ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಗುರ್ಮೆಹರ್ ಕೌರ್

ಅತ್ಯಾಚಾರ ಮಾಡುವುದಾಗಿ ಫೇಸ್ ಬುಕ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾಪ್ಟನ್ ಮನ್ ದೀಪ್ ಸಿಂಗ್ ಅವರ ಮಗಳು ಗುರ್ಮೆಹರ್ ಕೌರ್ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ

ನವದೆಹಲಿ, ಫೆಬ್ರವರಿ 27: ಎಬಿವಿಪಿ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೌರ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮನ್ ದೀಪ್ ಸಿಂಗ್ ಮಗಳು.

ಆಕೆಗೆ ಅನ್ ಲೈನ್ ನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. "ನನಗೆ ಅನಿಸುತ್ತೆ, ಯಾವಾಗ ಜನ ನಿಮ್ಮ ವಿರುದ್ಧ ಹಿಂಸಾಚಾರ ಅಥವಾ ಅತ್ಯಾಚಾರದ ಬೆದರಿಕೆ ಹಾಕುತ್ತಾರೋ ಅದೂ ರಾಷ್ಟ್ರಿಯತೆ ಹೆಸರಿನಲ್ಲಿ ಬೆದರಿಕೆ ಹಾಕುತ್ತಾರೋ ಅದು ಸರಿಯಲ್ಲ" ಎಂದು ಕೌರ್ ಇಂಗ್ಲಿಷ್ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ್ದಾರೆ.[ಮತ್ತೆ ಸುದ್ದಿಯಲ್ಲಿ ಸೆಹ್ವಾಗ್, ಬ್ಯಾಟ್ ಬೀಸಿದ್ದು ಯಾರಿಗೆ?]

Kargil martyr's daughter Gurmehar Kaur files complaint with DCW after receiving rape threats

'ಎಬಿವಿಪಿಗೆ ತಾನು ಹೆದರುವುದಿಲ್ಲ' ಎಂದು ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದರು ಗುಮೆಹರ್. ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಗೆ ಈಗ ಅತ್ಯಾಚಾರ ಬೆದರಿಕೆ ಸೇರಿದಂತೆ ಸರಣಿ ಬೆದರಿಕೆಗಳು ಬರತೊಡಗಿವೆ. ಈ ಬಗ್ಗೆ ಖುದ್ದು ಕೌರ್ ಅವರು ಎನ್ ಡಿಟಿವಿಗೆ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+