮಿಕವಾಗಿ ದೆಹಲಿಯಲ್ಲಿ ಇರಲಿಲ್ಲ. ಇಂದು ಉತ್ತಮ ವಾತಾವರಣದಲ್ಲಿ ನಡೆದ ಸಭೆ ಎಂದು ಹೇಳಿದರು.

ಗುಜರಾತ್ ವಿಧಾನಸಭಾ ಚುನಾವಣೆ: ಆಪ್ 10 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗುಜರಾತ್ ವಿಧಾನಸಭಾ ಚುನಾವಣೆ: ಆಪ್ 10 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

ಗವರ್ನರ್‌ ಸಿಬಿಐ ತನಿಖೆಗೆ ಶಿಫಾರಸು

ಗವರ್ನರ್‌ ಸಿಬಿಐ ತನಿಖೆಗೆ ಶಿಫಾರಸು

ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಸಿಬಿಐ ದಾಳಿ ನಡೆಸಿದ ನಂತರ ಎಎಪಿ ಮತ್ತು ಕೇಂದ್ರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ನಡುವೆ ಬಹಳಷ್ಟು ತಿಕ್ಕಾಟ ನಡೆದಿದೆ. ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ ನಂತರ ಜುಲೈನಲ್ಲಿ ಹಿಂತೆಗೆದುಕೊಳ್ಳುವ ಮೊದಲು ಖಾಸಗಿ ಕಂಪನಿಗಳನ್ನು ಮದ್ಯದ ವ್ಯಾಪಾರಕ್ಕೆ ಕರೆತರುವ ನೀತಿಯು ಎಂಟು ತಿಂಗಳವರೆಗೆ ಜಾರಿಯಲ್ಲಿತ್ತು.

ವಿಧಾನಸಭೆಯಲ್ಲಿ ಎಎಪಿ ಬಹುಮತ ಸಾಬೀತು

ವಿಧಾನಸಭೆಯಲ್ಲಿ ಎಎಪಿ ಬಹುಮತ ಸಾಬೀತು

ಗವರ್ನರ್‌ ವಿಕೆ ಸಕ್ಸೇನಾ ಅವರು ಎಎಪಿ ನಾಯಕರಿಗೆ ಮಾನನಷ್ಟ ನೋಟಿಸ್ ಕಳುಹಿಸಿದಾಗ ಅವರಲ್ಲಿ ಒಬ್ಬರಾದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಅದನ್ನು ತೀವ್ರವಾಗಿ ಟೀಕಿಸಿದರು. ಎಎಪಿ ಸರ್ಕಾರವು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ವಿಶೇಷ ಅಧಿವೇಶನವನ್ನು ನಡೆಸಿತು. ಅಲ್ಲಿ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿಯು ತಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗುವುದನ್ನು ತಡೆಯಲು ಬಿಜೆಪಿ ಹಗರಣದ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರ ದುರುಪಯೋಗದ ಆರೋಪ

ಅಧಿಕಾರ ದುರುಪಯೋಗದ ಆರೋಪ

ಸಕ್ಸೇನಾ ಅವರು ತಮ್ಮ ಖಾದಿ ಆಯೋಗದ ಅಧಿಕಾರಾವಧಿಯಲ್ಲಿ ಆಗಿರುವ ಅಧಿಕಾರ ದುರುಪಯೋಗದ ಆರೋಪಗಳನ್ನು ನಿರಾಕರಿಸಿದ್ದಾರೆ. ಮುಂಬೈನಲ್ಲಿ ಖಾದಿ ಲಾಂಜ್ ಅನ್ನು ವಿನ್ಯಾಸಗೊಳಿಸಲು ತನ್ನ ಮಗಳಿಗೆ ನೀಡಲಾದ ಗುತ್ತಿಗೆಯ ಬಗ್ಗೆ ಎಎಪಿ ತಪ್ಪು ಅಂಕಿಅಂಶಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ ಈ ಆರೋಪ ಸಂಬಂಧ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಸೆಪ್ಟೆಂಬರ್ 7 ರಂದು ಸಂವಿಧಾನ ಪೀಠವು ಈ ವಿಷಯವನ್ನು ಕೊನೆಯದಾಗಿ ಆಲಿಸಿತು. ಅಂದೇ ಎಎಪಿ ನಾಯಕ ಸಂಜಯ್ ಸಿಂಗ್ ಗವರ್ನರ್‌ ಸಕ್ಸೇನಾ ಅವರ ನೋಟಿಸ್ ಅನ್ನು ಹರಿದ ದಿನವಾಗಿತ್ತು. ನ್ಯಾಯಾಲಯವು ಅಕ್ಟೋಬರ್ 11 ರಂದು ತಾತ್ಕಾಲಿಕ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ.

English summary
Chief Minister Arvind Kejriwal met Lt Governor VK Saxena on Friday for the first time since the CBI raid on Delhi Deputy Chief Minister Manish Sisodia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X