ಮೋದಿ, ಮಾಯಾ, ಅಖಿಲೇಶ್ ರನ್ನು ಭೇಟಿಯಾಗಲಿರುವ ಕೆಸಿಆರ್

Recommended Video

      ನರೇಂದ್ರ ಮೋದಿಯನ್ನ ಭೇಟಿಯಾಗಲಿದ್ದಾರೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ | Oneindia Kannada

      ಹೈದರಾಬಾದ್, ಡಿಸೆಂಬರ್ 26: ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಸಂಯುಕ್ತ ಕೂಟ(Federal Front) ರಚನೆಯ ಕುರಿತು ಉತ್ಸುಕತೆ ತೋರುತ್ತಿರುವ ಕೆಸಿಆರ್ ಮೋದಿ ಅವರನ್ನು ಭೇಟಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ.

      ಆದರೆ ಪ್ರಧಾನಿ ಅವರನ್ನು ಕೆಸಿಆರ್ ಭೇಟಿಯಾಗುತ್ತಿರುವುದು ಕೇವಲ ಸೌಜನ್ಯದ ಭೇಟಿ ಎನ್ನಲಾಗಿದೆ. ನಂತರ ಕೆಸಿಆರ್ ಉತ್ತರ ಪ್ರದೇಶಕ್ಕೆ ತೆರಳಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲಿದ್ದಾರೆ.

      KCR to meet PM Modi, Mayawati, Akhilesh Yadav

      ಪ್ರಾದೇಶಿಕ ಪಕ್ಷಗಳನ್ನೆಲ್ಲ ಒಗ್ಗೂಡಿಸಿ, ಸಂಯುಕ್ತ ಕೂಟವನ್ನು ರಚಿಸಲು ಮುಂದಾಗಿದ್ದ ಕೆ ಚಂದ್ರಶೇಖರ್ ರಾವ್ ಈಗಾಗಲೇ ಬಿಜು ಜನತಾ ದಳದ ಮುಖಂಡ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಾಯಾವತಿ ಅವರನ್ನೂ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದರು.

      ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು, ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಸಂಯುಕ್ತ ಕೂಟ ನಿರ್ಮಿಸುವುದು ಕೆಸಿಆರ್ ಕನಸು. 2019 ರ ಲೋಕಸಭಾ ಚುನಾವಣೆಯನ್ನೂ ಬಿಜೆಪಿ-ಕಾಂಗ್ರೆಸ್ ಅನ್ನು ಹೊರಗಿಟ್ಟೇ ಎದುರಿಸಲು ಈ ಸಂಯುಕ್ತ ಕೂಟ ಮುಂದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+