ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಬಳಕೆಗೆ ಸಿದ್ಧ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ

|
Google Oneindia Kannada News

ನವದೆಹಲಿ, ಜೂನ್ 10: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರ ನಡೆಸುತ್ತಿರುವ ಸಿದ್ಧತೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ವರ್ಷಾಂತ್ಯಕ್ಕೆ ದೇಶದಲ್ಲಿ 200 ಕೋಟಿ ಡೋಸ್ ಬಳಕೆಗೆ ಲಭ್ಯವಾಗಲಿದೆ ಎಂದಿದ್ದಾರೆ.

ಅರುಣಾಚಲ ಪ್ರದೇಶ ಬಿಜೆಪಿ ಕಚೇರಿಯನ್ನು ಜೆಪಿ ನಡ್ಡಾ ಅವರು ವರ್ಚುವಲ್ ವೇದಿಕೆಯಲ್ಲಿ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ ವರ್ಷ ಭಾರತದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯವಿತ್ತು. ಆದರೆ ಈಗ ಆ ಸಂಖ್ಯೆ 1500ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ 15 ದಿನಗಳ ಕೊರೊನಾ ಸಾಂಕ್ರಾಮಿಕ ರಜೆ ಘೋಷಣೆ ಕೇಂದ್ರ ಸರ್ಕಾರಿ ನೌಕರರಿಗೆ 15 ದಿನಗಳ ಕೊರೊನಾ ಸಾಂಕ್ರಾಮಿಕ ರಜೆ ಘೋಷಣೆ

"ಇಂದು ಪ್ರತಿ ನಿತ್ಯವೂ 25 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿದ್ದು ಒಟ್ಟು 2500 ಲ್ಯಾಬ್‌ಗಳು ಇವೆ. ಭಾರತ ಸರ್ಕಾರ ನಡೆಸುತ್ತಿರುವ ಸಿದ್ಧತೆಗಳು ಅದ್ಭುತವಾಗಿದ್ದು ಇದು ಭಾರತ ಬಲಗೊಳ್ಳುತ್ತಿರುವುದರ ಮೂಲಕ ವ್ಯಕ್ತವಾಗುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಯನ್ನು ನೀಡಿದ್ದಾರೆ.

JP Nadda say that 200 crore dose of Covid 19 vaccones will be ready by December

"9 ತಿಂಗಳ ಅವಧಿಯಲ್ಲಿ ಎರಡು ಲಸಿಕೆ, ಭಾರತದ ಇತಿಹಾಸದಲ್ಲಿ ಇದು ಅಭೂತಪೂರ್ವ ಹೆಜ್ಜೆ. ಆರಂಭದಲ್ಲಿ ಕೇವಲ ಎರಡು ಕಂಪನಿಗಳು ಮಾತ್ರವೇ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದವು. ಈಗ 13 ಕಂಪನಿಗಳು ಭಾರತದಲ್ಲಿ ಲಸಿಕೆಯನ್ನು ಸಿದ್ಧಪಡಿಸುತ್ತಿವೆ. ಡಿಸೆಂಬರ್‌ ವೇಳೆಗೆ 19 ಕಂಪನಿಗಳು ಲಸಿಕೆಯನ್ನು ಸಿದ್ಧಪಡಿಸಲಿದ್ದು 200 ಕೋಟಿ ಡೋಸ್ ಲಸಿಕೆ ಬಳಕೆಗೆ ಸಿದ್ಧವಾಗಲಿದೆ" ಎಂದು ಜೆಪಿ ನಡ್ಡಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಪ್ರಧಾನಿ ಘೋಷಿಸಿದ್ದು ಲಸಿಕೆ ಹಂಚಿಕೆ ನೀತಿಯನ್ನು ಕೇಂದ್ರೀಕೃತಗೊಳಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಆಡಳಿತ ಪ್ರದೇಶಗಳಿಗೆ ಖರೀದಿಸಿ ಹಂಚಿಕೆ ಮಾಡಲಿದೆ. ಕಳೆದ ಭಾನುವಾರ ಪ್ರಧಾನಿ ಮೋದಿ ಈ ಘೋಷಣೆಯನ್ನು ಮಾಡಿದ್ದರು. ಇದಾದ ನಂತರ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ಲಸಿಕೆ ಖರೀದಿಗೆ ಆರ್ಡರ್ ಮಾಡಿದೆ. 25 ಕೋಟಿ ಕೋವಿಶೀಲ್ಡ್ ಹಾಗೂ 19 ಕೋಟಿ ಕೋವಾಕ್ಸಿನ್ ಡೋಸ್‌ಗಳಿಗೆ ಕೇಂದ್ರ ಸರ್ಕಾರ ಹೊಸದಾಗಿ ಆರ್ಡರ್ ಮಾಡಿದೆ.

English summary
BJP president JP Nadda praises centre for preparation of covid situation and says 200 crore dose of Covid 19 vaccine will be ready by December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X