ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಜೆಎಸ್ ಖೇಹರ್

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 07: ಸುಪ್ರೀಂಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಜಗದೀಶ್‌ ಸಿಂಗ್ ಖೇಹರ್‌ ಅವರು ನೇಮಕವಾಗಲಿದ್ದಾರೆ. ಜನವರಿ 2017ರಿಂದ ಇವರ ಅಧಿಕಾರ ಅವಧಿ ಆರಂಭವಾಗಿ ಅಗಸ್ಟ್ 2017ರಲ್ಲಿ ಅಂತ್ಯವಾಗಲಿದೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಅವರು ಖೇಹರ್ ಹೆಸರನ್ನು ಶಿಫಾರಸು ಮಾಡಿದ್ದರು. ಟಿಎಸ್ ಠಾಕೂರ್ ಅವರ ಅವಧಿ ಜನವರಿ ತಿಂಗಳಿಗೆ ಮುಗಿಯಲಿದೆ.

Justice J S Khehar to be the 44th Chief Justice of India

ನ್ಯಾ. ಜೆಎಸ್ ಖೇಹರ್‌ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಠಾಕೂರ್‌ ಅವರು ಜನವರಿ 3ರಂದು ನಿವೃತ್ತರಾಗಲಿದ್ದಾರೆ. ಖೇಹರ್‌ ಅವರು 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಂಟು ತಿಂಗಳು ಅಂದರೆ ಮುಂದಿನ ಆಗಸ್ಟ್ 27ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳ ಪೈಕಿ ಹಿರಿಯವರಾಗಿರುವ ಖೇಹರ್‌ ಅವರು ಸಿಖ್‌ ಸಮುದಾಯದಿಂದ ಸಿ.ಜೆ ಐ ಹುದ್ದೆಗೇರುತ್ತಿರುವ ಮೊದಲ ಸಿಖ್ ನ್ಯಾಯಮೂರ್ತಿ ಎನಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Justice Jagdish Singh Khehar, who led the five-judge constitution bench in the Supreme Court which had struck down the controversial NJAC Act for appointment of judges, was today recommended as the 44th Chief Justice of India.
Please Wait while comments are loading...