• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಪುಟ ವಿಸ್ತರಣೆ ಚರ್ಚೆಗೆ ದೆಹಲಿಗೆ ಹಾರಿದ ರಾಜ್ಯ ಕೈ ನಾಯಕರು

|

ನವದೆಹಲಿ, ಡಿಸೆಂಬರ್ 20: ಸಂಪುಟ ವಿಸ್ತರಣೆ ಬಗ್ಗೆ ಬಹು ಮುಖ್ಯ ವಿಷಯಗಳ ಚರ್ಚೆಗೆಂದು ರಾಜ್ಯ ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ಹೊರಟಿದ್ದಾರೆ.

ಸಚಿವ ಸ್ಥಾನಕ್ಕಾಗಿ ಮುಸ್ಲಿಂ ರಾಜಕೀಯ ನಾಯಕರಿಂದ ದೆಹಲಿಯಲ್ಲಿ ಲಾಬಿ

ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡುವಾಗಲಾಗುತ್ತಿತ್ತು. ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವವರ ಪಟ್ಟಿಯನ್ನು ರಾಜ್ಯ ನಾಯಕರು, ರಾಹುಲ್ ಗಾಂಧಿಯ ಅನುಮೋದನೆಗಾಗಿ ದೆಹಲಿಗೆ ಕೊಮಡೊಯ್ದಿದ್ದಾರೆ.

ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು

ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರುಗಳು ದೆಹಲಿಗೆ ವಿಮಾನ ಹತ್ತಿದ್ದಾರೆ.

ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಈ ನಾಯಕರುಗಳು ಚರ್ಚೆ ನಡೆಸಿ ಅಂತಿಮ ಪಟ್ಟಿಗೆ ಅನುಮೊದನೆ ಪಡೆಯಲಿದ್ದಾರೆ.

ನಾನೇನು ದಿನೇಶ್ ಗುಂಡೂರಾವ್ ನಾಲಿಗೇನಾ, ಅವ್ರನ್ನೇ ಕೇಳಿ ಎಂದ ಸಿದ್ದರಾಮಯ್ಯ

ಆರು ಸ್ಥಾನಕ್ಕೆ 15 ಮಂದಿ ಆಕಾಂಕ್ಷಿಗಳು ಇದ್ದು, ಎಲ್ಲರ ಪಟ್ಟಿಯನ್ನು ಮುಖಂಡರು ಹೈಕಮಾಂಡ್‌ ಬಳಿ ತೆಗೆದುಕೊಂಡು ಹೋಗಿದ್ದು ಅಲ್ಲಿ ವಿಸ್ತೃತ ಚರ್ಚೆಯ ಬಳಿಕ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಆಗಲಿದೆ. ಹೊಸ ಸಚಿವರು ಅಂದೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

English summary
Karnataka congress seniour leaders went to Delhi to meet congress high command and discuss about cabinet expansion. Siddaramaiah, Parameshwar, Dinesh Gundu rao, Eshwar Khandre were in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X