ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿ ಕುಸಿದು ಬಿದ್ದ ಕಪಿಲ್ ಮಿಶ್ರಾ

Posted By:
Subscribe to Oneindia Kannada

ನವದೆಹಲಿ, ಮೇ 14: ಮನಿಲಾಂಡ್ರಿಂಗ್ ನಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ಆಮ್ ಅದ್ಮಿ ಪಕ್ಷಕ್ಕೆ ಬರುತ್ತಿರುವ ದೇಣಿಗೆಯಲ್ಲಿ ಭಾರಿ ಅವ್ಯವಹಾರ ಎಂದು ಆರೋಪಿಸಿದ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಕುಸಿದು ಬಿದ್ದಿದ್ದಾರೆ.

ಆಮ್ ಅದ್ಮಿ ಪಕ್ಷದ ಅವ್ಯವಹಾರ, ಭ್ರಷ್ಟಾಚಾರದ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿರುವ ಕಪಿಲ್ ಮಿಶ್ರಾ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

Kapil Mishra's fresh expose, claims Kejriwal involved in money laundering

ಭಾನುವಾರ ಬೆಳಗ್ಗೆ ಎಎಪಿಯ ದೇಣಿಗೆ ಸಂಗ್ರಹದ ಹುಳುಕು, ಭ್ರಷ್ಟಾಚಾರವನ್ನು ಬಯಲಿಗೆಳೆದ ನಂತರ ಮಿಶ್ರಾ ಕುಸಿದು ಬಿದ್ದರು. ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲ, ಕಪ್ಪು ಹಣವನ್ನು ಬಿಳಿಯನ್ನಾಗಿಸಲು ಈ ವಿಧಾನ ಬಳಸಲಾಗುತ್ತಿದೆ. ವಿದೇಶದಿಂದ ಎಎಪಿಗೆ ಬಂದಿರುವ ಹಣದ ಮೊತ್ತ ಬಹಿರಂಗವಾದರೆ ಕೇಜಿವಾಲ್ ಅವರು ತಿಹಾರ್ ಜೈಲು ಸೇರುವುದು ಖಚಿತ ಎಂದು ಮಿಶ್ರಾ ಅವರು ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fight between AAP chief Arvind Kejriwal and sacked minister Kapil Mishra has further intensified. Sacked AAP minister Kapil Mishra on Sunday addressed media in New Delhi.
Please Wait while comments are loading...