• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು?

|

ನವದೆಹಲಿ, ಆಗಸ್ಟ್ 06: ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರವಾಗಿದ್ದ ಜಮ್ಮು ಕಾಶ್ಮೀರ ವಿಭಜನೆ ವಿಧೇಯಕವು ಇಂದು ಲೋಕಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರವಾಗಿದೆ.

ನಿನ್ನೆಯಿಂದಲೂ ಲೋಕಸಭೆ ಯಲ್ಲಿ ಚರ್ಚೆ ನಡೆದ ಬಳಿಕ ಇಂದು ಸಂಜೆ ವಿಧೇಯಕವನ್ನು ಸ್ಪೀಕರ್ ಓಮ್ ಬಿರ್ಲಾ ಅವರು ಮೊದಲಿಗೆ ದ್ವನಿ ಮತಕ್ಕೆ ಹಾಕಿದರು. ಆ ನಂತರ ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಯಿತು.

ಕಾಶ್ಮೀರ ಕುರಿತು ಕೈ ಮುಖಂಡನ ಹೇಳಿಕೆಗೆ ಸೋನಿಯಾ ಅಸಮಾಧಾನ: ಶಾ ಕೊಟ್ಟರು ದಿಟ್ಟ ಉತ್ತರಕಾಶ್ಮೀರ ಕುರಿತು ಕೈ ಮುಖಂಡನ ಹೇಳಿಕೆಗೆ ಸೋನಿಯಾ ಅಸಮಾಧಾನ: ಶಾ ಕೊಟ್ಟರು ದಿಟ್ಟ ಉತ್ತರ

ವಿಧೇಯಕದ ಪರವಾಗಿ ಒಟ್ಟು 370 ಮತಗಳು ಬಂದವು, ವಿಧೇಯಕದ ವಿರುದ್ಧವಾಗಿ 70 ಮತಗಳು ಬಂದಿವೆ. ಸದನದಲ್ಲಿ ಇಂದಿನ ಒಟ್ಟು ಸಂಖ್ಯೆ 440 ಆಗಿತ್ತು.

ವಿಶೇಷವೆಂದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ನೀಡಿದ್ದ 370 ನೇ ವಿಧಿಯನ್ನು ರದ್ದು ಮಾಡುವ ವಿಧೇಯಕಕ್ಕೆ ಬರೋಬ್ಬರಿ 370 ಮತಗಳೇ ಪರವಾಗಿ ಬಂದಿವೆ. 70 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ನನ್ನನ್ನು ಬಂಧಿಸಲಾಗಿತ್ತು, ಶಾ ಸುಳ್ಳು ಹೇಳಿದ್ದಾರೆ: ಫಾರೂಕ್ ಅಬ್ದುಲ್ಲಾ ನನ್ನನ್ನು ಬಂಧಿಸಲಾಗಿತ್ತು, ಶಾ ಸುಳ್ಳು ಹೇಳಿದ್ದಾರೆ: ಫಾರೂಕ್ ಅಬ್ದುಲ್ಲಾ

ಮಸೂದೆ ಅಂಗೀಕಾರವಾಗುತ್ತಲೆ, ಸದನದಲ್ಲಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಮಸೂದೆ ಮಂಡಿಸಿದ ಅಮಿತ್ ಶಾ ಅವರಿಗೆ ಅಭಿನಂದನೆಗಳ ಸುರಿಮಳೆ ಸುರಿಸಲಾಯಿತು. ನಿನ್ನೆ ರಾಜ್ಯಸಭೆಯಲ್ಲೂ ಸಹ ಈ ಮಸೂದೆ ಬಹುಮತದಿಂದ ಅಂಗೀಕಾರವಾಗಿತ್ತು.

English summary
Jammu and Kashmir division bill approved in Lok Sabha by 370 votes. 70 MPs voted against the bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X