ಮತ್ತೊಮ್ಮೆ ವಿಶೇಷ ಅಧಿವೇಶನ ನಡೆಸಿ: ನಾಯ್ಡುಗೆ ಜೈರಾಮ್ ಪತ್ರ

ನವದೆಹಲಿ, ಏಪ್ರಿಲ್ 07: ಮಹತ್ವದ ಶಾಸನವೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮೇ-ಜೂನ್ ನಲ್ಲಿ ಸುಮಾರು ಎರಡು ವಾರಗಳ ವಿಶೇಷ ಅಧಿವೇಶನ ನಡೆಸುವಂತೆ ಕೋರಿ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

"ಮುಂಗಾರು ಅಧಿವೇಶನವನ್ನು ಸಾಮಾನ್ಯವಾಗಿ ಜುಲೈ ಮಧ್ಯಭಾಗದಲ್ಲಿ ಕರೆಯಲಾಗುತ್ತದೆ ಎಮಬುದು ನನಗೆ ತಿಳಿದಿದೆ. ಆದರೆ ಈ ವಿಶೇಷ ಅಧಿವೇಶನ ನಡೆಸುವುದರಿಂದ ವಿಶಿಷ್ಟ ಸಂದೇಶ ಸಿಕ್ಕಂತಾಗುತ್ತದೆ" ಎಂದು ತಮ್ಮ ಮನವಿ ಪತ್ರದಲ್ಲಿ ಅವರು ಬರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ವಿಜಯ್ ಗೋಯಲ್, 'ಅಧಿವೇಶನ ನಡೆಯುವಾಗ ಅಡ್ಡಿಪಡಿಸುವುದೂ ಅವರೇ(ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು). ಈಗ ಮತ್ತೊಮ್ಮೆ ಅಧಿವೇಶನ ಮಾಡುವುದಕ್ಕೆ ಹೇಳುವವರೂ ಅವರೇ. ಅವರಿಗೆ ಮತ್ತೆ ಸಂಬಳ ಮತ್ತು ಭತ್ಯೆ ಬೇಕಾಗಿದೆಯೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಒಂದು ವಾರದ ಹಿಂದೆ ನಡೆದ ಸಂಸತ್ ಅಧಿವೇಶನವನ್ನು ಸರಿಯಾಗಿ ಒಂದು ದಿನವೂ ನಡೆಯುವುದಕ್ಕೆ ಬಿಡದೆ, ಅಧಿವೇಶನ ಸಂಪೂರ್ಣ ಅನವಶ್ಯಕವಾಗುವಂತೆ ವಿಪಕ್ಷಗಳು ಮಾಡಿದ್ದವು. ಆಡಳಿತ ಪಕ್ಷವನ್ನು ದೂರುವ ನೆಪದಿಂದಲೇ ಸಾಕಷ್ಟು ಪ್ರತಿಭಟನೆಗಳ ಸಂಸತ್ತಿನೊಳಗೂ ಹೊರಗೂ ನಡೆದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+