ಜಹಾಂಗೀರ್ಪುರಿ ಹಿಂಸಾಚಾರ: ಇದು ಬಡ ಮುಸ್ಲಿಮರನ್ನು ಶಿಕ್ಷಿಸುವ ಕ್ರಮ ಎಂದ ಓವೈಸಿ

ನವದೆಹಲಿ ಏಪ್ರಿಲ್ 20: ಹನುಮ ಜಯಂತಿಯಂದು ಹಿಂಸಾಚಾರ ನಡೆದ ಜಹಾಂಗೀರ್ಪುರಿ ಪ್ರದೇಶದಲ್ಲಿನ ಆಕ್ರಮಿತ ಕಟ್ಟಡಗಳನ್ನು ತೆರವುಗೊಳಿಸಿರುವುದನ್ನು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. ಇದು ಬಡ ಮುಸ್ಲಿಮರನ್ನು ಶಿಕ್ಷಿಸುವ ಕ್ರಮ ಎಂದು ಬಿಜೆಪಿಯನ್ನು ಟೀಕಿಸಿದ ಓವೈಸಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ ಬಡವರ ವಿರುದ್ಧ ಸಮರ ಸಾರಿದೆ. ಉದ್ಯೋಗದ ಹೆಸರಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶದಂತೆ ದೆಹಲಿಯಲ್ಲಿ ಮನೆಗಳನ್ನು ಕೆಡವಲು ಹೊರಟಿದೆ. ಇದು ಕೇವಲ ಪೂರ್ವ ಸೂಚನೆಯಿಲ್ಲದೆ, ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲದೆ ಬದುಕಲು ಧೈರ್ಯವಿರುವ ಬಡ ಮುಸ್ಲಿಮರನ್ನು ಶಿಕ್ಷಿಸುವ ಕ್ರಮವಾಗಿದೆ. ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಾತ್ರವನ್ನು ಸ್ಪಷ್ಟಪಡಿಸಬೇಕು. ಇದು ಸರ್ಕಾರದ ಜನಸೇವೆಯೇ? ಇಂತಹ ದ್ರೋಹಗಳಿಗೆ, ಹೇಡಿತನಕ್ಕೆ ಜಾಹೀಂಗೀರಪುರಿಯ ಜನ ಇವರಿಗೆ(ಅರವಿಂದ್ ಕೇಜ್ರಿವಾಲ್) ಮತ ಹಾಕಿದ್ದಾರಾ? ಪೊಲೀಸ್ ಇಲಾಖೆ ನಮ್ಮ ಹಿಡಿತದಲ್ಲಿಲ್ಲ ಎಂದು ಹೇಳಲು ಅವರಿಗೆ(ಅರವಿಂದ್ ಕೇಜ್ರಿವಾಲ್) ಇಲ್ಲಿ ಜಾಗವಿಲ್ಲ' ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಕಳೆದ ಶನಿವಾರ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಎರಡು ಕಡೆಯವರ ನಡುವೆ ಘರ್ಷಣೆ ನಡೆಯಿತು. ನಂತರ ಅದು ಹಿಂಸಾತ್ಮಕ್ಕೆ ತಿರುಗಿತು. ಹೀಗಾಗಿ ವಾಹನಗಳು ಜಖಂಗೊಂಡವು. ಈ ಘಟನೆಯಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಎರಡೂ ಸಮುದಾಯದ ಕಡೆಯಿಂದ 23 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ತನಿಖೆ ನಡೆಸಲಾಗುತ್ತಿದೆ.

 Jahangirpuri violence: Asaduddin Owaisi tweet againest Arvind Kejriwal

ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ, "ನಾವು ದುಷ್ಕರ್ಮಿಗಳು ಯಾರೇ ಆಗಿದ್ದರೂ ಯಾವುದೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ವದಂತಿಗಳನ್ನು ಹರಡದಂತೆ ಮತ್ತು ಶಾಂತಿ ಕದಡದಂತೆ ನಾವು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ"ಎಂದು ಅವರು ಹೇಳಿದರು.

ಇದರ ನಡುವೆ ಜಹಾಂಗೀರಪುರಿ ಪ್ರದೇಶದಲ್ಲಿನ ಒತ್ತುವರಿ ಪ್ರದೇಶವವನ್ನು ತೆರವುಗೊಳಿಸಲು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿತ್ತು. ಈ ವೇಳೆ ಭದ್ರತೆ ನೀಡುವಂತೆ ಪಾಲಿಕೆ ವತಿಯಿಂದ ದೆಹಲಿಯ ವಾಯುವ್ಯ ವಲಯದ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಜೊತೆಗೆ ಲೋಕೋಪಯೋಗಿ ಇಲಾಖೆ, ಸ್ಥಳೀಯಾಡಳಿತ, ಪೊಲೀಸ್, ಆರೋಗ್ಯ ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಹಾಂಗೀರಪುರಿ ಪ್ರದೇಶದಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 19 ಅಥವಾ ಏಪ್ರಿಲ್ 20 ಮತ್ತು 21 ರಂದು ತೆರವುಗೊಳಿಸುವ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿತ್ತು.

 Jahangirpuri violence: Asaduddin Owaisi tweet againest Arvind Kejriwal

ಇದರ ಬೆನ್ನಲ್ಲೇ ಇಂದು ಜಹಾಂಗೀರಪುರಿ ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಜೆಸಿಬಿ ವಾಹನಗಳು ಆಗಮಿಸಿದ್ದವು. ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಒತ್ತುವರಿ ಕಟ್ಟಡಗಳನ್ನು ತೆಗೆಯುವ ಕಾರ್ಯ ಆರಂಭವೂ ಆಗಿತ್ತು. ಆದರೆ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಿ ಸುಪ್ರೀಂ ಕೋರ್ಟ್ ಬುಧವಾರ ಯಥಾಸ್ಥಿತಿಗೆ ಆದೇಶಿಸಿದೆ. ತೆರವು ಕಾರ್ಯಚರಣೆಯನ್ನು ಆಜಾದ್ ಓವೈಸಿ ತೀವ್ರವಾಗಿ ಖಂಡಿಸಿದೆ. ಬಿಜೆಪಿಯನ್ನು ಟೀಕಿಸಿರುವ ಅವರು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+