ಮಕ್ಕಳ ಎದುರಲ್ಲೆ ಪತ್ರಕರ್ತನ ತಲೆಗೆ ಗುಂಡಿಕ್ಕಿದ ದುಷ್ಕರ್ಮಿಗಳು

ದೆಹಲಿ, ಜುಲೈ 21: ಸೋಮವಾರ ರಾತ್ರಿ 10.30ಕ್ಕೆ ಪತ್ರಕರ್ತನ ತಲೆಗೆ ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿರುವ ಘಟನೆ ದೆಹಲಿಯ ಘಜಿಯಾಬಾದ್‌ನಲ್ಲಿ ನಡೆದಿದೆ.

Recommended Video

      ದಕ್ಷಿಣ ಕನ್ನಡದಲ್ಲಿ ಮತ್ತೆ ಲಾಕ್ ಡೌನ್ !?

      ಘಜಿಯಾಬಾದ್‌ನಲ್ಲಿ ಸಹೋದರಿ ಮನೆಯಿಂದ ತನ್ನ ಇಬ್ಬರು ಮಕ್ಕಳ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದಾಳಿ ನಡೆಸಿರುವ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

      ಪತ್ರಕರ್ತನ ತಲೆಗೆ ಗುಂಡೇಟು ಬಿದ್ದಿದ್ದು ಅವರ ಸ್ಥಿತಿ ಗಂಭೀರವಾಗಿದ್ದು, ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ. ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಪೈಕಿ ಐವರು ಪತ್ರಕರ್ತನ ಕುಟುಂಬಕ್ಕೆ ಪರಿಚಿತರು ಎಂದು ಹೇಳಲಾಗಿದೆ.

      Journalist was shot at by unidentified men at Ghaziabad

      ಸಿಸಿಟಿವಿಯ ದೃಶ್ಯದಲ್ಲಿ ಕಂಡು ಬಂದಿರುವಂತೆ ಪತ್ರಕರ್ತ ವಿಕ್ರಂ ಜೋಶಿ ಬೈಕು ವೇಗವಾಗಿ ಚಲಿಸುತ್ತಿರುವ ವೇಳೆ ದುಷ್ಕರ್ಮಿಗಳ ಗುಂಪು ವಾಹನವನ್ನು ಅಡ್ಡಗಟ್ಟಿ, ಸುತ್ತುವರೆದಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ. ಸುತ್ತಲೂ ಆವರಿಸಿ ಥಳಿಸಿದ್ದಾರೆ. ಅದರಲ್ಲಿ ಓರ್ವ ಗನ್‌ನಿಂದ ಶೂಟ್ ಮಾಡಿದ್ದಾನೆ.

      ತನ್ನ ಸೊಸೆಗೆ ಕೆಲವು ಪುರುಷರು ತೊಂದರೆ ನೀಡುತ್ತಿದ್ದಾರೆ ಎಂದು ಬಿಜಯ ನಗರ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ವಿಕ್ರಂ ಜೋಶಿ ಈ ಹಿಂದೆ ದೂರು ನೀಡಿದ್ದರು. ಬಹುಶಃ ಈ ದೂರಿನ ಹಿನ್ನೆಲೆ ಈ ದಾಳಿ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ತನಿಖೆ ಸಹ ನಡೆಯುತ್ತಿದೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+